|ಶ್ರೀಕಾಂತ್ ಶೇಷಾದ್ರಿಬೆಂಗಳೂರು
ತಮ್ಮ ಕ್ಷೇತ್ರದಲ್ಲಿ ಸಾಂಸ್ಕೃತಿಕ ಉತ್ಸವ ನಡೆಸಬೇಕು, ತಕ್ಷಣ ಹಣ ಬಿಡುಗಡೆ ಮಾಡಿ ಎಂದು ಶಾಸಕರು ಸರ್ಕಾರಕ್ಕೆ ದಂಬಾಲು ಬಿದ್ದಿರುವ ಪ್ರಸಂಗ ನಡೆದಿದೆ. ಕ್ಷೇತ್ರದ ಜನರನ್ನು ಖುಷಿಪಡಿಸುವುದು, ಚುನಾವಣಾ ತೆರೆಮರೆ ತಂತ್ರಗಾರಿಕೆ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಸೇರಿ ವಿವಿಧ ಆಯಾಮಗಳಲ್ಲಿ ಸಾಂಸ್ಕೃತಿಕ ಉತ್ಸವ ಆಚರಿಸಲು ಬಯಸಿರುವ ಶಾಸಕರನೇಕರು ಅನುದಾನ ಬಯಸಿ ಸಿಎಂ ಬೆನ್ನುಬಿದ್ದಿದ್ದಾರೆ. ಈ ನಡುವೆ ಕೋವಿಡ್ ಹಿನ್ನೆಲೆಯಲ್ಲಿ ವಿವಿಧ ಜಿಲ್ಲಾ ಉತ್ಸವಗಳು ರಂಗು ಕಳೆದುಕೊಂಡಿವೆ. ಈಗ ಅವುಗಳನ್ನು ಪುನಃ ವೈಭವದಿಂದ ಆಚರಿಸುವ ಮೂಲಕ ಮರು ಚಾಲನೆಗೊಳಿಸುವುದು ಒಂದೆಡೆಯಾದರೆ, ಅನೇಕ ಶಾಸಕರು ಹೊಸದಾಗಿ ಪ್ರಸ್ತಾವನೆಗಳನ್ನು ಸಹ ತರುತ್ತಿದ್ದಾರೆ. ಜಿಲ್ಲೆ ಬದಲು ತಮ್ಮ ವಿಧಾನಸಭಾ ಕ್ಷೇತ್ರಕ್ಕೆ ಸೀಮಿತವಾಗಿ ಉತ್ಸವ ಆಚರಿಸಲು ಅವಕಾಶ ಕೊಡಿ ಎಂದು ಸರ್ಕಾರಕ್ಕೆ ಮೊರೆ ಇಟ್ಟಿದ್ದಾರೆ. ಒಂದು ಮಾಹಿತಿ ಪ್ರಕಾರ 55 ಶಾಸಕರು ಉತ್ಸವ ಆಚರಣೆಗೆ, 50 ಲಕ್ಷ ರೂ.ನಿಂದ 1 ಕೋಟಿ ರೂ. ವರೆಗೂ ಅನುದಾನ ಕೊಡಬೇಕೆಂದು ಪ್ರಸ್ತಾವನೆ ಬೇಡಿಕೆ ಇಟ್ಟಿದ್ದಾರೆ.
ಹಿಂದಿನ ಸರ್ಕಾರಗಳು ಕಾಲದಿಂದ ಕಾಲಕ್ಕೆ ಜಿಲ್ಲಾ ಮಟ್ಟದಲ್ಲಿ ಹೊಸ ಹೊಸ ಉತ್ಸವ ಆಚರಣೆಗಳನ್ನು ಘೋಷಿಸಿ ಜನರ ಮನ ಗೆಲ್ಲಲು ಪ್ರಯತ್ನಿಸಿದ್ದಿದೆ. ಈಗಲೂ ಸಹ ಅದೇ ದಾರಿಯಲ್ಲಿ ಜನ ಪ್ರತಿನಿಧಿಗಳು ಸಾಗುತ್ತಿದ್ದಾರೆ. ಮೈಸೂರು- ದಸರಾ ಉತ್ಸವ ಹೊರತಾಗಿ ಬೆಳಗಾವಿ- ಕಿತ್ತೂರು ಉತ್ಸವ, ಬಳ್ಳಾರಿ- ಹಂಪಿ ಉತ್ಸವ, ಬಾದಾಮಿ – ಚಾಲುಕ್ಯ ಉತ್ಸವ, ಉತ್ತರ ಕನ್ನಡ – ಕದಂಬ ಉತ್ಸವ, ಬೀದರ್- ಬೀದರ್ ಉತ್ಸವ, ಕೊಪ್ಪಳ- ಆನೆಗೊಂದಿ ಉತ್ಸವ, ಬಳ್ಳಾರಿ- ಪುರಂದರ ಉತ್ಸವ, ಚಿತ್ರದುರ್ಗ- ದುರ್ಗ ಉತ್ಸವ, ಹಾಸನ- ಹೊಯ್ಸಳ ಉತ್ಸವ, ವಿಜಯಪುರ- ನವರಸ ಪುರ ಉತ್ಸವ, ಮಂಡ್ಯ- ಗಗನಚುಕ್ಕಿ ಜಲಪಾತ ಉತ್ಸವ, ಚಾಮರಾಜ ನಗರ- ಭರಚುಕ್ಕಿ ಜಲಪಾತ ಉತ್ಸವ, ಗದಗ- ಲಕ್ಕುಂಡಿ ಉತ್ಸವ, ಬಾಗಲಕೋಟೆ- ರನ್ನ ಉತ್ಸವ ಪ್ರಮುಖವಾದದ್ದು. ಈ ಉತ್ಸವಗಳಿಗೆ ಸರ್ಕಾರದಿಂದ ವಿಶೇಷ ಅನುದಾನ ಕೊಟ್ಟಿದ್ದೂ ಇದೆ. ಕೋವಿಡ್ ಕಾರಣಕ್ಕೆ, ನೆರೆ, ಅತಿವೃಷ್ಟಿಯಿಂದಾಗಿ ಕಳೆದ ಎರಡು ವರ್ಷದಿಂದ ಬಹುತೇಕ ಉತ್ಸವಗಳು ಈಗ ಆಚರಣೆಯಾಗುತ್ತಿಲ್ಲ. ಆದರೆ, ಭಕ್ತರ ಅಪೇಕ್ಷೆಯ ಧಾರ್ವಿುಕ ಜಾತ್ರೋತ್ಸವ ನಿಂತಿಲ್ಲ. ಸರ್ಕಾರ ತಕ್ಕ ಮಟ್ಟಿಗೆ ಹಣ ಕೊಡುವುದು ನಿಲ್ಲಿಸಿಲ್ಲ. ಆದರೆ, ಸಾಂಸ್ಕೃತಿಕ, ಸ್ಥಳೀಯ ಕಲಾವಿದರಿಗೆ ಪ್ರೋತ್ಸಾಹ ನೀಡುವ ಉದ್ದೇಶಿತ ಕಾರ್ಯಕ್ರಮಕ್ಕೆ ಹಣ ಬಿಡುಗಡೆಯಾಗಿಲ್ಲ ಎಂಬುದು ಶಾಸಕರ ಕೊರಗು. ಪ್ರಸ್ತುತ ಆರ್ಥಿಕ ಪರಿಸ್ಥಿತಿ ಚೇತರಿಸಿಕೊಂಡ ಬೆನ್ನಲ್ಲೇ ಮತ್ತು ಚುನಾವಣೆ ವರ್ಷವಾಗಿರುವುದರಿಂದ ಹೇಗಾದರೂ ಮಾಡಿ ಅನುದಾನ ಪಡೆದುಕೊಂಡು ಉತ್ಸವ ಆಚರಿಸಬೇಕೆಂದು ಶಾಸಕರ ಒತ್ತಾಯ ಶುರುವಾಗಿದೆ.
ಸಾಂಸ್ಕೃತಿಕ ವೈಭವ ಮರುಕಳಿಸುವಂತಹ ರೀತಿಯಲ್ಲೇ ಜಿಲ್ಲಾ ಉತ್ಸವ ಸಂಘಟಿಸಲು ಚಿಂತನೆ ನಡೆಸಲಾಗಿದೆ. ಈ ನಿಟ್ಟಿನಲ್ಲಿ ಶಾಸಕರಿಂದ ಸಲ್ಲಿಕೆಯಾದ ಕೋರಿಕೆಗಳನ್ನು ಪರಿಗಣಿಸಲಾಗುವುದು.
|ಸುನೀಲ್ ಕುಮಾರ್ಕನ್ನಡ ಮತ್ತು ಸಂಸ್ಕೃತಿ ಸಚಿವ
ಕಳೆದ ಒಂದು ತಿಂಗಳಿಂದೀಚೆಗೆ ಇಂತಹ ಪ್ರಸ್ತಾವನೆಗಳು ಸರ್ಕಾರಕ್ಕೆ ಸಲ್ಲಿಕೆಯಾಗಿದೆ. ಆದರೆ, ಆರ್ಥಿಕ ಇಲಾಖೆ ಅನುದಾನ ಬಿಡುಗಡೆಗೆ ಬಿಲ್​ಕುಲ್ ನಿರಾಕರಿಸಿದೆ. ಆದರೂ ಪ್ರಭಾವಿ ಶಾಸಕರು ಮುಖ್ಯಮಂತ್ರಿಯವರಿಂದ ನೇರವಾಗಿ ಅನುಮೋದನೆ ಪಡೆದುಕೊಂಡಿದ್ದಿದೆ. 1-2 ಕೋಟಿ ರೂ. ವಿಶೇಷ ಅನುದಾನಕ್ಕೆ ಬೇಡಿಕೆ ಇಟ್ಟು, ಸಿಎಂ ಸಹಿ ಹಾಕಿಸಿ ಹಣ ಬಿಡುಗಡೆಗೆ ಕಡತದದ ಹಿಂದೆ ಓಡಾಡುತ್ತಿರುವವರೂ ಇದ್ದಾರೆ. ಈ ರೀತಿಯ ಕಾರ್ಯಕ್ರಮದ ಮೂಲಕ ಕ್ಷೇತ್ರದಲ್ಲಿ ಧನಾತ್ಮಕ ಅಭಿಪ್ರಾಯ ಮೂಡಿಸುವುದು, ಜನರಿಗೆ ಹತ್ತಿರವಾಗುವುದು, ಇನ್ನೂ ಮುಖ್ಯವಾಗಿ ಜಾತಿ ಮೀರಿದ ಸಮೀಕರಣವೂ ಪ್ರಯತ್ನದ ಹಿಂದೆ ಅಡಗಿದೆ. ಕೆಲವು ಪ್ರಸಂಗಗಳಲ್ಲಿ ಜಾತಿ ಲೆಕ್ಕಾಚಾರವೂ ಇದೆ. ಉತ್ಸವ ಆಚರಣೆಗಳು ಪ್ರತ್ಯಕ್ಷ ಪರೋಕ್ಷವಾಗಿ ಚುನಾವಣೆ ವೇಳೆ ನೆರವಿಗೆ ಬರಲಿದೆ ಹಾಗೂ ಕ್ಷೇತ್ರದಲ್ಲಿ ತಮ್ಮ ಪರವಾದ ಅಭಿಪ್ರಾಯ ರೂಪಿಸಲು ಅನುಕೂಲವಾಗಲಿದೆ ಎಂಬ ಆಶಯ ಶಾಸಕರಲ್ಲಿದೆ.
ಮತ್ತೆ ಒತ್ತಡ:ಈಗಾಗಲೆ ಉತ್ಸವಕ್ಕೆ ಹಣ ತರಲು ಸಾಧ್ಯವಾಗದೇ ಇರುವ ಶಾಸಕರು ವಿವಿಧ ಸಚಿವರ ಬೆನ್ನುಹತ್ತಿದ್ದು, ಹೇಗಾದರೂ ಸಿಎಂ ಮನವೊಲಿಸಿ ಅನುದಾನ ಕೊಡಿಸಿ ಎಂದು ಗೋಗರೆ ಯುತ್ತಿದ್ದಾರೆ. ಹಾಗೆಯೇ ಪಕ್ಷದ ಮೂಲಕವೂ ಒತ್ತಡ ತರುವ ಕೆಲಸ ನಡೆಸಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಸಚಿವರಿಗೂ ಸಂದಿಗ್ಧ ಸ್ಥಿತಿ ನಿರ್ವಣವಾಗಿದೆ. ಈ ಕಾರಣಕ್ಕೆ ಪುನಃ ಸಿಎಂ ಮನವೊಲಿಸುವ ಪ್ರಯತ್ನ ನಡೆಯಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದೆಹಲಿಯಿಂದ ಬರುತ್ತಿದ್ದಂತೆ ಉತ್ಸವಗಳ ಪಟ್ಟಿಯೊಂದಿಗೆ ಸಿಎಂ ಭೇಟಿ ಮಾಡಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರೂ ಸಹ ನಿರ್ಧರಿಸಿದ್ದಾರೆ. ಸದ್ಯದ ಮಾಹಿತಿ ಪ್ರಕಾರ ಜಿಲ್ಲೆಗೊಂದರಂತೆ 31 ಜಿಲ್ಲಾ ಉತ್ಸವಕ್ಕೆ ಅವಕಾಶ ಕಲ್ಪಿಸುವ ಚಿಂತನೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.
ಕುತ್ತಿಗೆಗೆ ಚುಚ್ಚಿಕೊಂಡಿದ್ದ ತ್ರಿಶೂಲಸಹಿತ ಶಸ್ತ್ರಚಿಕಿತ್ಸೆಗಾಗಿ 65 ಕಿಲೋಮೀಟರ್​ ಪ್ರಯಾಣಿಸಿದ ಭೂಪ!

ಹೆಂಡ್ತಿ ಜತೆ ಜಗಳವಾಡಿ ಬಂದವನ ಕಂಡು ನಾಯಿ ಬೊಗಳಿತು; ಸಿಟ್ಟಾದ ಆತ ಅದರ ಒಡತಿಯನ್ನೇ ಕೊಂದ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 + 7 =
Remember me
