ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಕರ್ನಾಟಕದಲ್ಲಿ ಪ್ರಸಕ್ತ ವರ್ಷ ಡೆಂಘ ತೀವ್ರ ಸ್ವರೂಪ ಪಡೆದುಕೊಂಡಿದೆ. ಈವರೆಗೂ (ಸೆ. 3) 25,589 ಸೋಂಕು ಪ್ರಕರಣಗಳು ವರದಿಯಾಗಿವೆ. ಸೋಂಕಿನ ತೀವ್ರತೆಗೆ 12 ಮಂದಿ ಮೃತಪಟ್ಟಿದ್ದಾರೆ. ಹಾಗಾಗಿ ರಾಜ್ಯ ಸರ್ಕಾರ ಡೆಂಘೆಯನ್ನು ಸಾಂಕ್ರಾಮಿಕ ರೋಗ ಎಂದು ಘೋಷಿಸಿದೆ.
ಈ ಸಂಬಂಧ ಸರ್ಕಾರ ಸಾಂಕ್ರಾಮಿಕ ರೋಗಗಳ ಕಾಯ್ದೆ 2020ರಡಿ ನಿಯಮಗಳನ್ನು ತಿದ್ದುಪಡಿ ಮಾಡಿದೆ. ಕರ್ನಾಟಕ ಸಾಂಕ್ರಾಮಿಕ ರೋಗಗಳು (ತಿದ್ದುಪಡಿ ನಿಯಮಗಳು) 2024 ಅನ್ನು ಕಳೆದ ವಾರ ಅಧಿಕೃತ ಗೆಜೆಟ್​ನಲ್ಲಿ ಪ್ರಕಟಿಸಲಾಗಿದೆ. ತಿದ್ದುಪಡಿ ಮಾಡಲಾದ ನಿಯಮಗಳ ಪ್ರಕಾರ, ಜಮೀನು, ಕಟ್ಟಡ ಅಥವಾ ನೀರಿನ ಟ್ಯಾಂಕ್​ಗಳು, ಉದ್ಯಾನಗಳು, ಆಟದ ಮೈದಾನ ಸೇರಿ ಯಾವುದೇ ಸ್ಥಳದ ಮಾಲೀಕರು, ಒತ್ತುವರಿದಾರರು, ಬಿಲ್ಡರ್ ಅಥವಾ ಇತರ ವ್ಯಕ್ತಿಗಳು ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಲು ಅಗತ್ಯ ಕ್ರಮ ಕೈಗೊಳ್ಳುವುದು ಕಡ್ಡಾಯವಾಗಿದೆ. ಇದು ನೀರಿನ ಶೇಖರಣಾ ಪಾತ್ರೆಗಳು, ಸಂಪ್​ಗಳು ಮತ್ತು ಓವರ್​ಹೆಡ್ ಟ್ಯಾಂಕ್​ಗಳನ್ನು ಸುರಕ್ಷಿತವಾಗಿ ಮುಚ್ಚಿರುವುದನ್ನು ಖಚಿತಪಡಿಸಿಕೊಳ್ಳುವುದನ್ನು ಒಳಗೊಂಡಿರುತ್ತದೆ.
ಸಕ್ಷಮ ಪ್ರಾಧಿಕಾರ ರಚನೆ:ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಪ್ರದೇಶದ ಅಧಿಕಾರ ವ್ಯಾಪ್ತಿಗಾಗಿ ಬಿಬಿಎಂಪಿ ಮುಖ್ಯ ಆಯುಕ್ತರು ಮತ್ತು ಉಳಿದ ಜಿಲ್ಲೆಗಳ ಅಧಿಕಾರ ವ್ಯಾಪ್ತಿಗೆ ಸಂಬಂಧಿಸಿದಂತೆ ಜಿಲ್ಲೆಯ ಉಪ ಆಯುಕ್ತರನ್ನು ಒಳಗೊಂಡ ಸಕ್ಷಮ ಪ್ರಾಧಿಕಾರ ರಚಿಸಲಾಗಿದೆ. ಈ ಪ್ರಾಧಿಕಾರವು ಡೆಂಘೆ ನಿಯಂತ್ರಣಾ ಕ್ರಮಗಳನ್ನು ಜಾರಿಗೆ ತರುವ, ಪರಿಶೀಲಿಸುವ ಮತ್ತು ನಿಯಮ ಉಲ್ಲಂಘಿಸುವವರಿಗೆ ದಂಡ ವಿಧಿಸುವ ಅಧಿಕಾರ ಹೊಂದಿರುತ್ತದೆ. ನಿಯಮಾನುಸಾರ ಒಮ್ಮೆ ಸೂಚನೆ ನೀಡಿದ ನಂತರ ಪ್ರಾಧಿಕಾರವು ಸೂರ್ಯೋದಯ ಮತ್ತು ಸೂರ್ಯಾಸ್ತದ ನಡುವೆ ಯಾವುದೇ ಭೂಮಿ ಅಥವಾ ಕಟ್ಟಡವನ್ನು ಪರಿಶೀಲಿಸಬಹುದು. ಅಂತಹ ಸಂದರ್ಭದಲ್ಲಿ ಮಾಲೀಕರು ಇಲ್ಲವೇ ಸಂಬಂಧಪಟ್ಟವರು ತಪಾಸಣೆಗೆ ಅನುಕೂಲ ಮಾಡಿಕೊಡಬೇಕು ಹಾಗೂ ಅಗತ್ಯ ಮಾಹಿತಿ ಒದಗಿಸಬೇಕು. ತಿದ್ದುಪಡಿ ಮಾಡಲಾದ ನಿಯಮಗಳ ಪ್ರಕಾರ ಸೊಳ್ಳೆಗಳ ಸಂತಾನೋತ್ಪತ್ತಿ ಕಂಡುಬಂದಲ್ಲಿ, ಪ್ರಾಧಿಕಾರವು ಸೂಕ್ತ ವಿಧಾನಗಳನ್ನು ಬಳಸಿ ನಿರ್ದಿಷ್ಟ ಸ್ಥಳಗಳಲ್ಲಿ ಈಡಿಸ್ ಸೊಳ್ಳೆಗಳ ಸಂತಾನೋತ್ಪತ್ತಿ ನಿಮೂಲನೆ ನಿರ್ದಿಷ್ಟ ಸಮಯದೊಳಗೆ (24 ಗಂಟೆಗಳಿಗಿಂತ ಕಡಿಮೆಯಿಲ್ಲದ) ಕ್ರಮದ ಅಗತ್ಯವಿರುವ ಸೂಚನೆ ನೀಡಬಹುದು.
ದಂಡದ ಮೊತ್ತ ನಿಗದಿ:ಸಕ್ಷಮ ಪ್ರಾಧಿಕಾರವು ನಗರ ಮತ್ತು ಗ್ರಾಮೀಣ ಪ್ರದೇಶಗಳ ಕುಟುಂಬಗಳಿಗೆ ಕ್ರಮವಾಗಿ 400 ರೂ. ಮತ್ತು 200 ರೂ. ದಂಡ ವಿಧಿಸುವ ಅಧಿಕಾರ ಹೊಂದಿದೆ. ವಾಣಿಜ್ಯ ಸಂಸ್ಥೆಗಳು, ಕಚೇರಿಗಳು, ಶಾಲೆಗಳು ಮತ್ತು ಕಾಲೇಜುಗಳು, ಆರೋಗ್ಯ ಸೇವಾ ಕ್ಷೇತ್ರಗಳು ಇತ್ಯಾದಿಗಳಿಗೆ, ರಾಜ್ಯವು ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕ್ರಮವಾಗಿ 1,000 ರೂ. ಮತ್ತು 500 ರೂ. ದಂಡ ನಿಗದಿಪಡಿಸಿದೆ. ಸಕ್ರಿಯ/ಕೈಬಿಡಲಾದ ನಿರ್ಮಾಣ ಸ್ಥಳಗಳು ಮತ್ತು ಖಾಲಿ ಜಾಗಗಳಿಗೆ, ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕ್ರಮವಾಗಿ 2,000 ರೂ. ಮತ್ತು 1,000 ರೂ. ದಂಡ ನಿಗದಿಪಡಿಸಲಾಗಿದೆ. ಸಕ್ಷಮ ಪ್ರಾಧಿಕಾರದಿಂದ ಸೂಚನೆ ಸ್ವೀಕರಿಸಿದ ನಂತರ ಅನುಸರಣೆ ಮುಂದುವರಿಸದ ಪ್ರತಿ ವಾರಕ್ಕೆ ಒಟ್ಟು ದಂಡದ ಐವತ್ತು ಪ್ರತಿಶತ ಹೆಚ್ಚುವರಿಯಾಗಿ ವಿಧಿಸಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಕಟ; 20 ಸರ್ಕಾರಿ ಪ್ರಾಥಮಿಕ, 11 ಪ್ರೌಢಶಾಲಾ, 8 ಪಿಯು, ಇಬ್ಬರು ಪ್ರಾಂಶುಪಾಲರಿಗೆ ಗೌರವ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:twenty − three =
Remember me
