ಬೆಂಗಳೂರು:ಆನ್‌ಲೈನ್‌ನಲ್ಲಿ ಖರೀದಿ ಮಾಡಿರುವ ವಸ್ತುವೊಂದನ್ನು ಮನೆಗೆ ಕೊಡಲು ಬಂದ ಡೆಲಿವರಿ ಬಾಯ್‌ ಒಬ್ಬನು ಯುವತಿಯನ್ನು ತಬ್ಬಿ ಲೈಂಗಿಕ ಕಿರುಕುಳ ನೀಡಿದ್ದಾನೆ!
ಈ ಘಟನೆ ನಡೆದಿರುವುದು ಬೆಂಗಳೂರಿನ ಗರುಡಾಚಾರ್ ಪಾಳ್ಯದಲ್ಲಿ. ಈ ಸಂಬಂಧ 25 ವರ್ಷದ ಯುವತಿ ಡೆಲಿವರಿ ಬಾಯ್‌ ಅರುಣ್ ಕುಮಾರ್ ಎಂಬಾತನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.
ಯುವತಿ ಆನ್‌ಲೈನ್‌ನಲ್ಲಿ ವಸ್ತುವೊಂದನ್ನು ಖರೀದಿಸಿದ್ದರು. ವಸ್ತು ಮನೆಗೆ ಸಾಗಿಸಿದ ಬಳಿಕ ಹಣವನ್ನು (ಕ್ಯಾಷ್‌ ಆನ್‌ ಡೆಲಿವರಿ) ನೀಡಬೇಕಿತ್ತು. ಆನ್‌ಲೈನ್‌ ಮೂಲಕ ಹಣ ಪಾವತಿ ಮಾಡಲು ಯುವತಿ ಟ್ರೈ ಮಾಡುತ್ತಿದ್ದಾಗ ನೆಟ್‌ವರ್ಕ್‌ ಸಮಸ್ಯೆಯಿಂದ ಹಣ ಪಾವತಿ ಕಷ್ಟವಾಗಲಿಲ್ಲ.
ಇದನ್ನೂ ಓದಿ:ಆನ್‌ಲೈನ್‌ ಕ್ಲಾಸ್‌: ಫೋನಿಗಾಗಿ ಜೀವನಾಧಾರ ಹಸು ಮಾರಿದ ಅಪ್ಪ!
ಅಷ್ಟರಲ್ಲಿಯೇ ಹೊಂಚುಹಾಕುತ್ತಿದ್ದ ಡೆಲಿವರಿ ಬಾಯ್‌ ನನಗೆ ತುರ್ತಾಗಿ ಬಾತ್‌ರೂಂಗೆ ಹೋಗಬೇಕಿದೆ, ನಿಮ್ಮ ಮನೆಯ ಶೌಚಗೃಹ ಬಳಸಬಹುದೇ ಕೇಳಿದ್ದಾನೆ. ಮಾನವೀಯತೆಯ ದೃಷ್ಟಿಯಿಂದ ಯುವತಿ ಒಪ್ಪಿಗೆ ಸೂಚಿಸಿದ್ದಾರೆ. ಅಲ್ಲಿಂದ ಹೊರಕ್ಕೆ ಬರುತ್ತಿದ್ದಂತೆಯೇ ವಿಚಿತ್ರವಾಗಿ ವರ್ತಿಸಿರುವ ಯುವಕ, ಅಲ್ಲಿರುವ ಸೋಫಾದ ಮೇಲೆ ಕುಳಿತುಕೊಂಡಿದ್ದಾನೆ. ಇದರಿಂದ ಸಿಟ್ಟುಗೊಂಡ ಯುವತಿ, ಹೀಗೆಲ್ಲಾ ಮಾಡಿದರೆ ತಾವು ಆರ್ಡರ್‌ ಕ್ಯಾನ್ಸಲ್‌ ಮಾಡುವುದಾಗಿ ಹೇಳಿದ್ದಾರೆ.
ನಂತರ ಹಾಗೆ ಮಾಡಲು ಸಾಧ್ಯವಿಲ್ಲ, ನೆಟ್‌ವರ್ಕ್‌ ಸಮಸ್ಯೆ ಇದ್ದರೆ ದುಡ್ಡು ಕೊಡಿ ಎಂದು ಯುವಕ ಕೇಳಿದ್ದಾನೆ. ದುಡ್ಡು ತರಲು ಯುವತಿ ಒಳಗೆ ಹೋದಾಗ ಹಿಂದಿನಿಂದ ಬಂದ ಯುವಕ ಯುವತಿಯನ್ನು ತಬ್ಬಿಕೊಂಡಿದ್ದಾನೆ. ತನ್ನತ್ತ ಸೆಳೆದುಕೊಳ್ಳಲು ಬಯಸಿದಾಗ ತಾನು ಅಲ್ಲಿಂದ ತಪ್ಪಿಸಿಕೊಂಡು ಹೊರಕ್ಕೆ ಓಡಿದೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಯುವತಿ ತಿಳಿಸಿದ್ದಾರೆ.
ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ಆತನ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ.
ಗಂಡನನ್ನು ನಾನೇ ಸಾಯಿಸಬೇಕೆಂದಿದ್ದೆ: ದುಬೆ ಹೆಂಡತಿ ಉವಾಚ..!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 + 8 =
Remember me
