ಬೆಂಗಳೂರು:ವಕ್ಫ ಬೋರ್ಡ್ ಮಾದರಿಯಂತೆ ಹಿಂದೂ ದೇವಸ್ಥಾನಗಳಿಗೂ ಎ್ಲ ಅಧಿಕಾರವನ್ನು ನೀಡುವ ಮಂದಿರ ಬೋರ್ಡ್ ಸ್ಥಾಪಿಸಿ ಎಂದು ಸರ್ವೋಚ್ಚ ನ್ಯಾಯಾಲಯ ನ್ಯಾಯವಾದಿ ವಿಷ್ಣು ಶಂಕರ್ ಜೈನ್ ಅಭಿಪ್ರಾಯ ಪಟ್ಟಿದ್ದಾರೆ.ಗೋವಾದ ಪೊಂಡಾದಲ್ಲಿ ನಡೆಯುತ್ತಿರುವ ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದ ಸಮಾವೇಶದಲ್ಲಿ ದೇವಸ್ಥಾನ ಸಂಸ್ಕೃತಿ ಪರಿಷತ್ತು ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಹಿಂದಿನ ಕಾಂಗ್ರೆಸ್ ಸರಕಾರ ವಕ್ಫ ಬೋರ್ಡ್ ಸ್ಥಾಪಿಸಿ ಮುಸ್ಲಿಮರ ಧಾರ್ಮಿಕ ಆಸ್ತಿ ಮತ್ತು ಭೂಮಿ ರಕ್ಷಿಸಲು ವಿಶೇಷ ಕಾನೂನು ಅಧಿಕಾರ ನೀಡಿದೆ. ಅದೇ ರೀತಿ ದೇಶಾದ್ಯಂತ ಇರುವ ಹಿಂದೂ ದೇವಾಲಯಗಳು, ಅದರ ಭೂಮಿ ಮತ್ತು ಆಸ್ತಿಯನ್ನು ರಕ್ಷಿಸಲು ಹಿಂದೂ ಮಂದಿರ ಬೋರ್ಡ್ ಸ್ಥಾಪಿಸಬೇಕು ಅಲ್ಲದೆ, ಕೇವಲ ಹಿಂದೂ ದೇವಸ್ಥಾನಗಳನ್ನು ಸ್ವಾಧೀನಪಡಿಸಿಕೊಳ್ಳುವ 1951 ರ ’ರಿಲಿಜಿಯಸ್ ಎಂಡೋವ್‌ಮೆಂಟ್ ಆಕ್ಟ್’ ರದ್ದುಪಡಿಸುವುದರ ಜತಗೆ  ಹಿಂದೂ ದೇವಸ್ಥಾನಗಳನ್ನು ತಕ್ಷಣ ಸರ್ಕಾರದ ನಿಯಂತ್ರಣದಿಂದ ಮುಕ್ತಗೊಳಿಸಬೇಕು ಎಂದು ಆಗ್ರಹಿಸಿದರು.
ಮಹಾರಾಷ್ಟ್ರ ಮಂದಿರ ಮಹಾಸಂಘದ ಸುನಿಲ ಘನವಟ ಮಾತನಾಡಿ, ಈ ಹಿಂದೂ ಅಧಿವೇಶನದ ಮೂಲಕ ದೇವಸ್ಥಾನ ಸಂಸ್ಕೃತಿ ಸಂರಕ್ಷಣಾ ಅಭಿಯಾನ ಆರಂಭಿಸಲಾಗಿತ್ತು. ಸದ್ಯ ದೇಶಾದ್ಯಂತ ಸುಮಾರು 14 ಸಾವಿರ ದೇವಸ್ಥಾನಗಳ ಸಂಘಟನೆಯಾಗಿದೆ. ಈ ಅಧಿವೇಶನದಲ್ಲಿ 275 ಕ್ಕೂ ಹೆಚ್ಚು ದೇವಸ್ಥಾನಗಳ ವಿಶ್ವಸ್ಥರು, ಅರ್ಚಕರು ಪಾಲ್ಗೊಂಡಿದ್ದರು. ಅಲ್ಲದೆ ಈಗಾಗಲೇ ದೇಶಾದ್ಯಂತ 710 ದೇವಸ್ಥಾನಗಳಲ್ಲಿ ವಸ್ತ್ರಸಂಹಿತೆ ಜಾರಿಯಾಗಿದ್ದು, ಈ ಅಭಿಯಾನವನ್ನು ಮತ್ತಷ್ಟು ವಿಸ್ತರಿಸಿ, ದೇವಸ್ಥಾನಗಳ ವಸ್ತ್ರ ಸಂಹಿತೆಯೊಂದಿಗೆ ದೇಶಾದ್ಯಂತ ’ದೇವಸ್ಥಾನಗಳು,ಮದ್ಯ,ಮಾಂಸ ಮುಕ್ತ’ ಅಭಿಯಾನ ಹಮ್ಮಿಕೊಳ್ಳುತ್ತೇವೆ ಎಂದರು.
ಮಹಾರಾಷ್ಟ್ರದ ಶ್ರೀ ಶನಿಶಿಂಗಣಾಪುರ ದೇವಸ್ಥಾನದ 19 ಎಕರೆ, ಬೀಡ್‌ನಲ್ಲಿರುವ ಶ್ರೀ ಕಂಕಾಲೇಶ್ವರ ದೇವಸ್ಥಾನದ 12.5 ಎಕರೆ, ತಮಿಳುನಾಡಿನ ತಿರುಚಿರಾಪಳ್ಳಿ ಗ್ರಾಮದ 1500 ವರ್ಷಗಳಷ್ಟು ಹಳೆಯದಾದ ಶ್ರೀ ಚಂದ್ರಶೇಖರ್ ಸ್ವಾಮಿ ದೇವಸ್ಥಾನ ಸೇರಿದಂತೆ ಸುಮಾರು 1200 ಎಕರೆ ಭೂಮಿಯನ್ನು ವಕ್ಫ ಮಂಡಳಿ ಹಕ್ಕು ಸಾಧಿಸಿದೆ. ಈ ರೀತಿ ಹಲವೆಡೆ ದೇವಸ್ಥಾನದ ಜಮೀನು ವಕ್ಫ ಕಬಳಿಸಿದೆ. ವಕ್ಫ ಬೋರ್ಡ್ ಒತ್ತುವರಿ ಮಾಡಿಕೊಂಡಿರುವ ದೇವಸ್ಥಾನಗಳ ಜಮೀನುಗಳನ್ನು ಕೂಡಲೇ ಹಸ್ತಾಂತರಿಸಲು ಸರಕಾರ ಆದೇಶ ಹೊರಡಿಸಬೇಕು ಎಂದು ಹೇಳಿದರು.
ಗೋಮಾಂತಕ ಮಂದಿರ ಮಹಾಸಂಘದ ರಾಜ್ಯ ಕಾರ್ಯದರ್ಶಿ ಜಯೆಶ ಥಳಿ ಮಾತನಾಡಿ ಗೋವಾ ಸರಕಾರ ಸ್ಪಷ್ಟೀಕರಣ ನೀಡಿದೆ. ಆದರೆ, ಸರಕಾರಿ ಆದೇಶದಲ್ಲಿ ಧಾರ್ಮಿಕ ಸ್ಥಳಗಳು ಮತ್ತು ಶಾಲೆಗಳ 100 ಮೀಟರ್ ವ್ಯಾಪ್ತಿಯಲ್ಲಿ ಹೊಸ ಮದ್ಯದಂಗಡಿಗಳಿಗೆ ಅನುಮತಿ ನೀಡುವ ಬಗ್ಗೆ ಸ್ಪಷ್ಟವಾಗಿ ಆದೇಶ ನೀಡಿದೆ. ಆದ್ದರಿಂದ, ಇದನ್ನು ಗೋಮಾಂತಕ ದೇವಸ್ಥಾನ ಮಹಾಸಂಘ ವಿರೋಧಿಸುತ್ತದೆ. ಸರಕಾರವು ಪ್ರವಾಸೋದ್ಯಮ ದೃಷ್ಟಿಯಿಂದ ಇಂತಹ ಕೆಟ್ಟ ನಿರ್ಧಾರ ಕೈಗೊಂಡಿದ್ದು ಇದು ಪ್ರವಾಸಿಗರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಜಾಮಾ ಮಸೀದಿ ಅಥವಾ ಹಳೇ ಗೋವಾ ಚರ್ಚ್‌ನ ಪಕ್ಕದಲ್ಲಿ ಶೇ.200 ರಷ್ಟು ಪರಿಷ್ಕೃತ ಶುಲ್ಕ ಪಾವತಿಸಿ ಮದ್ಯದಂಗಡಿ ತೆರೆಯುವಂತೆ ಒತ್ತಾಯಿಸಿದರೆ, ಸರಕಾರ ಪ್ರವಾಸೋದ್ಯಮದ ದೃಷ್ಟಿಯಿಂದ ವಿಚಾರ ಮಾಡಿ ಇದಕ್ಕೆ ಅನುಮತಿ ನೀಡುವುದೇ ಎಂದು ಪ್ರಶ್ನೇ ಮಾಡಿದ ಅವರು ಸರಕಾರ ಇದರ ಉತ್ತರ ನೀಡಬೇಕು. ವ್ಯಸನಗಳಿಂದಾಗಿ ಇಂದು ಪಂಜಾಬ್ ಅನ್ನು ’ಉಡತಾ ಪಂಜಾಬ್ ಎಂದು ಕರೆಯಲಾಗುತ್ತಿದೆ. ಅದೇ ರೀತಿ ಗೋವಾವನ್ನು ಉಡತಾ ಗೋವಾ ಮಾಡಲು ಹೊರಟಿಸಿದೆ ಈಗಾಗಿ ಸರಕಾರ ಈ ಕಾನೂನನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.
ದೇವಸ್ಥಾನದ ಆರ್ಥಿಕ ನಿರ್ವಹಣೆ ಕುರಿತು ಮಾತನಾಡಿದ ಅಧ್ಯಯನಕಾರ ಗಿರೀಶ ಶಾ ದೇವಸ್ಥಾನಗಳ ಒಟ್ಟು ಆರ್ಥಿಕ ಆದಾಯದ ಶೇ.10 ರಷ್ಟು ನಿಧಿಯನ್ನು ಮಾತ್ರ ಪೂಜೆ ಮತ್ತು ನಿರ್ವಹಣೆಗೆ ಮೀಸಲಿಡಬೇಕು, ಉಳಿದ ಹಣವನ್ನು ದೇವಸ್ಥಾನಗಳ ಸಂವರ್ಧನೆ, ಜೀರ್ಣೋದ್ಧಾರ, ಸೌಲಭ್ಯಗಳು, ಸಣ್ಣ ದೇವಸ್ಥಾನಗಳಿಗೆ ಧನ ಸಹಾಯ ಹಾಗೂ ಸಮಾಜಕ್ಕೆ ಪೂರಕ ಮಾಡಲು ಬಳಸಬೇಕು ಎಂದು ಹೇಳಿದರು. ಅಲ್ಲದೆ, ದೇವಸ್ಥಾನದ ಆರ್ಥಿಕ ನಿರ್ವಹಣೆ, ಸುವ್ಯವಸ್ಥೆ ಮತ್ತು ಸಂವರ್ಧನೆಯ ವಿಷಯದಲ್ಲಿ ವಿವಿಧ ದೇವಸ್ಥಾನಗಳಿಗೆ ಮಾರ್ಗದರ್ಶನ ನೀಡಲಾಗುವುದು ಎಂದು ಹೇಳಿದರು.
ಉತ್ತರ ಪ್ರದೇಶದ ಪವನ್ ಚಿಂತನ್ ಧಾರಾ ಆಶ್ರಮದ ಪೂಜ್ಯ ಪವನ ಸಿನ್ಹಾ ಗುರೂಜಿ ಮಾತನಾಡಿ ಜಾತ್ಯತೀತ ರಾಷ್ಟ್ರದ ಸರ್ಕಾರ ಕೇವಲ ಹಿಂದೂ ದೇವಾಲಯಗಳನ್ನು ಸ್ವಾಧೀನಪಡಿಸಿಕೊಳ್ಳುವುದು ಸೂಕ್ತವಲ್ಲ ಎಂದು ಹೇಳಿದರು. ಆದ್ದರಿಂದ ಸರಕಾರ ಎಲ್ಲ ದೇವಸ್ಥಾನಗಳನ್ನು ತನ್ನ ಹಿಡಿತದಿಂದ ಮುಕ್ತಗೊಳಿಸಬೇಕು ಎಂಬುದು ನಮ್ಮ ಆಗ್ರಹ. ಈ ಉದ್ದೇಶಕ್ಕಾಗಿ ನಾವು ದೇವಸ್ಥಾನ ಸಂಸ್ಕೃತಿ ಪರಿಷತ್ತು ಆಯೋಜಿಸಿದ್ದೇವೆ ಎಂದರು.
.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 3 =
Remember me
