ಬೆಂಗಳೂರು:ಹಿಟ್​ ಆ್ಯಂಡ್​ ರನ್​ಗೆ ಯುವಕರಿಬ್ಬರು ಮಂಗಳವಾರ ರಾತ್ರಿ ಬಲಿಯಾಗಿದ್ದು, ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದ ಅಪಘಾತದ ದೃಶ್ಯ ಬೆಚ್ಚಿಬೀಳಿಸುವಂತಿದೆ.
ಮಂಜುನಾಥ್​ ನಗರದ ನಿವಾಸಿಗಳಾದ ಗೌತಮ್ ಮತ್ತು ಶ್ರೀಕಾಂತ ಮೃತರು. ಸ್ವಿಗ್ಗಿ ಡೆಲಿವರಿ ಬಾಯ್​​ಗಳಾಗಿ ಕೆಲಸ ಮಾಡುತ್ತಿದ್ದ ಇವರು ನಿನ್ನೆ ರಾತ್ರಿ, ಜಾಲಹಳ್ಳಿ ವಿಲೇಜ್ ರಸ್ತೆಯ ಅಪಾರ್ಟ್ಮೆಂಟ್​ನಲ್ಲಿ ಊಟ ಡೆಲಿವರಿ ಕೊಟ್ಟು ವಾಪಸ್​ ಹೊರಡಲೆಂದು ಬೈಕ್​ ಹತ್ತಿದ ಕೆಲವೇ ಕ್ಷಣದಲ್ಲಿ ಹಿಂಬದಿಯಿಂದ ಬಂದ ಕಾರು ಡಿಕ್ಕಿ ಹೊಡೆದು ಪರಾರಿಯಾಗಿತ್ತು. ಕಾರು ಡಿಕ್ಕಿ ಹೊಡೆದ ರಭಸಕ್ಕೆ ಬೈಕ್​ನಿಂದ ಮೇಲಕ್ಕೆ ಹಾರಿ ಕೆಳಗೆ ಬಿದ್ದ ಯುವಕರಿಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದರು. ಹಸಿದವರ ಹೊಟ್ಟೆ ತುಂಬಿಸಲು ಹೋಗಿದ್ದವರು ಮಾರ್ಗಮಧ್ಯೆ ದುರ್ಮರಣಕ್ಕೀಡಾದ ಪ್ರಕರಣದ ತನಿಖೆ ಕೈಗೊಂಡ ಪೊಲೀಸರು, ಘಟನೆ ಸಂಭವಿಸಿ 24 ತಾಸು ಮುಗಿಯುವಲ್ಲಿ ಆ ಕಾರನ್ನು ಪತ್ತೆ ಹಚ್ಚಿದ್ದಾರೆ.
ಯಶವಂತಪುರ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಹಿಟ್ ಆ್ಯಂಡ್ ರನ್ ಕೇಸ್​ನ ಬೆನ್ನುಬಿದ್ದ ಪೊಲೀಸರಿಗೆ ಅಪಘಾತ ನಡೆದ ಸ್ಥಳದಲ್ಲಿ ನಂಬರ್ ಪ್ಲೇಟ್​ನ ಚೂರು ಸಿಕ್ಕಿತ್ತು. ಇದನ್ನೇ ಇಟ್ಟುಕೊಂಡು ಕಾರಿನ ನಂಬರ್ ಪತ್ತೆ ಹಚ್ಚಿದ್ದಾರೆ. ಸುಮಾರು 15 ಕಾರುಗಳ ಪರಿಶೀಲನೆ ಬಳಿಕ ಅಪಘಾತವೆಸಗಿದ ಕಾರಿನ ಮಾಲೀಕ ಸಿಕ್ಕಿದ್ದಾನೆ. ಮಾದನಾಯಕನಹಳ್ಳಿಯ ಭರತ್ ಎಂಬಾತನಿಗೆ ಈ ಕಾರು ಸೇರಿದ್ದು, ಅಪಘಾತದ ಬಳಿಕ ಮಾದಾವರ ಬಳಿ ಕಾರು ಬಿಟ್ಟು ಚಾಲಕ ಪರಾರಿಯಾಗಿದ್ದಾನೆ.
ನನ್ನ ಕಾರನ್ನು ಸ್ನೇಹಿತ ತೆಗೆದುಕೊಂಡು ಹೋಗಿದ್ದ ಎಂದು ಮಾಲೀಕ ಭರತ್, ಯಶವಂತಪುರ ಸಂಚಾರಿ ಪೊಲೀಸ್​ ಠಾಣೆಯಲ್ಲಿ ಹೇಳಿಕೆ ನೀಡಿದ್ದಾರೆ. ಕಾರು ಚಾಲಕನ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಸಿಲಿಕಾನ್​ ಸಿಟಿಯಲ್ಲಿ ಹಿಟ್​ ಆ್ಯಂಡ್​ ರನ್​ಗೆ ಯುವಕರಿಬ್ಬರು ಬಲಿಯಾಗಿದ್ದು, ಸಿಸಿಟಿವಿಯಲ್ಲಿ ಸೆರೆಯಾಗಿರುವ ಅಪಘಾತದ ದೃಶ್ಯ ನೋಡಿದ್ರೆ ಎಂಥವರ ಎದೆಯು ಒಂದು ಕ್ಷಣ ಝಲ್ ಎನ್ನುವಂತಿದೆ.#Bengaluru#DeliveryBoy#BikeAccident#RoadAccident#CarAccident#HitAndRunpic.twitter.com/poYoIpEcLk
— Vijayavani (@VVani4U)February 24, 2021

ಅಂದು ಪೊಲೀಸರು ಅವನನ್ನ ಚಪ್ಪಲಿ ಇಲ್ಲದೆ ನಿಲ್ಲಿಸಿದ್ರು, ಆಗ ಸಹಾಯಕ್ಕೆ ನಾನೇ ಬಂದೆ… ಇದನ್ನ ದರ್ಶನ್​ ನೆನೆಯಲಿ

ರಾಜ್ಯದಲ್ಲಿ ಈ ಭಾರಿ 110 ಜಿಲ್ಲಾ ಪಂಚಾಯಿತಿ ಕ್ಷೇತ್ರ ಹೆಚ್ಚಳ, 600 ತಾಪಂ ಕ್ಷೇತ್ರಗಳು ರದ್ದು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve + 5 =
Remember me
