| ನವೀನ್ ಬಿಲ್ಗುಣಿ
ಶಿವಮೊಗ್ಗ:ಲಾಕ್​ಡೌನ್ ಸಡಿಲಿಕೆ ಬೆನ್ನಲ್ಲೇ ಪಾತಾಳಕ್ಕೆ ಕುಸಿದಿದ್ದ ಶುಂಠಿ ದರ ದಿಢೀರ್ ಏರಿಕೆ ಕಂಡಿದ್ದು, ಪ್ರತಿ ಕ್ವಿಂಟಾಲ್ ಹಸಿ ಶುಂಠಿ 6ರಿಂದ 7 ಸಾವಿರ ರೂ.ಗೆ ಮಾರಾಟವಾಗುತ್ತಿದ್ದರೆ, ಒಣ ಶುಂಠಿ 23 ಸಾವಿರ ರೂ. ಗಡಿ ದಾಟಿದೆ.
ಲಾಕ್​ಡೌನ್​ನಿಂದ ಹೊರ ರಾಜ್ಯಗಳಿಗೆ ಸಾಗಣೆ ಸಾಧ್ಯವಾಗದೆ ಶುಂಠಿ ಬೇಡಿಕೆ ಕುಸಿತ ಕಂಡಿತ್ತು. ಇದೀಗ ವ್ಯಾಪಾರ- ವಹಿವಾಟು ಸಹಜ ಸ್ಥಿತಿಗೆ ಮರಳುತ್ತಿದ್ದು ಹೊರರಾಜ್ಯಗಳಲ್ಲಿ ಶುಂಠಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಹಾಗಾಗಿ ಶುಂಠಿಗೆ ಉತ್ತಮ ಬೆಲೆ ಬಂದಿದೆ. ಇತ್ತ ಲಾಕ್​ಡೌನ್ ವೇಳೆ ಬೆಲೆ ಇಲ್ಲದೆ ಶುಂಠಿ ಬೆಳೆಗಾರರು ಆತಂಕದಲ್ಲೇ ಕಾಲ ಕಳೆಯುವಂತಾಯಿತು. ಶೇ.80 ಬೆಳೆಗಾರರು ಮೇ ಅಂತ್ಯದೊಳಗೆ ಶುಂಠಿ ಬೆಳೆ ಕಿತ್ತು ಮಾರಾಟ ಮಾಡಿದ್ದಾರೆ. ಆದರೆ ಇದೀಗ ದಿಢೀರ್ ದರ ಏರಿಕೆ ಆಗಿದ್ದು, ಸಣ್ಣಪುಟ್ಟ ಬೆಳೆಗಾರರು ಕೈ ಕೈ ಹಿಸುಕಿಕೊಳ್ಳುವಂತಾಗಿದೆ.
ದರ ಏರಿಕೆ ಕಣ್ಣಾಮುಚ್ಚಾಲೆ:ಎರಡು ದಿನಗಳ ಹಿಂದಷ್ಟೇ ಮಲೆನಾಡು ಶಿವಮೊಗ್ಗದಲ್ಲಿ 7ರಿಂದ 8 ಸಾವಿರ ರೂ. ಆಸುಪಾಸು ತಲುಪಿದ್ದ ಶುಂಠಿ ಶನಿವಾರಕ್ಕೆ 6,500ರಿಂದ 7 ಸಾವಿರ ರೂ.ಗೆ ಇಳಿದಿದೆ. ಭಾನುವಾರದ ಅಂತ್ಯಕ್ಕೆ 5,500ರಿಂದ 6,500 ರೂ.ಗೆ ಕುಸಿದಿದ್ದು, ಮೂರ್ನಾಲ್ಕು ದಿನದ ಹಿಂದಷ್ಟೇ ದಿಢೀರ್ ಏರಿಕೆ ಕಂಡಿದ್ದ ಶುಂಠಿ ದರ ಇದೀಗ ಕಣ್ಣಾಮುಚ್ಚಾಲೆ ಆಡುತ್ತಿದೆ.
ಜಮೀನು-ನೀರಿಗೆ ಡಿಮ್ಯಾಂಡ್:ಶುಂಠಿ ಬೆಳೆ ಮತ್ತೆ ಮಲೆನಾಡನ್ನು ಆವರಿಸಿದೆ. ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಈಗಾಗಲೇ ಜಿಲ್ಲೆಯ ಬೆಳೆಗಾರರು ಶುಂಠಿ ಬಿತ್ತನೆ ಮಾಡಿದ್ದಾರೆ. ಶುಂಠಿ ಬಿತ್ತನೆಗೆ ಮಲೆನಾಡಿನ ಜಮೀನು ಯೋಗ್ಯವಾಗಿರುವ ಹಿನ್ನೆಲೆಯಲ್ಲಿ ಜಮೀನು ಮತ್ತು ನೀರಿನ ಭೋಗ್ಯಕ್ಕೂ ಬೇಡಿಕೆ ಹೆಚ್ಚಾಗಿತ್ತು.
ಲಾಕ್​ಡೌನ್ ಸಡಿಲಿಕೆ ಆಗುತ್ತಿದ್ದಂತೆ ಹೊರರಾಜ್ಯಗಳಿಗೆ ಕಳಿಸಲಾಗುತ್ತಿದೆ. ಶನಿವಾರ ಇದ್ದ ದರ ಭಾನುವಾರದ ಅಂತ್ಯಕ್ಕೆ ಕುಸಿದಿದ್ದು ಹಸಿ ಶುಂಠಿ ಪ್ರತಿ ಕ್ವಿಂಟಾಲ್​ಗೆ 6 ಸಾವಿರ ರೂ.ಗೆ ಖರೀದಿಸಲಾಗುತ್ತಿದೆ.
| ಸಮೀವುಲ್ಲಾ ಶುಂಠಿ ವ್ಯಾಪಾರಿ
ಜೂನ್​ವರೆಗೆ ಶುಂಠಿ ಇಟ್ಟಿದ್ದಕ್ಕೆ ಕೊನೆಗೂ ಸ್ವಲ್ಪ ದರ ಸಿಕ್ಕಿದೆ. ಆದರೆ ಒಂದೆರಡು ದಿನದಲ್ಲೇ ದರ ಏರಿಳಿಕೆ ಆಗುತ್ತಿದೆ. ಭಾನುವಾರ 6,500 ರೂ.ಗೆ ವ್ಯಾಪಾರಿಗಳು ಕೇಳುತ್ತಿದ್ದಾರೆ.
| ಲೋಹಿತ್ ಶುಂಠಿ ಬೆಳೆಗಾರ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − 12 =
Remember me
