ಬೆಂಗಳೂರು:ಇನ್ನೊಂದೆರಡು ದಿನಗಳು ಕಳೆದರೆ ಎಲ್ಲೆಡೆ ದೀಪಗಳ ಸಂಭ್ರಮ ಕಾಣಿಸುತ್ತದೆ, ಪಟಾಕಿಯ ಸದ್ದು ಕೇಳಿಸುತ್ತದೆ. ಪಟಾಕಿಗಳನ್ನು ಸಿಡಿಸಿ ಜನರು ತಮ್ಮ ಹಬ್ಬದ ಸಂಭ್ರಮವನ್ನು ಹೆಚ್ಚಿಸಿಕೊಳ್ಳುವುದು ಸಹಜ. ಅದೇ ರೀತಿ ದೀಪಾವಳಿ ಸಂದರ್ಭದಲ್ಲಿ ಕಣ್ಣುಗಳಿಗೆ ಹಾನಿ ಆಗುವ ಜತೆಗೆ ಜನರು ಸುಟ್ಟಗಾಯಗಳಿಗೆ ಒಳಗಾಗುವ ಅಪಾಯ ಕೂಡ ಅಧಿಕ. ಈ ಹಿನ್ನೆಲೆಯಲ್ಲಿ ತಜ್ಞರು ಒಂದಷ್ಟು ಮುನ್ನೆಚ್ಚರಿಕೆಗಳನ್ನು ಸೂಚಿಸುತ್ತಾರೆ.
ದೀಪಾವಳಿ ಸಂದರ್ಭದಲ್ಲಿ ಪಟಾಕಿಗಳಿಂದ ಕಣ್ಣಿಗೆ ಗಾಯಗಳಾಗುವ ಪ್ರಕರಣ ಹೆಚ್ಚಾಗಿರುತ್ತದೆ. ದೀಪಾವಳಿಯಲ್ಲಿ ಕೈ ಮತ್ತು ಬೆರಳುಗಳ ನಂತರ ಕಣ್ಣುಗಳಿಗೇ ಅಪಾಯ ಜಾಸ್ತಿ. ಹೀಗಾಗಿ ಪಟಾಕಿಗಳ ಸಂತಸದಲ್ಲಿ ಕಣ್ಣಿನ ಸುರಕ್ಷತೆ ಬಗ್ಗೆಯೂ ಹೆಚ್ಚಿನ ಗಮನ ಇರಬೇಕು ಎಂದು ಡಾ.ಅಗರ್​​ವಾಲ್ಸ್​ ಕಣ್ಣಿನ ಆಸ್ಪತ್ರೆಯ ಕ್ಲಿನಿಕಲ್ ಸೇವೆಗಳ ಮುಖ್ಯಸ್ಥೆ ಡಾ.ಬಿಂದಿಯಾ ಹಪಾನಿ ತಿಳಿಸಿದ್ದಾರೆ.
ಇದನ್ನೂ ಓದಿ:ಯುವಕರೇಕೆ ಹೃದಯಾಘಾತಕ್ಕೆ ಒಳಗಾಗುತ್ತಿದ್ದಾರೆ ಎಂದು ಅಚ್ಚರಿಯೇ?: 70 ಗಂಟೆ ಕೆಲಸ.. ಮೂರ್ತಿ ವರ್ಸಸ್ ಮೂರ್ತಿ…
ಪಟಾಕಿಗಳನ್ನು ಸಿಡಿಸುವವರು ಮಾತ್ರವಲ್ಲದೆ ನೋಡುಗರಿಗೂ ಅಪಾಯವಿದ್ದು, ಅವರಲ್ಲಿ ಶೇ. 50ಕ್ಕೂ ಹೆಚ್ಚು ಜನರು ಸಂಭಾವ್ಯ ಕಣ್ಣಿನ ಗಾಯಗಳನ್ನು ಎದುರಿಸುತ್ತಾರೆ ಎಂದಿರುವ ಅವರು ಒಂದಷ್ಟು ಮುನ್ನೆಚ್ಚರಿಕೆ ಹಾಗೂ ಸಲಹೆ-ಸೂಚನೆಗಳನ್ನು ನೀಡಿದ್ದಾರೆ.
ಪಟಾಕಿಗಳಿಂದ ಕಣ್ಣುಗಳಿಗೆ ಆಗುವ ಗಾಯಗಳಿಂದ ಇಲ್ಲವೇ ಪಟಾಕಿ ಕಿಡಿಯ ಸ್ಪರ್ಶದಿಂದ ಕುರುಡುತನ ಉಂಟಾಗುವ ಸಾಧ್ಯತೆಯೂ ಇರುತ್ತದೆ. ಪಟಾಕಿಗಳಲ್ಲಿ ಗನ್ ಪೌಡರ್‌ನಲ್ಲಿ ಇರುವಂಥ ರಾಸಾಯನಿಕಗಳು ಇರುತ್ತವೆ. ಹೀಗಾಗಿ ಪಟಾಕಿ ಸಿಡಿಸುವ ಅಥವಾ ಸಿಡಿಸುವಂಥ ಜಾಗದಲ್ಲಿ ಹೋಗುವಾಗ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಎಂದೂ ಅವರು ಹೇಳಿದ್ದಾರೆ.
ಇದನ್ನೂ ಓದಿ:ಸಂಸತ್ತಿನ ಚಳಿಗಾಲದ ಅಧಿವೇಶನದ ದಿನಾಂಕ ನಿಗದಿ: ಎಂದಿನಿಂದ, ಎಷ್ಟು ದಿನ? ಇಲ್ಲಿದೆ ವಿವರ..
ಅದರಲ್ಲೂ ಕಾಂಟ್ಯಾಕ್ಟ್ ಲೆನ್ಸ್ ಧರಿಸುವವರು ಪಟಾಕಿಗಳನ್ನು ಸಿಡಿಸುವಾಗ ಹೆಚ್ಚಿನ ಎಚ್ಚರಿಕೆ ವಹಿಸಬೇಕು. ಏಕೆಂದರೆ ದೀರ್ಘಕಾಲದವರೆಗೆ ಶಾಖಕ್ಕೆ ಒಡ್ಡಿಕೊಳ್ಳುವುದು ಕಿರಿಕಿರಿಗೆ ಕಾರಣವಾಗಬಹುದು ಎಂದು ಡಾ. ಬಿಂದಿಯಾ ತಿಳಿಸಿದ್ದಾರೆ.


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − five =
Remember me
