ಬೆಂಗಳೂರು: ಕರಾವಳಿ ಭಾಗದಿಂದ ಬಂದಿದ್ದ ಕೆಲ ಮಂದಿ ಕಂಬಳದಲ್ಲಿ ಕೋಣ ಓಡಿಸಲು ಬೆತ್ತಗಳನ್ನು ಮಾರಾಟ ಮಾಡುತ್ತಿದ್ದರು. ಜನರು ಕೂಡ ಕುತೂಹಲದಿಂದ ಬಂದು ವಿಚಾರಿಸುತ್ತಿದ್ದಾರೆ. ಈ ಬೆತ್ತಗಳನ್ನು ಆಕರ್ಷಕವಾಗಿ ಸಿಂಗರಿಸಲಾಗಿರುತ್ತದೆ. ಹೀಗಾಗಿ ಕೆಲವರು ಇದನ್ನು ಖರೀದಿಸುತ್ತಿರುವುದು ಕಂಡು ಬಂತು. ಈ ಕೋಲುಗಳು 2000 ದಿಂದ 2500 ರೂಪಾಯಿಗೆ ವರೆ ಮಾರಾಟವಾಗುತ್ತಿವೆ.
ಕರಾವಳಿಯ ತಿಂಡಿ&ತಿನಿಸುಗಳನ್ನು ಸವಿಯಲು ಕಂಬಳಕ್ಕೆ ಬಂದಿದ್ದ ಮಂದಿ ಮುಗಿಬಿದ್ದರು. ಮಂಗಳೂರು ಬನ್ಸ್​, ಬಜ್ಜಿ, ತುಪ್ಪ ದೋಸೆ, ಗೋಳಿ ಬಜೆ, ಪುಂಡಿ ಗಸಿ, ಕೋರಿ ರೊಟ್ಟಿ, ಮೀನಿನ ವಿವಿಧ ಖಾದ್ಯಗಳನ್ನು ಸವಿದರು. ಹೀಗಾಗಿ ಬೆಳಗ್ಗಿನಿಂದಲೇ ಫುಡ್​ಕೋರ್ಟ್​ನಲ್ಲಿ ಹೆಚ್ಚಿನ ಜನರಿದ್ದರು. ಸಂಜೆಯಾಗುತ್ತಿದ್ದಂತೆ ದಟ್ಟಣೆ ಹೆಚ್ಚಾಗುತ್ತಾ ಹೋಯಿತು.
ದಿನದಿಂದ ದಿನಕ್ಕೆ ಅಡಿಕೆಯ ಮೌಲ್ಯವರ್ಧನೆ ಹಿನ್ನೆಲೆಯಲ್ಲಿ ಸಾಕಷ್ಟು ಉಪ&ಉತ್ಪನ್ನಗಳು ಮಾರುಕಟ್ಟೆಗೆ ಬರುತ್ತಿವೆ. ಇದೀಗ ಪುತ್ತೂರಿನ ಸುಹಾಸ್​ ಮರಿಕೆ ಎಂಬುವವರು ಅಡಿಕೆಯಿಂದ ಐಸ್​ಕ್ರೀಂ ತಯಾರಿಸಿದ್ದಾರೆ. ಸದ್ಯ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಕಂಬಳಕೂಟಕ್ಕೆ ಬಂದಿರುವ ಜನರು ಅಡಿಕೆ ರುಚಿಯ ಐಸ್​ಕ್ರೀಂ ಸವಿದಿದ್ದಾರೆ.
ಅಡಿಕೆಯನ್ನು ನಾನಾ ಹಂತಗಳಲ್ಲಿ ಸಂಸ್ಕರಿಸಿ, ಐಸ್​ಕ್ರೀಂ ಸಿದ್ಧಪಡಿಸಲಾಗುತ್ತದೆ. ಈ ಸ್ವಾದವನ್ನು ಎಲ್ಲ ವಯೋಮಾನದವರು ಸವಿಯಬಹುದು. ಆರೋಗ್ಯದ ಮೇಲೆ ಯಾವುದೇ ಅಡ್ಡ ಪರಿಣಾಮ ಬೀರುವುದಿಲ್ಲ. ಇದು ನ್ಯಾಚುರಲ್​ ಐಸ್​ಕ್ರೀಂ ಆಗಿದ್ದು, ಸಹಜ ಬಣ್ಣ ಹೊಂದಿದೆ. ರುಚಿ ಹೆಚ್ಚಿಸುವ ಯಾವುದೇ ಪದಾರ್ಥಗಳನ್ನು ಬಳಸುವುದಿಲ್ಲ ಎನ್ನುತ್ತಾರೆ ಸುಹಾಸ್​ ಮರಿಕೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × two =
Remember me
