ಬೆಂಗಳೂರು:ಪೊಲೀಸ್ ಇಲಾಖೆಯ ಮಾನವ ಸಂಪನ್ಮೂಲ ಸಾಮರ್ಥ್ಯ ಹೆಚ್ಚಳ ಹಾಗೂ ಪೊಲೀಸರಿಗೆ ರಜೆ ಸೌಲಭ್ಯ ದೊರಕಿಸಿಕೊಡುವ ಉದ್ದೇಶದಿಂದ ಡಿಜಿಪಿ ಪ್ರವೀಣ್ ಸೂದ್ ಹೊಸ ಆದೇಶ ಹೊರಡಿಸಿದ್ದು, ಭಾನುವಾರ, 2ನೇ ಮತ್ತು 4ನೇ ಶನಿವಾರದ ಸಾರ್ವತ್ರಿಕ ರಜೆ ಪಡೆಯುವ ಸಿಬ್ಬಂದಿಗೆ 15 ಸಾಂರ್ದಭಿಕ ರಜೆಗಳ ಬದಲು 10 ರಜೆ ನಿಗದಿಪಡಿಸಲಾಗಿದೆ.
ಕಾರ್ಯಕಾರಿ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿ ಹೊರತುಪಡಿಸಿ ಉಳಿದವರಿಗೆ ಎಲ್ಲ ಭಾನುವಾರ, 2ನೇ ಮತ್ತು 4ನೇ ಶನಿವಾರಗಳ ಸಾರ್ವತ್ರಿಕ ರಜೆ ಸೌಲಭ್ಯ ಒದಗಿಸುವಂತೆ ಆದೇಶಿಸಲಾಗಿದೆ. ಕಾರ್ಯಕಾರಿ ಹುದ್ದೆಗಳಲ್ಲಿರುವ ಸಿಬ್ಬಂದಿಗೆ ಮಾಸಿಕ 6 ಅಥವಾ 7 ರಜೆ (ತಿಂಗಳಲ್ಲಿ 5 ಭಾನುವಾರ ಇದ್ದರೆ) ಕೊಟ್ಟರೆ ದೈನಂದಿನ ಕಾರ್ಯಕಲಾಪಗಳ ನಿರ್ವಹಣೆಗೆ ಅಡ್ಡಿಯಾಗುತ್ತದೆ. ಆದ್ದರಿಂದ ಇಂತಹ ಸಿಬ್ಬಂದಿಗೆ ಮಾಸಿಕ 2 ವಾರದ ಭತ್ಯೆ ಪಡೆದುಕೊಳ್ಳಲು ಅನುಮತಿ ನೀಡಲಾಗಿದೆ.
2019ರಲ್ಲಿ 2ನೇ ಮತ್ತು 4ನೇ ಶನಿವಾರ ಸಾರ್ವತ್ರಿಕ ರಜೆ ಘೋಷಣೆ ಮಾಡಿದ್ದರಿಂದ ಸರ್ಕಾರಿ ನೌಕರರಿಗಿದ್ದ ಸಾಂರ್ದಭಿಕ ರಜೆಗಳನ್ನು 15ರಿಂದ 10ಕ್ಕೆ ಇಳಿಕೆ ಮಾಡಿ ಸರ್ಕಾರ ಆದೇಶಿಸಿತ್ತು. ಆದರೆ, ಸರಿಯಾಗಿ ವಾರದ ರಜೆಯನ್ನೇ ಪಡೆಯಲು ಅವಕಾಶವಿಲ್ಲದ ಪೊಲೀಸ್, ಶಿಕ್ಷಣ ಮತ್ತು ಆರೋಗ್ಯ ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಯಿಂದ ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ಮೂರೂ ಇಲಾಖೆಗಳ ನೌಕರರಿಗೆ ಮಾತ್ರ 2020ರಿಂದ ಅನ್ವಯ ಆಗುವಂತೆ ಮತ್ತೆ 15 ದಿನಕ್ಕೆ ಸಾಂರ್ದಭಿಕ ರಜೆಗಳನ್ನು ಏರಿಸಲಾಗಿತ್ತು.
ಜಿಲ್ಲೆ, ಪೊಲೀಸ್ ಕಮಿಷನರೇಟ್, ಕೆಎಸ್​ಆರ್​ಪಿ ಮತ್ತು ಕೆಎಸ್​ಐಎಸ್​ಎಫ್​ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರತಿಯೊಬ್ಬ ಕಾನ್​ಸ್ಟೇಬಲ್, ಹೆಡ್ ಕಾನ್​ಸ್ಟೇಬಲ್​ಗಳಿಗೆ ಎಸ್​ಪಿ ದರ್ಜೆ ಅಧಿಕಾರಿಯಿಂದ ಮಾಸಿಕ ಕನಿಷ್ಟ 4 ವಾರದ ರಜೆ ನೀಡಲು ಅನುಮತಿ ನೀಡಲಾಗಿದೆ.
ಪೊಲೀಸರಿಗೂ ಭಾವನೆಗಳಿವೆ. ಮಕ್ಕಳ ಶಾಲಾ ಪ್ರವೇಶಾತಿ, ಬ್ಯಾಂಕ್​ನಲ್ಲಿ ಕೆಲಸ, ಸರ್ಕಾರದ ಇತರ ಇಲಾಖೆಯ ಕಚೇರಿಗಳಲ್ಲಿ ವೈಯಕ್ತಿಕ ಅಥವಾ ಕುಟುಂಬಕ್ಕೆ ಸಂಬಂಧಿಸಿದ ಕೆಲಸ- ಕಾರ್ಯಗಳಿರುತ್ತವೆ. ಹೊಸ ಪದ್ಧತಿಯಂತೆ ಸಾರ್ವತ್ರಿಕ ರಜೆ ದಿನದಂತೆ ಕಡ್ಡಾಯವಾಗಿ ರಜೆ ಪಡೆಯಬೇಕು ಎಂಬುದು ಸರಿಯಲ್ಲ. ಹೊಸ ನಿಯಮದಿಂದ ಪೊಲೀಸರ ಮಾನಸಿಕತೆಯ ಮೇಲೆ ತುಂಬಾ ಪೆಟ್ಟು ಬೀಳುತ್ತದೆ.
| ಪೊಲೀಸ್ ಹೆಡ್ ಕಾನ್​ಸ್ಟೇಬಲ್
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve + 18 =
Remember me
