ರಾಮನಗರ:ಕನಕಪುರ ತಾಲೂಕಿನ ದೇಗುಲ ಮಠದ ನಿರ್ವಾಣಸ್ವಾಮಿ ವಿದ್ಯಾರ್ಥಿ ನಿಲಯದಿಂದ 6 ದಿನಗಳ ಹಿಂದೆ ನಾಪತ್ತೆಯಾಗಿದ್ದ ಮೂವರು ವಿದ್ಯಾರ್ಥಿಗಳು ನಿನ್ನೆ(ಭಾನುವಾರ) ರಾತ್ರಿ ಮಠಕ್ಕೆ ವಾಪಸ್​ ಬಂದಿದ್ದು, ಮಠದ ಸಿಬ್ಬಂದಿ ಹಾಗು ಪೋಷಕರು ನಿಟ್ಟುಸಿರು ಬಿಟ್ಟಿದ್ದಾರೆ.
ಮಠದ ವಿದ್ಯಾರ್ಥಿ ವಸತಿ ನಿಲಯದಲ್ಲಿ ವಾಸವಿದ್ದ ಆನೇಕಲ್​ ತಾಲೂಕಿನ ಅತ್ತಿಬೆಲೆ ಹೋಬಳಿಯ ಕೊಡ್ಲಿಪುರದ 9ನೇ ತರಗತಿಯ ಶಿವಕುಮಾರ(15), ಕಾರ್ತಿಕ್​ (15) ಹಾಗೂ ಬೆಂಗಳೂರಿನ ಪ್ರತಾಪ್​ (15) ನ.8ರಂದು ಕಾಣೆಯಾಗಿದ್ದರು. ನ.8 ರಂದು ಕನಕಪುರದಲ್ಲಿ ಓಡಾಡುತ್ತಿದ್ದಾರೆಂಬ ಮಾಹಿತಿ ಇದ್ದರೂ ಮಠದ ವಸತಿನಿಲಯಕ್ಕಾಗಲಿ, ಸಂಬಂಧಿಕರ ಮನೆಗಳಿಗಾಗಲಿ ಹೋಗದಿರುವುದು ಪಾಲಕರಲ್ಲಿ ತೀವ್ರ ಆತಂಕಕ್ಕೆ ಎಡೆಮಾಡಿತ್ತು. ಈ ಸಂಬಂಧ ಪಾಲಕರು ಮತ್ತು ಮಠದ ಆಡಳಿತವು ನ.11ರಂದು ಕನಕಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿತ್ತು. ಪೊಲೀಸರು ತನಿಖೆ ಕೈಗೊಂಡಿದ್ದರು.
ಮಠದ ವಿದ್ಯಾಥಿರ್ನಿಲಯದಿಂದ ಇದ್ದಕ್ಕಿದ್ದಂತೆ ವಿದ್ಯಾರ್ಥಿಗಳು ನಾಪತ್ತೆಯಾಗಿರುವ ಬಗ್ಗೆ ಸಮಗ್ರ ತನಿಖೆಯಾಗಬೇಕು. ವಿದ್ಯಾರ್ಥಿಗಳು ಎಲ್ಲಿದ್ದಾರೆ? ಹೇಗಿದ್ದಾರೆ? ಏತಕ್ಕಾಗಿ ಹೋಗಿದ್ದಾರೆ? ಎಂಬ ಬಗ್ಗೆ ಮಕ್ಕಳ ರಕ್ಷಣಾ ಘಟಕ, ಬಾಲ ನ್ಯಾಯಾಲಯ ಅಥವಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಸಮಗ್ರ ತನಿಖೆಯಾಗಿ ಪಾಲಕರಿಗೆ ನ್ಯಾಯ ಒದಗಿಸಬೇಕು ಎಂದು ನಾಗರಿಕರು ಒತ್ತಾಯಿಸಿದ್ದರು. ಈ ಸುದ್ದಿ ನಿನ್ನೆ ಮಾಧ್ಯಮಗಳಲ್ಲೂ ಪ್ರಸಾರವಾಗಿತ್ತು. ಭಾನುವಾರ(ಸೆ.13) ರಾತ್ರಿ ಮಠಕ್ಕೆ ಮೂವರು ಮಕ್ಕಳೂ ವಾಪಸ್ ಆಗಿದ್ದಾರೆ. ಸ್ನೇಹಿತನ ಮನೆಗೆ ತೆರಳಿದ್ದಾಗಿ ಹೇಳಿದ್ದಾರೆ.
ಗಂಡನ ಮನೆಗೆ ಹೋಗವ್ವಾ… ಎಂದು ತಾಯಿ ಬುದ್ಧಿಮಾತು ಹೇಳಿದ್ದೇ ತಪ್ಪಾ? ಮನನೊಂದು ಸಾವಿನ ಮನೆಯ ಕದ ತಟ್ಟಿದ ಮಗಳು

ಜಾತ್ರೆಯಂತಾದ ಒಕ್ಕಲಿಗರ ವಧು-ವರರ ಸಮಾವೇಶ: 25 ಸಾವಿರಕ್ಕೂ ಹೆಚ್ಚು ಮಂದಿ ಭಾಗಿ, ಆದಿಚುಂಚನಗಿರಿ ಮಠದ ಆವರಣದಲ್ಲಿ ಜನಜಂಗುಳಿ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:five × one =
Remember me
