ನವದೆಹಲಿ:ಏರೋ ಇಂಡಿಯಾ ಷೋ 2021 ಅನ್ನು ಬೆಂಗಳೂರಿನಲ್ಲೇ ಆಯೋಜಿಸುವುದಕ್ಕೆ ರಕ್ಷಣಾ ಸಚಿವಾಲಯ ತೀರ್ಮಾನಿಸಿದೆ. ಏಷ್ಯಾದ ಅತಿದೊಡ್ಡ ಏರೋಸ್ಪೇಸ್ ಎಕ್ಸಿಬಿಷನ್ ಎಂದು ಪರಿಗಣಿಸಲ್ಪಟ್ಟಿರುವ ಈ ಷೋ ಫೆಬ್ರವರಿಯಲ್ಲಿ ನಡೆಯಲಿದೆ.
ಮೂಲಗಳ ಪ್ರಕಾರ, ಈ ಪ್ರದರ್ಶನದ ಮುಖ್ಯ ಕಾರ್ಯಕ್ರಮವು ಫೆಬ್ರವರಿ 3-5ರ ತನಕ ನಡೆಯಲಿದೆ. ಏರ್​ಷೋ ಕಾರ್ಯಕ್ರಮವು ಫೆಬ್ರವರಿ 6 ಮತ್ತು 7 ರಂದು ನಡೆಯಲಿದ್ದು, ಸಾರ್ವಜನಿಕ ವೀಕ್ಷಣೆಗೆ ಅವಕಾಶವಿದೆ. ಈ ಷೋ ಸಂಬಂಧ ಆಂತರಿಕ ಸಭೆಯನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಶುಕ್ರವಾರ ನಡೆಸಿದ್ದರು. ಯಲಹಂಕಾ ವಾಯುನೆಲೆಯಲ್ಲಿ ಈ ಕಾರ್ಯಕ್ರಮವನ್ನು ಎಂದಿನಂತೆ ಆಯೋಜಿಸುವುದಕ್ಕೆ ಸಿದ್ಧತೆ ನಡೆಸುವ ವಿಚಾರ ಚರ್ಚೆಗೆ ಒಳಗಾಗಿದೆ. ಕರೊನಾ ವೈರಸ್ ಸೋಂಕಿಗೆ ಸಂಬಂಧಪಟ್ಟ ನಿಯಮ ಪಾಲನೆ ಮಾಡುತ್ತ ಈ ಕಾರ್ಯಕ್ರಮ ಆಯೋಜಿಸಲು ತೀರ್ಮಾನವಾಗಿದೆ.
ಇದನ್ನೂ ಓದಿ:ಬೆರಳತುದಿಯಲ್ಲಿ ಏರೋ ಇಂಡಿಯಾ ಮಾಹಿತಿ
ಏರ್​ ಷೋ 1996ರಲ್ಲಿ ಆರಂಭವಾಗಿದ್ದು, ಅಲ್ಲಿಂದ ಇಲ್ಲಿವರೆಗೆ ಏರ್​ಷೋ ಆತಿಥ್ಯವನ್ನು ಬೆಂಗಳೂರು ವಹಿಸುತ್ತ ಬಂದಿದೆ. ಆದ್ದರಿಂದ ಯಲಹಂಕ ವಾಯುನೆಲೆ ಏರ್​ಷೋ ಗೆ ಸಂಬಂಧಿಸಿದ ಸಾಂಪ್ರದಾಯಿಕ ಸ್ಥಳವಾಗಿ ಗುರುತಿಸಲ್ಪಟ್ಟಿದೆ. ಈ ಕಾರ್ಯಕ್ರಮದಲ್ಲಿ ರಕ್ಷಣಾ ಇಂಡಸ್ಟ್ರಿಯ ಹೂಡಿಕೆಗೆ ಭಾರತ ಸರಿಯಾದ ಸ್ಥಳ ಎಂಬುದನ್ನು ಸರ್ಕಾರ ಬಿಂಬಿಸಲಿದೆ. ಆ ಮೂಲಕ ಪ್ರಾದೇಶಿಕವಾಗಿ ರಕ್ಷಣಾ ಕೈಗಾರಿಕೆಗೆ ಉತ್ತೇಜನ ನೀಡುವ ಕೆಲಸಕ್ಕೆ ಮುಂದಾಗಿದೆ.ಮಾಹಿತಿಗೆ–ಏರೋ ಇಂಡಿಯಾ ಷೋ 2021(ಏಜೆನ್ಸೀಸ್)
ಕರ್ಕಶ ಮ್ಯೂಸಿಕ್​ ಗದ್ದಲದಿಂದ ಕೆರಳಿ, ಗಾಳಿಯಲ್ಲಿ ಗುಂಡು ಹಾರಿಸಿದ್ರು ಮಾಜಿ ಯೋಧ

https://www.vijayavani.net/%e0%b2%8f%e0%b2%b0%e0%b3%8b-%e0%b2%87%e0%b2%82%e0%b2%a1%e0%b2%bf%e0%b2%af%e0%b2%be%e0%b2%a6%e0%b2%b2%e0%b3%8d%e0%b2%b2%e0%b2%bf-%e0%b2%aa%e0%b2%b0%e0%b2%b6%e0%b3%81%e0%b2%b0%e0%b2%be%e0%b2%ae/
https://www.vijayavani.net/aero-india-likely-to-shift-from-bengaluru-yelahanka-air-force-station-to-lucknow/
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − twelve =
Remember me
