ಶಿವಮೊಗ್ಗ: ಭದ್ರಾವತಿಯಿಂದ ಶಿವಮೊಗ್ಗಕ್ಕೆ 108 ಆಂಬುಲೆನ್ಸ್‌ನಲ್ಲಿ ಜಿಂಕೆ ಮಾಂಸ ಸಾಗಿಸುತ್ತಿದ್ದ ಪ್ರಕರಣವನ್ನು ಅರಣ್ಯ ಸಂಚಾರಿ ದಳದ ಸಿಬ್ಬಂದಿ ಬುಧವಾರ ಭೇದಿಸಿ, ಇಬ್ಬರು ಸ್ಟಾಫ್ ನರ್ಸ್‌ಗಳು ಸೇರಿ ಆರು ಜನರನ್ನು ಬಂಧಿಸಿದ್ದಾರೆ.
ಸ್ಟಾಫ್ ನರ್ಸ್‌ಗಳಾದ ಕುಮಾರ ನಾಯ್ಕ, ಗುಡ್ಡೆಕಲ್ ಬಾಲು, ಆಂಬುಲೆನ್ಸ್ ಚಾಲಕ ಸೈಯದ್, ಭದ್ರಾವತಿಯ ಮಂಜುನಾಥ, ಮೈಲಾರಿ ಹಾಗೂ ಮತ್ತೊಬ್ಬ ಬಂಧಿತರು. ಭದ್ರಾವತಿಯ ಆರ್ಮುಗಂ ಪರಾರಿಯಾಗಿದ್ದಾನೆ.
ಇದನ್ನೂ ಓದಿರೈತ ಮಹಿಳೆಗೆ ಅವಾಜ್ ಹಾಕಿದ ಸಚಿವ ಮಾಧುಸ್ವಾಮಿ!
ಭದ್ರಾವತಿಯಿಂದ 10 ಕೆಜಿ ಜಿಂಕೆ ಮಾಂಸವನ್ನು ತಲಾ ಒಂದೊಂದು ಕೆಜಿ ಪ್ಯಾಕ್ ಮಾಡಿ ಗೊಬ್ಬರ ಚೀಲದಲ್ಲಿ ತುಂಬಿ ಸಾಗಿಸಲಾಗುತ್ತಿತ್ತು. ಖಚಿತ ಮಾಹಿತಿ ಮೇರೆಗೆ ಸಂಚಾರಿ ದಳದ ಸಿಬ್ಬಂದಿ ಎಂಆರ್‌ಎಸ್ ಸರ್ಕಲ್‌ನಲ್ಲಿ ನಿಗಾ ವಹಿಸಿದ್ದರು.
ಆನಂತರ ಮಾರ್ಗ ಬದಲಿಸಿದ್ದ ಆರೋಪಿಗಳು ಅಗರದಹಳ್ಳಿ, ಹೊಳೆಹೊನ್ನೂರು ರಸ್ತೆಯಲ್ಲಿ ಶಿವಮೊಗ್ಗ ತಲುಪಿದ್ದರು. ಈ ಬಗ್ಗೆಯೂ ಮಾಹಿತಿ ಪಡೆದು ಹೊಳೆಹೊನ್ನೂರು ರೈಲ್ವೆ ಗೇಟ್ ಬಳಿ ಆಂಬುಲೆನ್ಸ್ ತಡೆದು ಪರಿಶೀಲಿಸಿದಾಗ ಜಿಂಕೆ ಮಾಂಸ ಪತ್ತೆಯಾಗಿದೆ. ಇವರು ಕಳೆದ ಏಳೆಂಟು ವರ್ಷಗಳಿಂದ ಇದೇ ವೃತ್ತಿ ಮಾಡುತ್ತಿರುವುದಾಗಿ ಎಂದು ತಪ್ಪೊಪ್ಪಿಕೊಂಡಿದ್ದಾರೆ.
ತಂಗಿ ಮಗನನ್ನೇ ಕರೆಸಿಲ್ಲ ನಾನು: ಸಚಿವ ನಾರಾಯಣಗೌಡ ಅಳಲು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × two =
Remember me
