ಬೆಂಗಳೂರು:ವಿಮಾನ ಪ್ರಯಾಣಿಕರಿಗೊಂದು ಗುಡ್​​ ನ್ಯೂಸ್​. ಮೆಜೆಸ್ಟಿಕ್​ನ ಕೆಎಸ್​ಆರ್​(ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ) ರೈಲು ನಿಲ್ದಾಣದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗಲು ನೂರಾರು ರೂಪಾಯಿ ವ್ಯಯಿಸಬೇಕಿಲ್ಲ, 10 ರೂಪಾಯಿ ಇದ್ದರೆ ಸಾಕು!
ಹೌದು, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ರೈಲು ಪ್ರಯಾಣದ ಕನಸು ಸಾಕಾರಗೊಂಡಿದ್ದು, ಇಂದಿನಿಂದ(ಸೋಮವಾರ) ಕೆಎಸ್​ಆರ್​ ರೈಲು ನಿಲ್ದಾಣದಿಂದ ದೇವನಹಳ್ಳಿಗೆ ಡೆಮು ರೈಲು ಸಂಚಾರ ಆರಂಭಗೊಂಡಿದೆ.ಇದನ್ನೂ ಓದಿರಿಕಾಲು ಕಳೆದುಕೊಂಡ ಅಭಿಮಾನಿಯ ಬಾಳಿಗೆ ಬೆಳಕಾದ ಕಿಚ್ಚ!
ಸದ್ಯ ಪ್ರತಿದಿನ 5 ರೈಲುಗಳು ಸಂಚರಿಸಲಿವೆ. ವಿಮಾನಗಳು ಹೆಚ್ಚು ಸಂಚರಿಸುವ ವೇಳೆ ಉಪನಗರ ರೈಲುಗಳು ಕಾರ್ಯಾಚರಣೆ ಮಾಡಲಿವೆ. ಕೆಎಸ್​ಆರ್​ ರೈಲು ನಿಲ್ದಾಣದಿಂದ 10 ರೂಪಾಯಿ, ಕಂಟೋನ್ಮೆಂಟ್​ ರೈಲು ನಿಲ್ದಾಣದಿಂದ 15 ರೂಪಾಯಿ ದರದಲ್ಲಿ ವಿಮಾನ ನಿಲ್ದಾಣ ತಲುಪಬಹುದು.
ಸೋಮವಾರ ಮುಂಜಾನೆ 4.45ಕ್ಕೆ ತನ್ನ ಮೊದಲ ಪ್ರಯಾಣವನ್ನು ಕೆಲವು ಪ್ರಯಾಣಿಕರೊಂದಿಗೆ ಪ್ರಾರಂಭಿಸಿದ ಕೆಎಸ್‌ಆರ್-ದೇವನಹಳ್ಳಿ ಡೆಮು ರೈಲು ಬೆಳಗ್ಗೆ 5.50ಕ್ಕೆ ವಿಮಾನ ನಿಲ್ದಾಣಕ್ಕೆ ತಲುಪಿತು. ಇದೇ ರೈಲಿನಲ್ಲಿ ಸಂಸದ ಪಿ.ಸಿ. ಮೋಹನ್​ ಮತ್ತು ರೈಲ್ವೆ ಇಲಾಖೆ ಹಿರಿಯ ಅಧಿಕಾರಿಗಳು ಪ್ರಯಾಣಿಸಿದರು.
ಕೆಎಸ್​ಆರ್​ ರೈಲು ನಿಲ್ದಾಣದಿಂದ ಹೊರಟ ಡೆಮು ರೈಲು, ವಿಮಾನ ನಿಲ್ದಾಣದಿಂದ ಮೂರು ಕಿ.ಮೀ. ದೂರದಲ್ಲಿರುವ ಹಾಲ್ಟ್​ ಸ್ಟೇಷನ್​ಗೆ ತಲುಪಲಿದ್ದು, ಅಲ್ಲಿಂದ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸಲು ಉಚಿತ ಬಸ್​ ವ್ಯವಸ್ಥೆ ಕಲ್ಪಿಸಲಾಗಿದೆ. ಟ್ರಾಫಿಕ್​ ಕಿರಿಕಿರಿ ಇಲ್ಲದೆ ಈ ಡೆಮು ರೈಲಿನ ಮೂಲಕ ವಿಮಾನ ನಿಲ್ದಾಣಕ್ಕೆ ಸೋಮವಾರ ಬೆಳಗ್ಗೆ ತೆಳಿದ ಪ್ರಯಾಣಿಕರು ಸಂತಸ ವ್ಯಕ್ತಪಡಿಸಿದರು.
ವೇಳಾಪಟ್ಟಿ1. ಕೆಎಸ್​ಆರ್​ ರೈಲು ನಿಲ್ದಾಣದಿಂದ ಬೆಳಗ್ಗೆ 4.45ಕ್ಕೆ ಹೊರಡುವ ರೈಲು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನನಿಲ್ದಾಣದ(ಕೆಐಎ) ಹಾಲ್ಟ್ ಸ್ಟೇಷನ್​ಗೆ ಬೆಳಗ್ಗೆ 5.50ಕ್ಕೆ ತಲುಪಲಿದೆ.2. ಕೆಎಸ್ಆರ್​ನಿಂದ ಬೆಳಗ್ಗೆ 9ಕ್ಕೆ ಹೊರಡುವ ರೈಲು ಬೆಳಗ್ಗೆ 10.05ಕ್ಕೆ ಕೆಐಎ ಹಾಲ್ಟ್ ಸ್ಟೇಷನ್ ತಲುಪಲಿದೆ.3. ಯಲಹಂಕ ನಿಲ್ದಾಣದಿಂದ ಬೆಳಗ್ಗೆ 7ಕ್ಕೆ ಹೊರಡುವ ರೈಲು ಬೆಳಗ್ಗೆ 7.20ಕ್ಕೆ ಕೆಐಎ ಹಾಲ್ಟ್ ಸ್ಟೇಷನ್ ತಲುಪಲಿದೆ.ಟಿಕೆಟ್​ ದರಯಶವಂತಪುರ ಮೂಲಕ ಕೆಎಸ್ಆರ್​ನಿಂದ ಮಾರ್ಗವಾಗಿ ಕೆಐಎ ಹಾಲ್ಟ್ ಸ್ಟೇಷನ್​ಗೆ ಹೋಗುವ ರೈಲಿನ ಟಿಕೆಟ್​ ದರ 10 ರೂಪಾಯಿ. ಬೈಯಪ್ಪನಹಳ್ಳಿ ಮೂಲಕ ಕೆಎಸ್ಆರ್​ನಿಂದ 15 ರೂಪಾಯಿ. ಯಲಹಂಕದಿಂದ ಕೆಐಎ ಹಾಲ್ಟ್ ಸ್ಟೇಷನ್​ಗೆ​ 10 ರೂಪಾಯಿ.
54ರ ಫಾಸ್ಟರ್ ಜತೆ 24ರ ಯುವತಿ ಮದುವೆ: ಇಲ್ಲಿದೆ ಎಕ್ಸ್​ಕ್ಲೂಸಿವ್​ ಫೋಟೋಸ್​

ವರ್ಷಾಚರಣೆಗೆ ಕೇಕ್​ ಕತ್ತರಿಸುತ್ತಿದ್ದ ಯುವಕರ ಹಿಂದೆಯೇ ಹಾದುಹೋದ ದೆವ್ವ! ಭಯಾನಕ ವಿಡಿಯೋ ಇಲ್ಲಿದೆ

24ರ ಯುವತಿ ಜತೆ ಮದುವೆಯಾಗಿ ಖುಷಿಯಾಗಿದ್ದ ಬೆನ್ನಲ್ಲೇ 54ರ ಫಾಸ್ಟರ್​ಗೆ ಶಾಕ್​!

ಸಿಂಹಾದ್ರಿಯ ಸಿಂಹ ಸಿನಿಮಾ ಪ್ರೇರಣೆ: ಯುವಕರು ಕಣಕ್ಕಿಳಿಸಿದ್ದ ನಿರ್ಗತಿಕನಿಗೆ ಗೆಲುವೇ? ಸೋಲೇ?

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:two × two =
Remember me
