ಪುತ್ತೂರು:ಲಾಕ್​ಡೌನ್ ವೇಳೆ ಗುಜರಾತ್ ಸಹಿತ ಉತ್ತರ ಭಾರತಕ್ಕೆ ಕರಾವಳಿಯ ಚಾಲಿ ಅಡಕೆ ರಫ್ತಾಗದ ಹಿನ್ನೆಲೆಯಲ್ಲಿ ಅಲ್ಲಿನ ಗೋದಾಮುಗಳು ಖಾಲಿಯಾಗಿದ್ದು, ಬೇಡಿಕೆ ಹೆಚ್ಚಿದ್ದರಿಂದ ಕೆಲದಿನಗಳಿಂದ ಧಾರಣೆ ಏರುಗತಿಯಲ್ಲಿ ಸಾಗುತ್ತಿದೆ.
ಹೊಸ ಅಡಕೆ ಧಾರಣೆ ಕೆ.ಜಿ.ಗೆ 300 ರೂ. ಗಡಿ ದಾಟಿರುವುದು ಸಾರ್ವಕಾಲಿಕ. ಇದಕ್ಕೆ ಕಾರಣ ಮಾರುಕಟ್ಟೆಗೆ ಅಡಕೆ ಪೂರೈಕೆಯಾಗದಿರುವುದು. ಇಳುವರಿ ಕೊರತೆ ಹಾಗೂ ಕೊಳೆರೋಗ ಪರಿಣಾಮ ಕೆಲವರ್ಷಗಳಿಂದ ಅಡಕೆ ಉತ್ಪಾದನೆಯೂ ಕಡಿಮೆಯಾಗಿದೆ. ಬೇಡಿಕೆ ಹೆಚ್ಚಾಗಿ ಬೆಲೆಯೂ ಏರುಗತಿಯಲ್ಲಿ ಸಾಗಿತ್ತು. ವರ್ತಕರು ಬೆಳೆಗಾರರಿಂದ ಸಾಧ್ಯವಾದಷ್ಟು ಕಡಿಮೆ ಬೆಲೆಗೆ ಖರೀದಿಸಿ ಗೋದಾಮುಗಳಲ್ಲಿ ಶೇಖರಿಸಿದ್ದರು. ಲಾಕ್​ಡೌನ್ ಹಿನ್ನೆಲೆ ಅಡಕೆ ರಪ್ತು ಸಾಧ್ಯವಾಗದೆ ಬಾಕಿಯಾಗಿದ್ದು, ಲಾಕ್​ಡೌನ್ ಸಡಿಲಗೊಂಡ ನಂತರ ಅಂತಾರಾಜ್ಯ ಸಂಚಾರ ಆರಂಭಗೊಳ್ಳುತ್ತಿದ್ದಂತೆ ಅಡಕೆ ಪೂರೈಕೆಯಾಗಿದೆ. ಆದರೂ ಉತ್ತರ ಭಾರತದ ಬೇಡಿಕೆಯನ್ನು ಸರಿಗಟ್ಟುವುದು ಸಾಧ್ಯವಾಗಿಲ್ಲ. ಮಲೇಷ್ಯಾ, ಸಿಂಗಾಪುರ, ಮ್ಯಾನ್ಮಾರ್​ನಿಂದ ಬಾಂಗ್ಲಾದೇಶದ ಮೂಲಕ ಭಾರತಕ್ಕೆ ಕಳಪೆ ಗುಣಮಟ್ಟದ ವಿದೇಶಿ ಅಡಕೆ ಅಕ್ರಮ ಆಮದಿಗೆ ಕೆಲತಿಂಗಳಿನಿಂದ ಪೂರ್ಣ ಪ್ರಮಾಣದ ಬ್ರೇಕ್ ಬಿದ್ದಿರುವುದು, ಶ್ರೀಲಂಕಾ- ಭಾರತ ಸಾಫ್ಟಾ ದ್ವಿಪಕ್ಷೀಯ ವ್ಯಾಪಾರ ಒಪ್ಪಂದ ದುರ್ಬಳಕೆಗೂ ಕಡಿವಾಣ ಮತ್ತು ವಿಶ್ವದಾದ್ಯಂತ ಕರೊನಾ ಬ್ರೇಕ್​ಡೌನ್​ನಿಂದಾಗಿ ಅಡಕೆ ಆಮದು ನಿಂತಿರುವುದೂ ಸ್ಥಳೀಯ ಅಡಕೆಗೆ ಬೇಡಿಕೆ ಕುದುರಲು ಕಾರಣವಾಗಿದೆ.
350 ರೂ.ನತ್ತ ಧಾರಣೆ?:ಕರಾವಳಿಯಲ್ಲಿ ಈವರೆಗೂ ಹೊಸ ಅಡಕೆಗೆ 300 ರೂ. ಧಾರಣೆ ಆಗಿದ್ದಿಲ್ಲ. 10 ದಿನಗಳಿಂದ ಕ್ಯಾಂಪ್ಕೊ 300 ರೂಪಾಯಿಯಲ್ಲಿ ಹೊಸ ಅಡಕೆ ಹಾಗೂ 320ರಲ್ಲಿ ಹಳೇ ಅಡಕೆ ಖರೀದಿಸುತ್ತಿದೆ. ಖಾಸಗಿ ವರ್ತಕರು ಹೊಸ ಅಡಕೆಗೆ 318 ರೂ. ವರೆಗೂ ನೀಡುತ್ತಿದ್ದಾರೆ. ಹಳೇ ಅಡಕೆಗೆ ಗರಿಷ್ಠ 320 ರೂ. ಧಾರಣೆ ಇದೆ. ಧಾರಣೆ ಏರಿಕೆಯಾದರೂ ಬೆಳೆಗಾರರು ಮುಗಿಬಿದ್ದು ಅಡಕೆ ಮಾರಾಟ ಮಾಡುತ್ತಿಲ್ಲ. ಇದರಿಂದಾಗಿ ಧಾರಣೆ ನಿಯಂತ್ರಣದಲ್ಲೇ ಸಾಗುತ್ತಿದೆ. ಪರಿಸ್ಥಿತಿ ಇದೇ ರೀತಿ ಮುಂದುವರಿಯುವ ಲಕ್ಷಣ ತೋರುತ್ತಿದ್ದು, ಹೊಸ ಅಡಕೆ 350 ರೂ. ತಲುಪಿದರೂ ಅಚ್ಚರಿ ಇಲ್ಲ ಎನ್ನುತ್ತಾರೆ ಮಾರುಕಟ್ಟೆ ವಿಶ್ಲೇಷಕರು
ಪ್ರಸ್ತುತ ಅಡಕೆಗೆ ಉತ್ತಮ ಧಾರಣೆ ಇದ್ದರೂ ಬೇಡಿಕೆ ಯಷ್ಟು ಪೂರೈಕೆಯಾಗುತ್ತಿಲ್ಲ. ಉತ್ತರ ಭಾರತದಲ್ಲಿ ಬೇಡಿಕೆ ಹೆಚ್ಚಾಗಿರುವುದಕ್ಕೆ ಅಡಕೆ ಮಾರುಕಟ್ಟೆಗೆ ಪೂರೈಕೆ ಕೊರತೆಯೇ ಕಾರಣ. ಮುಂದಿನ ದಿನಗಳಲ್ಲಿ ಧಾರಣೆ ಇನ್ನೂ ಏರಿಕೆಯಾಗುವ ಸಾಧ್ಯತೆ ಇದೆ.
| ಸತೀಶ್ಚಂದ್ರ ಎಸ್.ಆರ್ ಕ್ಯಾಂಪ್ಕೊ ಅಧ್ಯಕ್ಷ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × five =
Remember me
