ಬೆಂಗಳೂರು:ಅಬಕಾರಿ ಪೇದೆಗಳಿಗೆ ಸೂಕ್ತ ತರಬೇತಿ ಇಲ್ಲದ ಕಾರಣ ಪರಿಣಾಮಕಾರಿಯಾಗಿ ಆದಾಯ ಸಂಗ್ರಹಿಸಲು ಅಬಕಾರಿ ಇಲಾಖೆ ವಿಫಲವಾಗುತ್ತಿದೆ.
ರಾಜ್ಯದಲ್ಲಿ 3,988 ವೈನ್​ಶಾಪ್​(ಸಿಎಲ್​2), 279 ಕ್ಲಬ್​ (ಸಿಎಲ್​4), 78 ಸ್ಟಾರ್​ ಹೋಟೆಲ್​ ( ಸಿಎಲ್​6ಎ), 2,382 ಹೋಟೆಲ್​ ಮತ್ತು ವಸತಿ ಗೃಹ (ಸಿಎಲ್​-7), 68 ಮಿಲಿಟರಿ ಕ್ಯಾಂಟಿನ್​ ಮಳಿಗೆ (ಸಿಎಲ್​8), 3,634 ಬಾರ್​ ಆ್ಯಂಡ್​ ರೆಸ್ಟೋರೆಂಟ್​ (ಸಿಎಲ್​9), 1,041 ಎಂಎಸ್​ಐಎಲ್​ (ಸಿಎಲ್​11ಸಿ) ಮತ್ತು 745 ಆರ್​ವಿಬಿ ಸೇರಿ ಒಟ್ಟು 12,614 ಮದ್ಯದಂಗಡಿಗಳಿವೆ. ಪ್ರತಿ ನಿತ್ಯ ಮದ್ಯ ಮಾರಾಟದಿಂದಾಗಿ 65&70 ಕೋಟಿ ರೂ.ಇಲಾಖೆ ಮೂಲಕ ಸರ್ಕಾರಕ್ಕೆ ಆದಾಯ ಬರುತ್ತಿದೆ. ಅದೇರೀತಿ, ವರ್ಷದಿಂದ ವರ್ಷಕ್ಕೆ ಆದಾಯ ಹೆಚ್ಚಿಸಲು ಇಲಾಖೆಯ ಜವಾಬ್ದಾರಿಯಾಗಿದೆ. ಆದರೆ, ಹುದ್ದೆಗೆ ಸೇರಿ 5 ವರ್ಷ ಕಳೆದರೂ ಅಬಕಾರಿ ಪೇದೆಗಳಿಗೆ ಇಲಾಖೆ ತರಬೇತಿ ನೀಡಿಲ್ಲ. ಇದರಿಂದಾಗಿ ಸರ್ಕಾರದ ಬೊಕ್ಕಸಕ್ಕೆ ಬರಬೇಕಿದ್ದ ಆದಾಯ ತುಸು ಇಳಿಮುಖವಾಗುತ್ತಿದೆ ಎನ್ನಲಾಗಿದೆ.
ಬರುವ ವರ್ಷದಿಂದ ಅದ್ದೂರಿಯಾಗಿ ಸಂಗೊಳ್ಳಿ ರಾಯಣ್ಣ ಕಾರ್ಯಕ್ರಮ ಆಚರಣೆ
ಕೆಲಸಕ್ಕೆ ಸೇರುವ ಮುನ್ನ ಹೊಸಬರಿಗೆ ಅಬಕಾರಿ ಕೈಪಿಡಿ ಅನುಸಾರ ಶಿಸ್ತುಬದ್ಧವಾಗಿ ಕಾರ್ಯನಿರ್ವಹಣೆ ಮಾಡುವುದು, ಅಕ್ರಮವಾಗಿ ಮದ್ಯ ಮಾರಾಟ ತಡೆಯುವುದು, ಜಾರಿ ಮತ್ತು ತನಿಖೆ ಕಾರ್ಯಚಟುವಟಿಕೆ ಚುರುಕುಗೊಳಿಸುವುದು, ಅಬಕಾರಿ ಚಟುವಟಿಕೆ, ಅಪರಾಧ ಸಂಬಂಧಿಸಿದ ಮಾಹಿತಿ ಸಂಗ್ರಹಿಸುವುದು, ಚುನಾವಣೆ ವೇಳೆ ಅಂತಾರಾಜ್ಯ ಗಡಿ ಭಾಗದಲ್ಲಿ ಚೆಕ್​ಪೋಸ್ಟ್​ನಲ್ಲಿ ಕರ್ತವ್ಯ ನಿರ್ವಹಿಸುವುದು ಸೇರಿ ಇತರೆ ಆಡಳಿತಾತ್ಮಕ ಕಾರ್ಯಗಳ ಕುರಿತು ಇಲಾಖೆಯಿಂದ ತರಬೇತಿ ನೀಡಬೇಕು. ಸ್ವಾತಂತ್ಯ ದಿನ, ಗಣರಾಜ್ಯೋತ್ಸವ ದಿನ, ರಾಷ್ಟ್ರೀಯ ಹಬ್ಬಗಳ ಸಂದರ್ಭದಲ್ಲಿ ಕವಾಯಿತು, ಹಿರಿಯ ಅಧಿಕಾರಿಗಳಿಗೆ ಗೌರವ ಸೂಚಿಸುವ ಬಗ್ಗೆ ಹೇಳಿ ಕೊಡಬೇಕು. ಆದರೆ, ಅಬಕಾರಿ ಪೇದೆಗಳಿಗೆ ಇದು ಯಾವುದನ್ನೂ ಹೇಳಿಕೊಟ್ಟಿಲ್ಲ. ಹಾಗಾಗಿ, ಅಬಕಾರಿ ಕೈಪಿಡಿ ಪ್ರಕಾರ ನಮಗೆ ತರಬೇತಿ ಕೊಟ್ಟು ಆಡಳಿತಾತ್ಮಕ ಕಾರ್ಯದ ಬಗ್ಗೆ ತಿಳಿಸಿದರೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಅನುಕೂಲವಾಗಲಿದೆ ಎಂದು ಕೆಲ ಅಬಕಾರಿ ಪೇದೆಗಳು ಅಳಲು ತೋಡಿಕೊಂಡಿದ್ದಾರೆ.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:3 × four =
Remember me
