ಬೆಂಗಳೂರು:ಕರ್ನಾಟಕ ರಾಜ್ಯ ಸರಕಾರ ಹಿಂದೂ ದೇವಸ್ಥಾನಗಳಿಗೆ ಮಾತ್ರ ಶೇ.10 ರಷ್ಟು ತೆರಿಗೆ ವಿಧಿಸಿದ್ದು, ಈ ಉದ್ದೇಶಿತ ತುಘಲಕಿ ಕಾಯ್ದೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಬೇಕು. ಇಲ್ಲವಾದಲ್ಲಿ ಇದರ ವಿರುದ್ಧ ಹಿಂದೂಗಳು ಬೀದಿಗಿಳಿದು ತೀವ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಹಿಂದೂ ಜನಜಾಗೃತಿ ಸಮಿತಿಯ ಕರ್ನಾಟಕ ರಾಜ್ಯ ವಕ್ತಾರ ಮೋಹನ ಗೌಡ ಎಚ್ಚರಿಕೆ ನೀಡಿದರು.
ಗೋವಾದ ಪೊಂಡಾದಲ್ಲಿ ನಡೆಯುತ್ತಿರುವ ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದ 5ನೇ ದಿನಗದ ಸಮಾವೇಶದಲ್ಲಿ ಸರಕಾರಿಕರಣಗೊಂಡ ಹಿಂದೂ ದೇವಸ್ಥಾನಗಳನ್ನು ಸರ್ಕಾರದ ನಿಯಂತ್ರಣದಿಂದ ಮುಕ್ತಗೊಳಿಸುವ ಕುರಿತು ಮಾತನಾಡಿದರು.
ಹಿಂದೂ ದೇವಸ್ಥಾನಗಳ ನಿಧಿಯನ್ನು ಬೇರೆ ಯಾವುದೇ ಉದ್ದೇಶಕ್ಕೆ ಬಳಸದೆ ದೇವಸ್ಥಾನಗಳ ಅಭಿವೃದ್ಧಿ, ಜೀರ್ಣೋದ್ಧಾರ, ದೇಗುಲಗಳಿಗೆ ಆರ್ಥಿಕ ನೆರವು, ದೀಪ,ಬತ್ತಿಗಳಿಗೆ ಮಾತ್ರ ವಿನಿಯೋಗಿಸಬೇಕು. ಅಲ್ಲದೆ, ಕರ್ನಾಟಕ ರಾಜ್ಯದಲ್ಲಿ ಸರಕಾರಿಕರಣಗೊಂಡಿರುವ ಎಲ್ಲ ಹಿಂದೂ ದೇವಸ್ಥಾನಗಳನ್ನು ಸರ್ಕಾರದ ನಿಯಂತ್ರಣದಿಂದ ಮುಕ್ತಗೊಳಿಸಿ ಭಕ್ತರಿಗೆ ಹಸ್ತಾಂತರಿಸಬೇಕು ಎಂದು ಆಗ್ರಹಿಸಿದರು.
ಹಿಂದು ಧರ್ಮಾಚರಣೆಯ ಹಿಂದೆ ಆಧ್ಯಾತ್ಮಿಕತೆಯ ಜತೆಗೆ ವೈಜ್ಞಾನಿಕ ಚಿಂತನೆಯೂ ಇದೆ ಎಂಬ ಬಗ್ಗೆ ಮಾತನಾಡಿದ ಷ.ಬ್ರ. ವೀರಭದ್ರಶಿವಾಚಾರ್ಯ ಸ್ವಾಮೀಜಿ ಹಿಂದೂ ಧರ್ಮದ ವೈಭವ, ಸನಾತನ ಪರಂಪರೆ ಆನಂದವನ್ನು ನಾವಷ್ಟೇ ಪಡೆಯುವಂತದ್ದಲ್ಲ. ಇಡೀ ಜಗತ್ತಿನಾದ್ಯಂತ ಎಲ್ಲ ಜನರಿಗೂ ತಲುಪಿಸುವುದು ನಮ್ಮೆಲ್ಲ ಕರ್ತವ್ಯವಾಗಿದೆ. ಸನಾತನ ಧರ್ಮದಿಂದಲೇ ಶಾಂತಿ ಸಿಗುತ್ತದೆ, ಈ ಸನಾತನ ಹಿಂದು ಧರ್ಮವನ್ನು ನಾಶಗೊಳಿಸಲು ಕೆಲವು ಶಕ್ತಿಗಳು ಪ್ರಯತ್ನಿಸುತ್ತಿವೆ. ಅದನ್ನು ತಡೆಗಟ್ಟಲು ಎಲ್ಲ ಸಂತರು, ಹಿಂದುತ್ವನಿಷ್ಠ ಸಂಘಟನೆಗಳು ಮತ್ತು ಹಿಂದು ಧರ್ಮಪ್ರೇಮಿಗಳಿಗೆ ಪ್ರಯತ್ನ ನಡೆಸಿದರೆ ಮಾತ್ರ ನಮ್ಮ ಧರ್ಮವು ಉಳಿಯಲಿದೆ ಎಂದು ಹೇಳಿದರು.
ಹಿಂದೂ ರಾಷ್ಟ್ರ ವಿಶ್ವಮಟ್ಟಕ್ಕೆ ಕೊಂಡೊಯ್ಯವ ಕುರಿತು ಮಾತನಾಡಿದ ತುಮಕೂರಿನ ಕಾರದೇಶ್ವರಮಠದ ಕಾರದ ವೀರಬಸವ ಸ್ವಾಮೀಜಿ ಭಾರತದ ಭೂಮಿ ಪವಿತ್ರ ರಾಷ್ಟ್ರ, ಹಿಂದೂ ರಾಷ್ಟ್ರ ಎನ್ನಲು ಕಾರಣವೆಂದರೆ ಮಣ್ಣನ್ನು ಕಂಡು, ನೀರನ್ನು ಕಂಡು, ಮನುಷ್ಯನನ್ನು ಕಂಡು, ಎಲ್ಲ ದೇವರು ಅಂತ ಪೂಜೆ ಮಾಡುವಂತಹ ಈ ಸನಾತನ ಧರ್ಮವು ಏಕೈಕ ಧರ್ಮವಾಗಿದೆ. ಈ ಸನಾತನ ಧರ್ಮವು ಭಾರತದ ಒಂದಕ್ಕೇ ಮೀಸಲಾಗದೇ ಇಡೀ ವಿಶ್ವಕ್ಕೆ ಮೀಸಲಾಗಬೇಕು.ಎಂದು ಹೇಳಿದರ ಅವರು ಹಿಂದೂ ರಾಷ್ಟ್ರವನ್ನು ವಿಶ್ವಮಟ್ಟಕ್ಕೆ ತೆಗೆದುಕೊಂಡು ಹೋಗುವ ಕೆಲಸ ಮಾಡೋಣ ಎಂದರು.
ದೇಶ ಮುನ್ನಡೆ ಹಾಗೂ ಬಲಿಷ್ಠ ರಾಷ್ಟ್ರ ಕಟ್ಟುವ ಕುರಿತು ಮಾತನಾಡಿದ ತುಮಕೂರು ಕುಂಚಿಟಿಗರ ಮಹಾಸಂಸ್ಥಾನ ಮಠದ ಪರಮಪೂಜ್ಯ ಡಾ. ಹನುಮಂತನಾಥ ಸ್ವಾಮೀಜಿ ನಾವು ನಮ್ಮ ಧರ್ಮವನ್ನು ರಕ್ಷಣೆ ಮಾಡಿದರೆ ಧರ್ಮವು ನಮ್ಮನ್ನು ರಕ್ಷಣೆ ಮಾಡುತ್ತದೆ. ನಾವು ನಮ್ಮ ಧಾರ್ಮಿಕ ಅಚಾರಗಳು,ನೆಲೆಗಟ್ಟುಗಳು, ಸಂಘಟನೆಗಳನ್ನು ರಕ್ಷಿಸುವುದು ನಮ್ಮ ಸಮಾಜಕ್ಕೆ ಅತ್ಯವಶ್ಯಕವಾಗಿದೆ. ಈಗ ಧರ್ಮವನ್ನು ರಕ್ಷಿಸುವ ಕೆಲಸ ಆಗಬೇಕಾಗಿರುತ್ತದೆ. ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಧಾರ್ಮಿಕವಾಗಿ, ಈ ಸಮಾಜ, ದೇಶ ಮುನ್ನಡೆಯ ಬೇಕಾದರೆ ಬಲಿಷ್ಠವಾದಂತಹ ರಾಷ್ಟ್ರವನ್ನು ಕಟ್ಟಲು ಆ ಅಡಿಪಾಯ ಬಹಳಮುಖ್ಯವಾಗಿದೆ ಎಂದು ವಿವರಿಸಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − twelve =
Remember me
