ಬೆಂಗಳೂರು:ನಿಲ್ಲಲೊಂದು ಶಾಶ್ವತ ನೆಲೆ, ತಲೆ ಮೇಲೊಂದು ಸೂರಿಲ್ಲದ ಅತಂತ್ರ ಬದುಕಿಗೆ ಮುಕ್ತಿ ಸಿಗುವ ಅಮೃತ ಕಾಲ ಸಮೀಪಿಸಿದೆ. ತಾಂಡಾ, ದೊಡ್ಡಿ, ಗೊಲ್ಲರಹಟ್ಟಿ ಗಳನ್ನು ಕಂದಾಯ ಗ್ರಾಮಗಳೆಂದು ಘೋಷಿಸಿ, ಖಾಸಗಿ ಜಮೀನಿನಲ್ಲಿ ತಾತ್ಕಾಲಿಕ ಬದುಕು ಕಟ್ಟಿಕೊಂಡ ಅಲೆಮಾರಿ ಕುಟುಂಬಗಳಿಗೆ ಹಕ್ಕುಪತ್ರ ವಿತರಿಸುವ ಮೂಲಕ ನೆಲೆ ಕಲ್ಪಿಸಲು ರಾಜ್ಯ ಸರ್ಕಾರ ದೃಢ ಹೆಜ್ಜೆ ಇರಿಸಿದೆ.
ನಿಯಮಾನುಸಾರ ಕ್ರಮ ವಹಿಸಿದ ನಂತರ ತಾಂತ್ರಿಕ ಕಾರಣಗಳಿಗೆ ವಿಳಂಬ ಮಾಡದೆ, ಹಕ್ಕುಪತ್ರ ವಿತರಣೆ ಹಾಗೂ ಕಂದಾಯ ಗ್ರಾಮ ಘೋಷಣೆ ಪ್ರಕ್ರಿಯೆಗಳನ್ನು ಏಕಕಾಲಕ್ಕೆ ನಿಭಾಯಿಸುವಂತೆ ಜಿಲ್ಲಾಡಳಿತಗಳಿಗೆ ಸರ್ಕಾರ ಮಂಗಳವಾರ ಸೂಚಿಸಿದೆ. ಜೀವನೋಪಾಯಕ್ಕೆ ಅವ ಲಂಬಿತ ಕಸುಬು ನೆಚ್ಚಿಕೊಂಡು ಊರೂರು ಅಲೆದು, ಸರ್ಕಾರಿ ಅಥವಾ ಖಾಸಗಿ ಜಮೀನಿನಲ್ಲಿ ತಾತ್ಪೂರ್ತಿಕ ವಸತಿ ಕಂಡುಕೊಂಡಿರುವ ನಿವಾಸಿಗಳಿಗೆ ಸುಭದ್ರ, ಸ್ವಾಭಿಮಾನದ ಬದುಕು ಕಲ್ಪಿಸಲು ಉದ್ದೇಶಿತ ‘ಕಂದಾಯ ಗ್ರಾಮ’ ಘೋಷಣೆ ಪೂರ್ವ ಕಸರತ್ತು ಚುರುಕುಗೊಂಡಿದೆ. ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸಿಯಾಗಿದ್ದು, ಸದ್ಯಕ್ಕೆ ಅಮೃತ ಕಾಲ ಚಾಲ್ತಿಯಲ್ಲಿದೆ.
ಬಹು ವರ್ಷಗಳ ಕಂದಾಯ ಗ್ರಾಮದ ಕನಸು ನನಸಾಗಿಸಲು ಸರ್ಕಾರ ನಿರ್ಧರಿಸಿದೆ. ಈ ಸಂದರ್ಭದಲ್ಲಿ ಸಾವಿರಾರು ಅಲೆಮಾರಿ ಕುಟುಂಬಗಳು ವಾಸವಿರುವ ಜಾಗದ ಹಕ್ಕುಪತ್ರ ನೀಡಿ, ವಿಶೇಷ ನೋಂದಣಿ ಅಭಿಯಾನ ನಡೆಸಲು ಚಿಂತನೆ ನಡೆಸಿದೆ. ಈಗಾಗಲೇ ಸಾವಿರಾರು ತಾಂಡಾ, ಗೊಲ್ಲರಹಟ್ಟಿ, ದೊಡ್ಡಿ ಮುಂತಾದವುಗಳನ್ನು ಗುರುತಿಸಿದೆ. 2016 ರಿಂದ ನಡೆದಿರುವ ಸಮೀಕ್ಷೆ, ದಾಖಲೆಗಳ ವಿಭಜನೆ ಪ್ರಕ್ರಿಯೆ ಅಂತಿಮಘಟ್ಟಕ್ಕೆ ತಲುಪಿದೆ.
ಮಾನದಂಡಗಳು:ತಾಂಡಾ, ಹಟ್ಟಿಗಳನ್ನು ಕಂದಾಯ ಗ್ರಾಮಗಳೆಂದು ಘೋಷಿಸಲು 1,000 ಎಕರೆ ಜಮೀನು, 50 ಕುಟುಂಬ ಅಥವಾ 250 ಜನಸಂಖ್ಯೆ ಹೊಂದಿರಬೇಕು.
ಏನೆಲ್ಲ ಪ್ರಯೋಜನಗಳು?:ಅಧಿಕೃತ ದಾಖಲೆಯಲ್ಲಿ ಸೇರ್ಪಡೆ, ಗ್ರಾಮಠಾಣ ವಿಸ್ತೀರ್ಣ ಗುರುತು. ಘೋಷಿತ ಕಂದಾಯ ಗ್ರಾಮದ ನಿವಾಸಿಗಳಿಗೆ 4,000 ಚದರ ಮೀಟರ್ ಮೀರದಂತೆ ಅಥವಾ ನೈಜ ಸ್ವಾಧೀನದ ನಿವೇಶನದ ಹಕ್ಕುಪತ್ರ, ನೋಂದಣಿಗೆ ಅವಕಾಶ. ಒಡೆತನದ ನಿವೇಶನದಲ್ಲಿ ಮನೆ ಕಟ್ಟಿಕೊಳ್ಳಲು, ಬ್ಯಾಂಕ್​ಗಳಲ್ಲಿ ಮನೆ ಸಾಲ, ರಾಜ್ಯ ಸರ್ಕಾರದ ವಿವಿಧ ಸವಲತ್ತುಗಳು ಲಭಿಸಲಿವೆ.
ಯಾರಿಗೆ ಅನುಕೂಲ?:ತಾಂಡಾ, ಗೊಲ್ಲರಹಟ್ಟಿ, ನಾಯಕರಹಟ್ಟಿ, ಕುರುಬರಹಟ್ಟಿ, ಹಾಡಿ, ಮಜರೆ, ದೊಡ್ಡಿ, ಪಾಳ್ಯ, ಕ್ಯಾಂಪ್, ಕಾಲನಿ ಇತ್ಯಾದಿ ಹೆಸರುಗಳಿಂದ ಗುರುತಿ ಸಲ್ಪಟ್ಟ ದಾಖಲೆರಹಿತ ಜನವಸತಿಗಳು
ಏನೆಲ್ಲ ಪ್ರಯೋಜನಗಳು?:ಅಧಿಕೃತ ದಾಖಲೆಯಲ್ಲಿ ಸೇರ್ಪಡೆ, ಗ್ರಾಮಠಾಣ ವಿಸ್ತೀರ್ಣ ಗುರುತು. ಘೋಷಿತ ಕಂದಾಯ ಗ್ರಾಮದ ನಿವಾಸಿಗಳಿಗೆ 4,000 ಚದರ ಮೀಟರ್ ಮೀರದಂತೆ ಅಥವಾ ನೈಜ ಸ್ವಾಧೀನದ ನಿವೇಶನದ ಹಕ್ಕುಪತ್ರ, ನೋಂದಣಿಗೆ ಅವಕಾಶ. ಒಡೆತನದ ನಿವೇಶನದಲ್ಲಿ ಮನೆ ಕಟ್ಟಿಕೊಳ್ಳಲು, ಬ್ಯಾಂಕ್​ಗಳಲ್ಲಿ ಮನೆ ಸಾಲ, ರಾಜ್ಯ ಸರ್ಕಾರದ ವಿವಿಧ ಸವಲತ್ತುಗಳು ಲಭಿಸಲಿವೆ.
ಇನ್ನಷ್ಟು ಸ್ಪಷ್ಟತೆ, ವೇಗ:ತಾಂಡಾ, ಹಟ್ಟಿ, ದೊಡ್ಡಿ ಇತ್ಯಾದಿಗಳನ್ನು ಕಂದಾಯ ಗ್ರಾಮಗಳೆಂದು ಘೋಷಿಸಲು ಕಾಯ್ದೆ ಪ್ರಕಾರ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಕಂದಾಯ ಇಲಾಖೆ ಹಲವು ಸುತ್ತೋಲೆ ನೀಡಿದೆ. ಪೂರ್ವಭಾವಿ ಆಡಳಿತಾತ್ಮಕ ಪ್ರಕ್ರಿಯೆ ತ್ವರಿತಕ್ಕೆ ಮಾರ್ಗಸೂಚಿಯಲ್ಲಿ ಪ್ರಸ್ತಾಪಿತ ಅಂಶಗಳಿಗೆ ಸ್ಪಷ್ಟತೆ ನೀಡಿದ್ದು, ಜಿಲ್ಲಾಧಿಕಾರಿ, ಸಹಾಯಕ ಆಯುಕ್ತರು ಮತ್ತು ತಹಸೀಲ್ದಾರರ ಜವಾಬ್ದಾರಿ ತಿಳಿಸಲಾಗಿದೆ. ಕಂದಾಯ ಗ್ರಾಮಗಳ ರಚನಾ ಕೋಶ ನಿರ್ದೇಶಕ ಡಾ.ಎಂ.ಎನ್. ರಾಜೇಂದ್ರಪ್ರಸಾದ್ ಸುತ್ತೋಲೆಯಲ್ಲಿ 27 ಅಂಶಗಳನ್ನು ವಿವರಿಸಿದ್ದಾರೆ.
ಪ್ರಧಾನಿ ಬರ್ತಾರೆ, ಕಾಲೇಜು ವಿದ್ಯಾರ್ಥಿಗಳನ್ನೂ ಕರೆ ತನ್ನಿ; ‘ತಪ್ಪಿದರೆ ಪ್ರಾಂಶುಪಾಲರೇ ಹೊಣೆ’ ಎಂದೂ ಎಚ್ಚರಿಕೆ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 + 6 =
Remember me
