ಬೆಂಗಳೂರು:ಕರೊನಾ ಮಾರಿ ಜನರ ಬದುಕಿನ ಜತೆಗೆ ಮಕ್ಕಳ ಭವಿಷ್ಯದ ಮೇಲೂ ಗ್ರಹಣ ಕವಿಸಿದ್ದರೂ, ಈ ಅತಂತ್ರ ಪರಿಸ್ಥಿತಿಯೇ ಶೈಕ್ಷಣಿಕ ಕ್ಷೇತ್ರದಲ್ಲಿ ಹೊಸ ಕ್ರಾಂತಿಯೊಂದಕ್ಕೂ ಮುನ್ನುಡಿ ಆಗಿದೆ. ಮಹಾಮಾರಿ ತಂದೊಡ್ಡಿದ ಆರ್ಥಿಕ ಸಂಕಷ್ಟ, ಶಾಲೆಗಳ ಆರಂಭದ ಅನಿಶ್ಚಿತತೆಯಿಂದಾಗಿ ರಾಜ್ಯಾದ್ಯಂತ ಹೆಚ್ಚಿನ ಪಾಲಕರು ಮಕ್ಕಳನ್ನು ಖಾಸಗಿ ಶಿಕ್ಷಣ ಸಂಸ್ಥೆಗಳಿಂದ ಬಿಡಿಸಿ ಸರ್ಕಾರಿ ಶಾಲೆಗಳಿಗೆ ದಾಖಲಿಸುತ್ತಿದ್ದಾರೆ. ಹಳ್ಳಿ ಹಳ್ಳಿಗಳ ಮನೆ ಬಾಗಿಲಲ್ಲೇ ಮಕ್ಕಳಿಗೆ ಜ್ಞಾನಾರ್ಜನೆ ಮಾಡಿಸುವ ನಿಟ್ಟಿನಲ್ಲಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರ ಪರಿಕಲ್ಪನೆ ವಿದ್ಯಾಗಮ ಯೋಜನೆ ಈ ಬದಲಾವಣೆಯ ಹರಿಕಾರ ಎಂಬುದು ವಿಶೇಷ. ವಿಜಯಪುರ ಜಿಲ್ಲೆಯೊಂದರಲ್ಲೇ ಸುಮಾರು 4 ಸಾವಿರ ಮಕ್ಕಳು ಖಾಸಗಿ ಶಾಲೆ ತೊರೆದು ಸರ್ಕಾರಿ ಶಾಲೆ ಅಪ್ಪಿಕೊಂಡಿರುವುದು ಯೋಜನೆಯ ಯಶಸ್ಸಿಗೆ ಸಾಕ್ಷಿ.
ಕಾರಣ ಹಲವು:ತಮ್ಮ ಮಕ್ಕಳು ಆಂಗ್ಲಮಾಧ್ಯಮದಲ್ಲಿ ಓದಬೇಕೆಂದು ಬಯಸುವ ಬಹುತೇಕ ಪಾಲಕರಿಗೆ ಖಾಸಗಿ ಶಾಲೆಗಳ ಮೇಲೆ ಒಲವಿದ್ದರೂ, ಹಲವು ಕಾರಣಗಳಿಂದ ನಿರ್ಧಾರ ಬದಲಿಸಿದ್ದಾರೆ. ಈ ಪೈಕಿ ಆರ್ಥಿಕ ಹೊರೆ ಹೆಚ್ಚು ಪ್ರಭಾವ ಬೀರಿದೆ. ಉದ್ಯೋಗ ಕಳೆದುಕೊಂಡು, ವ್ಯವಹಾರದಲ್ಲಿ ನಷ್ಟ ಅನುಭವಿಸಿ ಸಾವಿರಾರು ಕುಟುಂಬಗಳು ಹಳ್ಳಿಗಳನ್ನು ಸೇರಿವೆ. ಇಂಥ ಕುಟುಂಬಗಳ ಮಕ್ಕಳು ಹಳ್ಳಿ, ಪಟ್ಟಣ ಪ್ರದೇಶಗಳಲ್ಲಿ ಸರ್ಕಾರಿ ಶಾಲೆಗಳೇ ಖಾಸಗಿಗಿಂತ ಮೇಲು ಎಂಬ ಕಾರಣಕ್ಕೆ ದಾಖಲಾಗುತ್ತಿದ್ದಾರೆ. ಇನ್ನೊಂದೆಡೆ, ಖಾಸಗಿ ಶಾಲೆಗಳಲ್ಲಿ ಮುಂದುವರಿಸಲು ಆನ್​ಲೈನ್ ಶಿಕ್ಷಣಕ್ಕೆ ಅಗತ್ಯವಾದ ಮೊಬೈಲ್ ಇಲ್ಲದಿರುವುದು, ಹಳ್ಳಿಗಳಲ್ಲಿ ಇಂಟರ್ನೆಟ್, ನೆಟ್​ವರ್ಕ್ ಸಮಸ್ಯೆ ಸಹ ಮಕ್ಕಳನ್ನು ಸರ್ಕಾರಿಶಾಲೆಗಳತ್ತ ಕರೆತರುತ್ತಿವೆ.ಇದನ್ನೂ ಓದಿ:‘ದೀದಿ ಹೇರುತ್ತಿರುವ ಲಾಕ್​ಡೌನ್​​ಗೆ ಕಾರಣ ಬಿಜೆಪಿಯೇ ಹೊರತು ಕರೊನಾ ಅಲ್ಲ…’
ಇದಕ್ಕೆ ಪೂರಕವಾಗಿ ವಿದ್ಯಾಗಮ ಯೋಜನೆಯಡಿ ಸರ್ಕಾರಿ ಶಾಲೆ ಶಿಕ್ಷಕರು ಮನೆಬಾಗಿಲಿಗೆ ಬಂದು ಪಾಠ ಮಾಡುತ್ತಿರುವುದರಿಂದ ಮಕ್ಕಳ ಸುರಕ್ಷತೆ ಜೊತೆಗೆ ಉತ್ತಮ ಕಲಿಕೆಯೂ ಸರ್ಕಾರಿ ಶಾಲೆಗಳಲ್ಲಿ ಸಾಧ್ಯ ಎಂಬ ಭರವಸೆ ಪಾಲಕರಲ್ಲಿ ಮೂಡುತ್ತಿದೆ. ಶಿಕ್ಷಣ ಇಲಾಖೆ ಈ ಸಂದರ್ಭವನ್ನು ಬಳಸಿಕೊಂಡು, ಕೇವಲ ಆಡಳಿತಾತ್ಮಕ ವಿಚಾರದಲ್ಲೇ ಕಾಲಹರಣ ಮಾಡದೆ ಶಿಕ್ಷಣದ ಗುಣಮಟ್ಟ ಹೆಚ್ಚಿಸಿಕೊಂಡು ನಂಬಿಕೆ ಉಳಿಸಿಕೊಳ್ಳುವತ್ತ ಗಮನ ನೀಡಬೇಕು ಎಂಬುದು ಹಲವರ ಅಭಿಪ್ರಾಯ ವಿದ್ಯಾಗಮ ಯೋಜನೆ ಬಳಿಕ ಸರ್ಕಾರಿ ಶಾಲೆಗಳಿಗೆ ಮರುಜೀವ ಬಂದಿದೆ. 3 ವರ್ಷದಿಂದ ಬಂದ್ ಆಗಿದ್ದ ಎಚ್.ಡಿ.ಕೋಟೆ ತಾಲೂಕಿನ ಚಂದವಾಡಿ ಸರ್ಕಾರಿ ಶಾಲೆಗೆ ಹೊಸದಾಗಿ 12 ಮಕ್ಕಳು ದಾಖಲಾಗಿದ್ದಾರೆ. ಇವರಲ್ಲಿ 7 ಮಕ್ಕಳು ಖಾಸಗಿ ಶಾಲಾ ವಿದ್ಯಾರ್ಥಿಗಳು. ಇದೇ ತಾಲೂಕಿನ ಸೋನಹಳ್ಳಿಯ ಸರ್ಕಾರಿ ಶಾಲೆಯ ದಾಖಲಾತಿ ಸಂಖ್ಯೆ ಈ ಸಲ 15ರಿಂದ 150ಕ್ಕೆ ಏರಿಕೆಯಾಗಿದ್ದು, ಇದರಲ್ಲಿ 135 ಮಕ್ಕಳು ಖಾಸಗಿ ಶಾಲಾ ವಿದ್ಯಾರ್ಥಿಗಳು.
ವಿಜಯಪುರದಲ್ಲಿ ಸಕ್ಸಸ್:ವಿಜಯಪುರ ಜಿಲ್ಲೆಯಲ್ಲೇ 4 ಸಾವಿರಕ್ಕೂ ಹೆಚ್ಚು ಮಕ್ಕಳು ಖಾಸಗಿ ಶಾಲೆ ಬಿಟ್ಟು ಸರ್ಕಾರಿ ಶಾಲೆಯಲ್ಲಿ ಪ್ರವೇಶಾತಿ ಪಡೆದಿದ್ದಾರೆ.ಇದನ್ನೂ ಓದಿ:‘ದೀದಿ ಹೇರುತ್ತಿರುವ ಲಾಕ್​ಡೌನ್​​ಗೆ ಕಾರಣ ಬಿಜೆಪಿಯೇ ಹೊರತು ಕರೊನಾ ಅಲ್ಲ…’
ಪ್ರತಿ ವರ್ಷಕ್ಕಿಂತ ಈ ವರ್ಷ ದಾಖಲಾತಿ ಹೆಚ್ಚಳವಾಗಿದೆ. ಮೊರಾರ್ಜಿ ದೇಸಾಯಿ ವಸತಿ ಶಾಲೆ, ಆದರ್ಶ ಶಾಲೆ ಮಕ್ಕಳು ಸೇರಿದಂತೆ ಇತರ ಖಾಸಗಿ ಶಾಲೆ ಮಕ್ಕಳು ಸರ್ಕಾರಿ ಶಾಲೆಯಲ್ಲಿ ದಾಖಲಾತಿ ಪಡೆದಿದ್ದಾರೆ. ಅದರ ಜತೆಗೆ ವಿದ್ಯಾಗಮ ಕಾರ್ಯಕ್ರಮವೂ ಮಕ್ಕಳ ದಾಖಲಾತಿ ಹೆಚ್ಚಳಕ್ಕೆ ಕಾರಣವಾಗಿದೆ.
| ಸಿ.ಪ್ರಸನ್ನ ಕುಮಾರಡಿಡಿಪಿಐ, ವಿಜಯಪುರ
VIDEO| ಗೋಲ್ಡನ್ ಏರೋಸ್ ಸೇರ್ಪಡೆಯನ್ನು ಭಾರತೀಯ ವಾಯುಪಡೆ ಸಂಭ್ರಮಿಸಿದ್ದು ಹೀಗೆ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 4 =
Remember me
