ಬೆಂಗಳೂರು: ಕ್ಲಿನಿಕ್​ನಲ್ಲಿ ಜನರೇಟರ್ ಹೊಗೆ (ಕಾರ್ಬನ್ ಮಾನಾಕ್ಸೈಡ್) ಸೇವಿಸಿ ದಂತ ವೈದ್ಯ ಮೃತಪಟ್ಟಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಮಂಗಳೂರು ಮೂಲದ ದಂತ ವೈದ್ಯ ಡಾ. ನಿತಿನ್ ಶೆಟ್ಟಿ (26) ಮೃತರು. ಸರ್ಜಾಪುರ ರಸ್ತೆಯಲ್ಲಿರುವ ಪಾರ್ಥ ಡೆಂಟಲ್ ಕ್ಲಿನಿಕ್ ಮಾಲೀಕ ಡಾ. ವಿಜಯ್ ಆನಂದ್ ಮತ್ತು ಅಧಿಕಾರಿ ಡಾ. ವೇಣು ಜಯರಾಮ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಆಮ್ಲಜನಕ ಬರುತ್ತಿರಲಿಲ್ಲ
2020 ಅಡಿಯ ಕ್ಲಿನಿಕ್​ನ್ನು ಫ್ಯಾಬ್ರಿಕೇಷನ್​ನಿಂದಾಗಿ ಸಂಪೂರ್ಣ ಮುಚ್ಚಲಾಗಿತ್ತು. ಒಳಗಡೆ ಆಮ್ಲಜನಕ ಸಂಚಾರ ಕಡಿಮೆ ಇತ್ತು. 2 ತಿಂಗಳು ಮುಚ್ಚಿದ್ದ ಕ್ಲಿನಿಕ್ ತೆರೆಯಲಾಗಿತ್ತು. ಜನರೇಟರ್ ಸಹ ಆನ್ ಮಾಡಿದ್ದರು. ಈ ವೇಳೆ ನಿದ್ದೆಗೆ ಜಾರಿದಾಗ ವಿಷಾನಿಲ ಸೇವಿಸಿ ಮೃತಪಟ್ಟಿರುವುದಾಗಿ ವೈದ್ಯಕೀಯ ವರದಿ ಬಂದಿದೆ. ಆದ್ದರಿಂದ ನಿತಿನ್ ಸಂಬಂಧಿ ಆಕಾಶ್ ಆಳ್ವಾ ತಡವಾಗಿ ದೂರು ಕೊಟ್ಟಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
4 ತಿಂಗಳ ಹಿಂದಷ್ಟೇ ವಿವಾಹವಾಗಿದ್ದ ನಿತಿನ್, ಪತ್ನಿ ಜತೆ ನಗರದಲ್ಲಿ ವಾಸಿಸುತ್ತಿದ್ದರು. ಪಾರ್ಥ ಡೆಂಟಲ್ ಕ್ಲಿನಿಕ್​ನಲ್ಲಿ ಡೆಂಟಿಸ್ಟ್ ಆಗಿದ್ದರು. ಕರೊನಾ ಲಾಕ್​ಡೌನ್ ಹಿನ್ನೆಲೆಯಲ್ಲಿ ಕ್ಲಿನಿಕ್ ಮುಚ್ಚಲಾಗಿತ್ತು. ಲಾಕ್​ಡೌನ್ ಸಡಿಲಿಕೆ ಬಳಿಕ ಮೇ 21ರಂದು ಬೆಳಗ್ಗೆ 9 ಗಂಟೆಗೆ ಕ್ಲಿನಿಕ್ ತೆರೆದಿದ್ದು, ವಿದ್ಯುತ್ ಇಲ್ಲದ ಕಾರಣ ಜನರೇಟರ್ ಅನ್ ಮಾಡಿದ್ದರು.
ಇದನ್ನೂ ಓದಿ:ಜಡ್ಜ್​ಗಳ ವಸತಿಗೃಹದಲ್ಲಿ ಕಳವು
ಮಧ್ಯಾಹ್ನ ಊಟ ಮಾಡಿ ಕ್ಲಿನಿಕ್​ನಲ್ಲಿ ನಿದ್ದೆಗೆ ಜಾರಿದಾಗ ಜನರೇಟರ್​ನಿಂದ ಬಂದಿರುವ ಕಾರ್ಬನ್ ಮಾನಾಕ್ಸ್ಸೈಡ್ ಸೇವಿಸಿದ್ದಾರೆ. ರಾತ್ರಿ 7 ಗಂಟೆಯಾದರೂ ನಿತಿನ್ ಮನೆ ಬಂದಿರಲಿಲ್ಲ. ಪತ್ನಿ ಕರೆ ಮಾಡಿದಾಗ ಸ್ವೀಕರಿಸಿಲ್ಲ. ಆತಂಕಗೊಂಡ ಪತ್ನಿ, ತನ್ನ ಸಹೋದರನಿಗೆ ಕರೆ ಮಾಡಿ ವಿಷಯ ಮುಟ್ಟಿಸಿದ್ದಾರೆ. ರಾತ್ರಿ 9.30ಕ್ಕೆ ಕ್ಲಿನಿಕ್​ಗೆ ಬಂದು ನೋಡಿದಾಗ ಆಪರೇಷನ್ ಕೊಠಡಿಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ನಿತಿನ್ ಬಿದ್ದಿದ್ದರು. ತಕ್ಷಣ ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ದಾಖಲಿಸಿದ್ದು, ನಿತಿನ್​ರನ್ನು ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದು ದೃಢಪಡಿಸಿದ್ದಾರೆ ಎಂದು ಬೆಳ್ಳಂದೂರು ಠಾಣೆ ಪೊಲೀಸರು ತಿಳಿಸಿದ್ದಾರೆ.
ಇಮ್ರಾನ್ ಪಾಷಾ ಪೊಲೀಸ್ ವಶಕ್ಕೆ

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:12 + one =
Remember me
