ಬೆಂಗಳೂರು:ಕೋವಿಡ್-19 ವ್ಯಾಕ್ಸಿನೇಷನ್‌ಗೆ ಸರ್ಕಾರಿ ಲಸಿಕೆ ಕೇಂದ್ರಗಳಲ್ಲಿ ಮತ್ತೆ ಬೇಡಿಕೆ ಹೆಚ್ಚಾಗುತ್ತಿದೆ. ಆದರೆ ರಾಜ್ಯದಲ್ಲಿ ಲಸಿಕೆ ದಾಸ್ತಾನು ಸೀಮಿತವಾಗಿದ್ದು, ಮಂಗಳವಾರದ ಹೊತ್ತಿಗೆ, ರಾಜ್ಯದಲ್ಲಿ 330 ಡೋಸ್ ಕೋವಿಶೀಲ್ಡ್, 5.82 ಲಕ್ಷ ಡೋಸ್ ಕೋವಾಕ್ಸಿನ್ ಲಭ್ಯವಿದ್ದು, ಕಾರ್ಬೆವಾಕ್ಸ್ ದಾಸ್ತಾನು ಶೂನ್ಯವಿತ್ತು. ಕೋವಾಕ್ಸಿನ್ ಲಸಿಕೆಯ ಬಳಕೆ ಅವಧಿ ಈ ತಿಂಗಳ ಅಂತ್ಯಕ್ಕೆ ಮುಕ್ತಾಯವಾಗಲಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.
ಕೇಂದ್ರದಿಂದ ಹೆಚ್ಚುವರಿ ಲಸಿಕೆ ಒದಗಿಸುವಂತೆ ರಾಜ್ಯದಿಂದ ಕೋರಿಕೆ ಸಲ್ಲಿಸಲಾಗಿದ್ದು, ಮುಂದಿನ ವಾರದ ವೇಳೆಗೆ ಎಂಟು ಲಕ್ಷ ಡೋಸ್ ಕೋವಿಶೀಲ್ಡ್ ಲಸಿಕೆ ರವಾನೆಯಾಗುವ ಭರವಸೆ ಇದೆ. ಕೋವಿಶೀಲ್ಡ್‌ಗೆ ಬೇಡಿಕೆ ಹೆಚ್ಚಿದ್ದು, ಅದನ್ನು ಆದ್ಯತೆ ಮೇರೆಗೆ ತೆಗೆದುಕೊಳ್ಳಲಾಗುತ್ತಿದೆ ಎಂದು ರಾಷ್ಟ್ರೀಯ ಆರೋಗ್ಯ ಮಿಷನ್ (ಎನ್‌ಎಚ್‌ಎಂ) ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯ ಆರೋಗ್ಯ ಇಲಾಖೆಯ ಅಂಕಿ-ಅಂಶಗಳ ಪ್ರಕಾರ, ಈ ತಿಂಗಳಲ್ಲಿ ಕೇವಲ 9 ದಿನಗಳಲ್ಲಿ (ಜನವರಿ 1-9) 1,02,994 ಡೋಸ್ ಲಸಿಕೆ ನೀಡಲಾಗಿದ್ದು, ಡಿಸೆಂಬರ್‌ನಲ್ಲಿ ತಿಂಗಳ ಪೂರ್ತಿ 2,58,539 ಡೋಸ್‌ ನೀಡಲಾಗಿದೆ. ಅಂದರೆ ಕಳೆದ ತಿಂಗಳ ಸಂಪೂರ್ಣ ಲಸಿಕೆ ಪ್ರಮಾಣದಲ್ಲಿ ಶೇ. 50 ಲಸಿಕೆ ಈ 9 ದಿನಗಳಲ್ಲಿ ವಿತರಿಸಲಾಗಿದೆ. ಇದು ಮೂರನೇ ಡೋಸ್ ಪಡೆಯಲು ಜನರು ಆಸಕ್ತಿ ಹೊಂದುತ್ತಿರುವುದನ್ನು ಸೂಚಿಸುತ್ತದೆ.
ಮುನ್ನೆಚ್ಚರಿಕೆ ಡೋಸ್:ಕೋವಿಡ್ ಸಂಭಾವ್ಯ ನಾಲ್ಕನೇ ಅಲೆ ಹಿನ್ನೆಲೆಯಲ್ಲಿ ಲಸಿಕೆಗೆ ಬೇಡಿಕೆಗೆ ಹೆಚ್ಚಾಗಿದ್ದು, ದುರ್ಬಲ ಜನಸಂಖ್ಯೆಗೆ, ವಿಶೇಷವಾಗಿ ವಯಸ್ಸಾದವರಿಗೆ, ಕೊಮೊರ್ಬಿಡಿಟಿ (ವಿವಿಧ ಆರೋಗ್ಯ ಸಮಸ್ಯೆ) ಹೊಂದಿರುವವರು ಮತ್ತು ರೋಗನಿರೋಧಕ ಶಕ್ತಿ ಕುಂದಿರುವ ವ್ಯಕ್ತಿಗಳು ಮುನ್ನೆಚ್ಚರಿಕೆ ಡೋಸ್ ತೆಗೆದುಕೊಳ್ಳುವುದು ಅತ್ಯಗತ್ಯ ಎಂದು ತಜ್ಞರು ಶಿಫಾರಸು ಮಾಡಿದ್ದಾರೆ. ರಾಜ್ಯದಲ್ಲಿ ಮುನ್ನೆಚ್ಚರಿಕೆ ಡೋಸ್ ಪಡೆಯುವವರ ಪ್ರಮಾಣ ತೀರಾ ಕಡಿಮೆ ಇದೆ. ಈವರೆಗೂ ಶೇ.20ಕ್ಕಿಂತ ಹೆಚ್ಚಿನವರು ಮುನ್ನೆಚ್ಚರಿಕೆ ಡೋಸ್ ಪಡೆದುಕೊಂಡಿಲ್ಲ.
ಖಾಸಗಿಯಲ್ಲಿ ಲಸಿಕೆ ತೆಗೆದುಕೊಳ್ಳುವವರಿಲ್ಲ:ಸರ್ಕಾರಿ ಆಸ್ಪತ್ರೆಗಳಲ್ಲಿ ಲಸಿಕೆ ಬರುವವರ ಸಂಖ್ಯೆ ಕೊಂಚ ಏರಿಕೆಯಾಗಿದೆ. ಆದರೆ, ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ತೆಗೆದುಕೊಳ್ಳುವವರೇ ಇಲ್ಲ. ಖಾಸಗಿ ಆಸ್ಪತ್ರೆಗಳಲ್ಲಿ ಇರುವ ದಾಸ್ತಾನಿನ ಬಳಕೆ ಅವಧಿ ಶೀಘ್ರದಲ್ಲೇ ಮುಗಿಯುವುದರಿಂದ ಅವುಗಳನ್ನು ಖಾಲಿ ಮಾಡುವ ಬಗ್ಗೆ ಕಾಳಜಿ ವಹಿಸಲಾಗುತ್ತಿದ್ದು, ಸದ್ಯ ಹೊಸದಾಗಿ ಲಸಿಕೆ ದಾಸ್ತಾನು ಮಾಡುವ ಬಗ್ಗೆ ಆಸಕ್ತಿ ತೋರುತ್ತಿಲ್ಲ. ಅಲ್ಲದೆ ಲಸಿಕೆ ಬಳಕೆ ಅವಧಿ ಮುಗಿಯುವ ಬಗ್ಗೆ ವರದಿಗಳು ಆಗಿರುವುದರಿಂದ ಜನರು ಹೊಸ ಡೋಸ್ ಪಡೆಯಲು ತಾಜಾ ದಾಸ್ತಾನುಗಳ ಆಗಮನಕ್ಕಾಗಿ ಕಾಯುತ್ತಿದ್ದಾರೆ. ಇದಲ್ಲದೆ ಸರ್ಕಾರಿ ಆಸ್ಪತ್ರೆಗಳಲ್ಲಿ ಲಸಿಕೆ ಉಚಿತವಾಗಿ ನೀಡಲಾಗುತ್ತಿದೆ. ಹಾಗಾಗಿ ಆಸ್ಪತ್ರೆಗಳಿಗೆ ಇರುವ ದಾಸ್ತಾನು ಖಾಲಿಯಾದರೆ ಸಾಕು ಎಂಬಂತಾಗಿದೆ ಎನ್ನುತ್ತಾರೆ ಖಾಸಗಿ ಆಸ್ಪತ್ರೆಗಳು ಮುಖ್ಯಸ್ಥರು.
ವಿಶೇಷ ಶಿಬಿರಗಳು:ಜನವರಿ ಅಂತ್ಯದ ವೇಳೆಗೆ ಮುನ್ನೆಚ್ಚರಿಕೆ ಡೋಸ್ ಲಸಿಕೆ ವಿತರಣೆಯಲ್ಲಿ ಕನಿಷ್ಠ 50 ಹೆಚ್ಚಿಸಲು ವಿಶೇಷ ಲಸಿಕಾ ಶಿಬಿರಗಳನ್ನು ಆಯೋಜಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದರು. ಆದರೆ ರಾಜ್ಯದಲ್ಲಿ ಸದ್ಯ ಸಮರ್ಪಕ ಲಸಿಕೆ ದಾಸ್ತಾನು ಇಲ್ಲವಾದ್ದರಿಂದ ಹಾಗೂ ಕೋವಿಶೀಲ್ಡ್​ಗಾಗಿ ಕಾಯುತ್ತಿರುವ ಕಾರಣ ಇನ್ನೂ ಶಿಬಿರಗಳು ಪ್ರಾರಂಭವಾಗಿಲ್ಲ. ಅಲ್ಲದೆ ಸಾಕಷ್ಟು ಕೋವಾಕ್ಸಿನ್ ದಾಸ್ತಾನು ಇದೆಯಾದರೂ, ಕೇವಲ ಕೋವಾಕ್ಸಿನ್‌ಗಾಗಿ ಮಾತ್ರ ಶಿಬಿರಗಳನ್ನು ಆಯೋಜಿಸಲು ಆಗುವುದಿಲ್ಲ. ಹಾಗಾಗಿ ಕೋವಿಶೀಲ್ಡ್ ಸ್ವೀಕರಿಸಿದ ತಕ್ಷಣ ಶಿಬಿರಗಳು ಪ್ರಾರಂಭಿಸಲಾಗುವುದು ಎನ್ನುತ್ತಾರೆ ಆರೋಗ್ಯ ಇಲಾಖೆ ಅಧಿಕಾರಿಗಳು.
‘ನಾನು ಯೂಟ್ಯೂಬರ್ ಆಗಿದ್ದು ಯಾಕೆ?’ ಅಂತ ಖುದ್ದು ಡಾ.ಬ್ರೋ ಅವರೇ ಹಂಚಿಕೊಂಡಿದ್ದಾರೆ ಇಲ್ಲಿ..

ಡಾ.ಬ್ರೋ ಯಾವಾಗ ವಿದೇಶಕ್ಕೆ ಹೋಗಲ್ಲ?; ಒಂದು ದೇಶಕ್ಕೆ ಹೊರಟಾಗ ಅವರ ಅಧ್ಯಯನ ಹೇಗಿರುತ್ತೆ?; ಇಲ್ಲಿದೆ ಮಾಹಿತಿ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 + 4 =
Remember me
