ಬೆಂಗಳೂರು/ಚಿಕ್ಕಮಗಳೂರು:ಪತ್ನಿ ಕೊಲೆ ಮಾಡಿ ಆತ್ಮಹತ್ಯೆಗೆ ಶರಣಾದ ಡೆಂಟಲ್ ಡಾಕ್ಟರ್ ರೇವಂತ್ ಪ್ರಕರಣವು ಕೆದಕಿದಷ್ಟು ಭಯಾನಕ ಮಾಹಿತಿಗಳು ಹೊರಬರುತ್ತಿದ್ದು, ಕೊಲೆ ಮಾಡಿ ತಪ್ಪಿಸಿಕೊಳ್ಳಲು ಯೋಜನೆ ರೂಪಿಸಿದ್ದ ವೈದ್ಯನ ಪಾಲಿಗೆ ಆತನ ಮಗನೇ ಮುಳುವಾದನೆಂಬುದು ಪೊಲೀಸ್​ ತನಿಖೆಯಲ್ಲಿ ಬಹಿರಂಗವಾಗಿದೆ.
ಪತಿಯ ಅನೈತಿಕ ಸಂಬಂಧಕ್ಕೆ ಬೇಸತ್ತು ಕಳೆದ ಎರಡು ತಿಂಗಳ ಹಿಂದೆಯೇ ಡಾ. ರೇವಂತ್ ಪತ್ನಿ ಕವಿತಾ ಆತ್ಮಹತ್ಯೆಗೆ ಯತ್ನಿಸಿದ್ದಳು. ಈ ವೇಳೆ ಫ್ಯಾನ್​ಗೆ ನೇಣು ಬಿಗಿದುಕೊಂಡಿದ್ದನ್ನು ಗಮನಿಸಿ ರೇವಂತ್ ಬಿಡಿಸಿದ್ದ. ಅನೈತಿಕ ಸಂಬಂಧ ವಿಚಾರವಾಗಿ ದಂಪತಿ ನಡುವೆ ಆಗಾಗ ಜಗಳವು ನಡೆಯುತ್ತಿತ್ತು ಎಂದು ತಿಳಿದುಬಂದಿದೆ. ರೇವಂತ್ ಅತ್ತೆ ಮಾವ ಕೂಡ ನಮ್ಮ ಅಳಿಯ ತುಂಬಾ ಒಳ್ಳೆಯವರು ಎಂದಿದ್ದರು. ಹೀಗಾಗಿ ರೇವಂತ್ ಬಗ್ಗೆ ಪೊಲೀಸರು ಹೆಚ್ಚು ತಲೆ ಕೆಡಸಿಕೊಂಡಿರಲಿಲ್ಲ.
ಇದನ್ನೂ ಓದಿ:ಪತ್ನಿ ಕೊಲೆಗೈದು ಆತ್ಮಹತ್ಯೆ ಮಾಡಿಕೊಂಡಿದ್ದ ವೈದ್ಯನ ಸಾವಿನ ಸುದ್ದಿ ಕೇಳಿ ಪ್ರಿಯತಮೆಯೂ ನೇಣಿಗೆ ಶರಣು
ಪತ್ನಿಯನ್ನು ಕೊಲೆ ಮಾಡುವ ದಿನ ರೇವಂತ್​ ಆಕೆಯನ್ನು ಜ್ಯುವೆಲರಿ ಶಾಪ್​ಗೆ ಕರೆದೊಯ್ದಿದ್ದ. ಶಾಪ್​ನಲ್ಲಿ ಮಗುವಿಗೆ ಬೆಳ್ಳಿಯ ವಳ್ಳೆ ಕೊಡಿಸಿದ್ದ. ಜ್ಯುವೆಲರಿ ಶಾಪ್​ನಿಂದ ಮಧ್ಯಾಹ್ನ 3:22ಕ್ಕೆ ಮನೆಗೆ ಬಂದಿದ್ದ ರೇವಂತ್, ಪತ್ನಿ ಕವಿತಾಗೆ ಎರಡು ಕಡೆ ಇಂಜೆಕ್ಟ್ ಮಾಡಿದ್ದ. ಬಳಿಕ ಕಾರ್ ಶೆಡ್​ಗೆ ಎಳೆದುಕೊಂಡು ಹೋಗಿ ಕುತ್ತಿಗೆ ಕುಯ್ದಿದ್ದ. ಆ ಬಳಿಕ ಮನೆಯಲ್ಲಿದ್ದ ಒಡವೆ ತಗೊಂಡು ಹೋಗಿದ್ದ. ಬಳಿಕ ಪೊಲೀಸ್​ ಠಾಣೆಗೆ ದರೋಡೆಕೋರರು ಕೊಲೆ ಮಾಡಿ, ಆಭರಣ ದೋಚಿದ್ದಾರೆ ಎಂದು ದೂರು ನೀಡಿ ಮೊಸಳೆ ಕಣ್ಣೀರು ಹಾಕಿದ್ದ.
ರೇವಂತ್​​​ಗೆ ವಿಲನ್ ಆಗಿದ್ದೇ ಹೆತ್ತ ಮಗಕೊಲೆ ಮಾಡಿ ತಪ್ಪಿಸಿಕೊಳ್ಳಲು ಪ್ಲ್ಯಾನ್ ಮಾಡಿದ್ದ ರೇವಂತ್​ಗೆ ಆತನ ಮಗನೇ ಮುಳುವಾದ. ಕೊಲೆ ನಡೆದ ಫೆ.17ರ ದಿನ ಸಂಜೆ 4:15 ಕ್ಕೆ ಐದು ವರ್ಷದ ಮಗು ಗೌರವ್ ಸ್ಕೂಲ್​ನಿಂದ ಬಂದಾಗ ಎಲ್ಲವು ಗೊತ್ತಾಗಿಬಿಡುತ್ತದೆ ಎಂದು 4:25ಕ್ಕೆ ದೋಸೆ ಕೊಡಿಸುತ್ತೇನೆಂದು ಮಗುವನ್ನು ಹೊರಗಡೆ ಕರೆದುಕೊಂಡು ಹೋಗಿದ್ದ. ಆದರೆ, ಪೊಲೀಸ್​ ವಿಚಾರಣೆ ವೇಳೆ ನಾನು ಮನೆಗೆ ಬಂದಾಗ ಅಮ್ಮ ಇರಲಿಲ್ಲ ಎಂದು ಮಗು ಹೇಳಿದೆ. ಅಲ್ಲದೆ, ಅಪ್ಪ ಮಸಾಲೆ ದೋಸೆ ತಿನ್ನಲು ನನ್ನನ್ನು ಮಾತ್ರ ಕರೆದುಕೊಂಡು ಹೋಗಿದ್ದರು ಎಂದು ಬಾಯ್ಬಿಟ್ಟಿದೆ. ರೇವಂತ್​ ಪತ್ನಿಯ ಕತ್ತು ಕೊಯ್ದು ರಕ್ತ ಹರಿಯುತ್ತಿದ್ದ ಜಾಗಕ್ಕೂ ಮ್ಯಾಟ್ ಹಾಕಿದ್ದ. ಯಾವುದೇ ದರೋಡೆಕೋರನಿಗೆ ಕೊಲೆ ಮಾಡಿ ಮ್ಯಾಟ್​ ಹಾಕುವಷ್ಟು ತಾಳ್ಮೆ ಇರುವುದಿಲ್ಲ ಎಂಬುದು ಪೊಲೀಸರ ಅಂದಾಜು ಆಗಿತ್ತು. ಪತ್ನಿ ಕೊಲೆ ಮಾಡಿ ತಪ್ಪಿಸಿಕೊಳ್ಳಲು ಸಾಕಷ್ಟು ಪ್ರಯತ್ನ ಮಾಡಿದ್ದ ವೈದ್ಯ ರೇವಂತ್​ ತನ್ನ ಕಂದಕಕ್ಕೆ ತಾನೇ ಬಿದ್ದಿದ್ದ. ಪೊಲೀಸರ ಬಲೆಗೆ ಸಿಕ್ಕಿಬಿಡುತ್ತೀನಿ ಎಂಬ ಭಯದಲ್ಲೇ ರೈಲಿಗೆ ತಲೆಕೊಟ್ಟು ತಾನೂ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಅಕ್ರಮ ಸಂಬಂಧ ಉಳಿಸಿಕೊಳ್ಳಲು ಕೊಲೆಹರ್ಷಿತಾ ಎಂಬಾಕೆ ಜತೆ ರೇವಂತ್ ಅಕ್ರಮ ಸಂಬಂಧ ಹೊಂದಿದ್ದ. ಈ ಸಂಬಂಧ ಉಳಿಸಿಕೊಳ್ಳಲು ಈ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಆದರೆ, ವಿಧಿಯಾಟವೇ ಬೇರೆಯಾಗಿತ್ತು. ತನ್ನ ಹಳ್ಳಕ್ಕೆ ರೇವಂತ್​ ತಾನೇ ಬಿದ್ದಿದ್ದ. ಇತ್ತ ರೇವಂತ್​ ಆತ್ಮಹತ್ಯೆಯ ಸುದ್ದಿ ಕೇಳಿ ಇಂದು ಹರ್ಷಿತಾ ಕೂಡ ಬೆಂಗಳೂರಿನ ರಾಜರಾಜೇಶ್ವರಿ ನಗರದ ಗಂಡನ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.(ದಿಗ್ವಿಜಯ ನ್ಯೂಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × five =
Remember me
