ಬೆಂಗಳೂರು:ಕರ್ತವ್ಯ ನಿರತ ಕಂದಾಯ ಇಲಾಖೆ ನೌಕರರ ಮೇಲೆ ವಕೀಲರೊಬ್ಬರು ಹಲ್ಲೆ ಮಾಡಿ ಜಾತಿ ನಿಂದನೆ ಮಾಡಿರುವ ಆರೋಪ ಕೇಳಿ ಬಂದಿದ್ದು, ಈ ಸಂಬಂಧ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎಂ.ಕೃಷ್ಣಮೂರ್ತಿ ಹಲ್ಲೆಗೊಳಗಾದವರು. ಉಮೇಶ್ ಎಂ.ಕುಂದನ್ ಹಲ್ಲೆ ಮಾಡಿದ ವಕೀಲರು. ಕೃಷ್ಣಮೂರ್ತಿ ಅವರು, ಕಂದಾಯ ಇಲಾಖೆ ದ್ವಿತಿಯ ದರ್ಜೆ ಸಹಾಯಕರಾಗಿ ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ವೇಳೆ 4.30 ರ ಸಮಯದಲ್ಲಿ ಉಮೇಶ್ ಎಂ.ಕುಂದನ್ ಅವರು ಕರ್ತವ್ಯಕ್ಕೆ ಅಡ್ಡಪಡಿಸಿ ಏಕಾಏಕಿ ಹಲ್ಲೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಪ್ರಾಣಬೆದರಿಕೆ ಹಾಕಿದ್ದಾರೆ.
ಈ ಸಂಬಂಧ ಕೃಷ್ಣಮೂರ್ತಿ ದೂರು ನೀಡಿದ್ದು, ಈ ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಜತೆಗೆ ಘಟನೆಯ ಸಂಬಂಧ ಕಂದಾಯ ಇಲಾಖೆಯ ನೌಕರರ ಸಂಘ ಬೆಂಗಳೂರು ನಗರ ಜಿಲ್ಲಾಧಿಕಾರಿಗಳಿಗೆ ದೂರು ನೀಡಿ ಸೂಕ್ತ ಕ್ರಮಕ್ಕೆ ಒತ್ತಾಯಿಸಿದ್ದಾರೆ.
ದ.ಕೊರಿಯಾದಲ್ಲಿ ಹ್ಯಾಲೋವೀನ್ ದುರಂತ: ಕಾಲ್ತುಳಿತಕ್ಕೆ 149 ಮಂದಿ ಸಾವು, ಪ್ರಜ್ಞೆಯಿಲ್ಲದೆ ಬೀದಿಗಳಲ್ಲಿ ಬಿದ್ದಿರುವ ಜನ

ಭೂತದ ಪಾತ್ರದಲ್ಲಿ ಕತ್ರಿನಾ; ದೆವ್ವಗಳ ಕಥೆಯನ್ನೂ ಹೇಳಬೇಡಿ ಅಂದಿದ್ದೇಕೆ ನಟಿ?

ಜನಸ್ನೇಹಿ ರೇಷನ್ ಅಂಗಡಿ: ಪಡಿತರ ಶಾಪ್​ನಲ್ಲೇ ಬ್ಯಾಂಕ್ ಖಾತೆ, ಇಂಟರ್​ನೆಟ್, ಗ್ಯಾಸ್ ಸೇವೆ ಲಭ್ಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − 11 =
Remember me
