ಬೆಂಗಳೂರು:ತೀವ್ರ ಬಿಸಿಲಿನಿಂದಾಗಿ ಇಡೀ ರಾಜ್ಯ ಜ್ವರ ಬಾಧೆಯಿಂದ ಬಳಲುತ್ತಿದ್ದು, ಸಾಮಾನ್ಯವಾಗಿ ಮುಂಗಾರಿನಲ್ಲಿ ಕಾಣಿಸಿಕೊಳ್ಳುತ್ತಿದ್ದ ಡೆಂಘೆ, ಚಿಕೂನ್ ಗುನ್ಯಾ ಜ್ವರ ಪ್ರಕರಣಗಳು ಬಿರು ಬಿಸಿಲಿನಲ್ಲೇ ಕಾಡಲಾರಂಭಿಸಿವೆ. ಕಳೆದ ಒಂದು ತಿಂಗಳಲ್ಲಿ 918 ಡೆಂಘೆ ಹಾಗೂ 200 ಚಿಕೂನ್ ಗುನ್ಯಾ ಪ್ರಕರಣಗಳು ವರದಿಯಾಗಿವೆ.
ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ ಜನವರಿಯಿಂದ ಈವರೆಗೂ ರಾಜ್ಯದಲ್ಲಿ 34,143 ಡೆಂಘೆ ಶಂಕಿತರನ್ನು ಗುರುತಿಸಲಾಗಿದ್ದು, 2,116 ಡೆಂಘೆ ಹಾಗೂ 11,968 ಶಂಕಿತರಲ್ಲಿ 464 ಚಿಕೂನ್ ಗುನ್ಯಾ ಪ್ರಕರಣಗಳು ದೃಢಪಟ್ಟಿವೆ. ಇದರಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಕ್ರಮವಾಗಿ 535 ಹಾಗೂ 57 ಪ್ರಕರಣಗಳು ವರದಿಯಾಗಿವೆ.
ಕಳೆದ ವರ್ಷ (2023ರಲ್ಲಿ) ಈ ಅವಧಿಗೆ ಜನವರಿಯಿಂದ ಮಾರ್ಚ್ ಅಂತ್ಯದವರೆಗೆ 971 ಪ್ರಕರಣಗಳು ವರದಿಯಾಗಿದ್ದವು. ಆದರೆ ಈ ಬಾರಿ 2 ಸಾವಿರ ಗಡಿ ದಾಟಿದೆ. ಬೇಸಿಗೆಯಲ್ಲಿ ಹಳ್ಳ ಕೊಳ್ಳಗಳಲ್ಲಿ ನೀರು ನಿಲ್ಲದಿದ್ದರೂ,ಈ ಬಾರಿ ರಾಜ್ಯಾದ್ಯಂತ ನೀರಿನ ಕೊರತೆ ವ್ಯಾಪಕವಾಗಿರುವುದರಿಂದ ಮನೆಗಳಲ್ಲಿ ತೊಟ್ಟಿ, ಡ್ರಮ್, ಬಿಂದಿಗೆ ಸೇರಿ ನೀರು ಸಂಗ್ರಹಣೆ ಮಾಡಲಾಗುತ್ತಿದೆ. ಇದು ಶುದ್ಧನೀರಿನಲ್ಲಿ ಉತ್ಪತ್ತಿಯಾಗುವ ಈಡಿಸ್ ಸೊಳ್ಳೆಗಳಿಗೆ ವರದಾನವಾಗಿ ಪರಿಣಮಿಸಿದ್ದು, ಹೀಗಾಗಿ ಡೆಂಘೆ ಹಾಗೂ ಚಿಕೂನ್ ಗುನ್ಯಾ ಪ್ರರಕಣಗಳು ಏರಿಕೆಯಾಗಿವೆ.
ಜಿಲ್ಲಾವಾರು ಮಾಹಿತಿ:ಬಿಬಿಎಂಪಿ ವ್ಯಾಪ್ತಿಯಲ್ಲಿ ಅಧಿಕ ಪ್ರಕರಣಗಳು (535) ವರದಿಯಾಗಿವೆ. ಮೈಸೂರು (164), ಚಿತ್ರದುರ್ಗ (146), ಶಿವಮೊಗ್ಗ (132) ಹಾಗೂ ದಕ್ಷಿಣ ಕನ್ನಡ (106) ಸೇರಿ ಎಲ್ಲಾ ಜಿಲ್ಲೆಗಳಲ್ಲೂ ಪ್ರಕರಣಗಳು ವರದಿಯಾಗಿವೆ. ಅದೇ ರೀತಿ ಶಿವಮೊಗ್ಗ (190) ಸೇರಿ ರಾಜ್ಯದ 25 ಜಿಲ್ಲೆಗಳಿಂದ ಚಿಕೂನ್‌ಗುನ್ಯ ಪ್ರಕರಣಗಳು ವರದಿಯಾಗಿದ್ದು, ಒಟ್ಟು ಬಾಧಿತರ ಸಂಖ್ಯೆ 464ಕ್ಕೆ ಏರಿಕೆಯಾಗಿದೆ.
ರೋಗ ಲಕ್ಷಣಗಳು:ದಿಢೀರ್ ಜ್ವರ, ತಲೆನೋವು, ಮೂಗಿನಲ್ಲಿ ಸೋರುವಿಕೆ, ಗಂಟಲು ನೋವು, ವಾಂತಿ, ಹೊಟ್ಟೆ ನೋವು, ತೋಳು ಮತ್ತು ಮೈ-ಕೈ ನೋವು, ಅತಿಸಾರ, ಗಂಭೀರ ಹಂತದಲ್ಲಿ ಕರುಳಿನಲ್ಲಿ ರಕ್ತಸ್ರಾವ ಉಂಟಾಗುತ್ತದೆ.
ಎಚ್ಚರಿಕೆ ಕ್ರಮಗಳು:*ಡೆಂಘೆಗೆ ನಿರ್ದಿಷ್ಟ ಔಷಧಿ ಇಲ್ಲ ಹಾಗಾಗಿ ಎಚ್ಚರಿಕೆ ಕ್ರಮವೇ ಮದ್ದು* ಹಗಲಿನಲ್ಲಿ ಸೊಳ್ಳೆ ಕಚ್ಚದಂತೆ ಎಚ್ಚರವಹಿಸಿ* ಯಾವುದೇ ಜ್ವರ ಲಕ್ಷಣ ಕಂಡುಬಂದಲ್ಲಿ ನಿರ್ಲಕ್ಷಿಸದೆ ವೈದ್ಯರಲ್ಲಿ ಚಿಕಿತ್ಸೆ ಪಡೆಯಿರಿ* ಶುದ್ಧ ಮತ್ತು ಕುದಿಸಿ ಆರಿಸಿದ ನೀರನ್ನೇ ಕುಡಿಯಿರಿ* ಪಾತ್ರೆ ಬಿಂದಿಗೆ ಡ್ರಮ್‌ಗಳಲ್ಲಿ ಹೆಚ್ಚು ದಿನ ನೀರು ಸಂಗ್ರಹಿಸಿಡಬೇಕು* ಸಂಗ್ರಹಿಸಿದ ನೀರಿನ ಪಾತ್ರೆ, ಡ್ರಮ್‌ಗಳ ಮುಚ್ಚಳ ಸರಿಯಾಗಿ ಮುಚ್ಚಿ* ಸೀನುವಾಗ, ಕೆಮ್ಮುವಾಗ ಕರವಸ ಬಳಸಿ
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:fourteen − five =
Remember me
