ತುಮಕೂರು:ಇಂದು ಈ ಡಾಕ್ಟರ್ ಬಳಿಗೆ ಯಾರಾದರೂ ಹಲ್ಲು ನೋವೆಂದು ಹೋದರೆ ಹಲ್ಲು ಮುರಿದು ಕಳಿಸಿದರೂ ಅಚ್ಚರಿ ಇಲ್ಲ. ಏಕೆಂದರೆ ಈ ಸರ್ಕಾರಿ ವೈದ್ಯ ಪಾನಮತ್ತನಾಗಿ ಆಸ್ಪತ್ರೆಗೆ ಬಂದಿದ್ದು, ಮದ್ಯದ ಅಮಲಿನಲ್ಲಿ ಟೇಬಲ್​ ಮೇಲೆ ಕಾಲೆತ್ತಿ ಕುಳಿತು ಅವಾಂತರ ನಡೆಸಿದ್ದಾನೆ.
ತುಮಕೂರು ಜಿಲ್ಲೆಯ ತಿಪಟೂರು ಸರ್ಕಾರಿ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ಇಲ್ಲಿ ದಂತ ವೈದ್ಯನಾಗಿ ಕಾರ್ಯನಿರ್ವಹಿಸುತ್ತಿರುವ ಡಾ.ಜಯಪ್ರಕಾಶ್ ಈ ವರ್ತನೆ ತೋರಿದ್ದಾನೆ. ವೈದ್ಯನ ಅವಾಂತರದ ದೃಶ್ಯಾವಳಿ ಸಾರ್ವಜನಿಕರ ಮೊಬೈಲ್​ಫೋನ್​ನಲ್ಲಿ ಸೆರೆಯಾಗಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲೂ ಹರಿದಾಡಲಾರಂಭಿಸಿದೆ.
ಇದನ್ನೂ ಓದಿ:ಸ್ಮಾರ್ಟ್​ ಟ್ರ್ಯಾಪ್​: ಪ್ರಶಾಂತ್ ಮಾಡಾಳ್​ಗೆ ದೂರುದಾರ ಬಲೆ ಹೆಣೆದಿದ್ದು ಹೇಗೆ?
ಪಾನಮತ್ತನಾಗಿ ಆಸ್ಪತ್ರೆಗೆ ಬಂದ ಈತ ಆಸ್ಪತ್ರೆಯ ಟೇಬಲ್ ಮೇಲೆ ಕಾಲೆತ್ತಿಟ್ಟು ಕೂತು ಉದ್ಧಟತನ ತೋರಿದ್ದಾನೆ. ತಿಪಟೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಈತನಿಂದಾಗಿ ಸಾರ್ವಜನಿಕರು ಅನನುಕೂಲ ಎದುರಿಸಬೇಕಾಗಿ ಬಂದಿತ್ತು. ಚಿಕಿತ್ಸೆಗಾಗಿ ಬಂದಿದ್ದ ಜನರು ಹಾಗೇ ವಾಪಸ್ ಹೋಗಿದ್ದೂ ಕಂಡುಬಂದಿತು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × one =
Remember me
