ಬೆಂಗಳೂರು:ರಾಜ್ಯದ ಸರ್ಕಾರಿ ವೈದ್ಯಕಿಯ ಕಾಲೇಜುಗಳಲ್ಲಿ ರಕ್ತನಾಳ ಕಾಯಿಲೆ ಪತ್ತೆಹಚ್ಚಲು ಪ್ರತ್ಯೇಕವಾಗಿ ವ್ಯಾಸ್ಕ್ಯುಲಾರ್​ ವಿಭಾಗ ಆರಂಭಿಸುವುದಾಗಿ ವೈದ್ಯಕಿಯ ಶಿಣ ಸಚಿವ ಡಾ.ಶರಣಪ್ರಕಾಶ್​ ಪಾಟೀಲ್​ ತಿಳಿಸಿದ್ದಾರೆ.
ಕಂಠೀರವ ಆಟದ ಮೈದಾನದಲ್ಲಿ ವ್ಯಾಸ್ಕ್ಯುಲಾರ್​ ಸೊಸೈಟಿ ಆಫ್​ ಇಂಡಿಯಾ ಸಹಯೋಗದಲ್ಲಿ ವ್ಯಾಸ್ಕರ್​ ಸಂಸ್ಥೆ ಭಾನುವಾರ ಆಯೋಜಿಸಿದ್ದ ವಾಕಥಾನ್​ಗೆ ಚಾಲನೆ ನೀಡಿ ಮಾತನಾಡಿದರು. ಮುಂದಿನ ದಿನಗಳಲ್ಲಿ ಸಾರ್ವಜನಿಕರಿಗೆ ಕೈಗೆಟುಕುವ ದರದಲ್ಲಿ ಚಿಕಿತ್ಸೆ ನೀಡುವ ಸಲುವಾಗಿ ವ್ಯಾಸ್ಕ್ಯುಲಾರ್​ ವಿಭಾಗ ತೆರೆಯಲಾಗುವುದು. ಬೆಂಗಳೂರು ಹಾಗೂ ಮೈಸೂರಿನಲ್ಲಿ ಈಗಾಗಲೆ ಆರಂಭವಾಗಿರುವ ವಿಭಾಗ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ. ಕಲುಬುರಗಿ, ಬೆಳಗಾವಿ, ಹುಬ್ಬಳ್ಳಿಯಲ್ಲಿ ಸದ್ಯದಲ್ಲೇ ಆರಂಭವಾಗಲಿದೆ. ವಿಕ್ಟೋರಿಯಾ, ಸಂಜಯ್​ ಗಾಂಧಿ ಆಸ್ಪತ್ರೆಗಳಲ್ಲಿಯೂ ವಿಭಾಗ ತೆರೆಯುವ ಉದ್ದೇಶ ಹೊಂದಲಾಗಿದೆ ಎಂದರು.
ರಾಜೀವ್​ ಗಾಂಧಿ ಆರೋಗ್ಯ ವಿವಿ ಕುಲಪತಿ ಎಂ.ಕೆ. ರಮೇಶ್​ ಮಾತನಾಡಿ, ಹಿಂದೆ ಸೂಕ್ತ ಚಿಕಿತ್ಸೆಯಿಲ್ಲದೆ ನಿರಂತರವಾಗಿ ಅಂಗಚ್ಛೇದ ಶಸಚಿಕಿತ್ಸೆ ನಡೆಯುತ್ತಿತ್ತು. ಕಾಲಕ್ರಮೇಣ ವ್ಯಾಸ್ಕ್ಯುಲಾರ್​ ವಿಭಾಗದಲ್ಲಿ ನಡೆದ ಹೆಚ್ಚಿನ ಅಧ್ಯಯನಗಳಿಂದ ವಿಕಲತೆ ಪ್ರಮಾಣ ತಗ್ಗಿರುವುದು ಆಶಾದಾಯಕ ಬೆಳವಣಿಗೆ. ಜೀವಕ್ಕೆ ಅಪಾಯ ತಂದೊಡ್ಡುವ ರಕ್ತನಾಳದ ಸಮಸ್ಯೆಗಳ ಬಗ್ಗೆ ಯುವಜನರು ಜಾಗೃತರಾಗಬೇಕು ಎಂದು ಸಲಹೆ ನೀಡಿದರು.ವ್ಯಾಸ್ಕ್ಯುಲಾರ್​ ಸರ್ಜನ್​ ಡಾ.ಕೆ.ಆರ್​.ಸುರೇಶ್​ ಮಾತನಾಡಿ, ಹೃದಯಾಘಾತದಂತೆ (ಹಾರ್ಟ್​ ಅಟ್ಯಾಕ್​) ಲೆಗ್​ ಅಟ್ಯಾಕ್​ ಸಹ ಮನುಷ್ಯನಿಗೆ ಪ್ರಾಣಾಂತಿಕವಾಗಿದೆ. ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡದಿದ್ದರೆ ಜೀವಕ್ಕೆ ಹಾನಿಯಾಗುವ ಸಾಧ್ಯತೆ ಇದೆ. ನಡೆಯುವಾಗ ಕಾಲಿನಲ್ಲಿ ನೋವು ಕಂಡುಬಂದರೆ, ಕಾಲಿನಲ್ಲಿ ಜೋಮು ಹಾಗೂ ತಂಪಿನಂತಹ ಲಕ್ಷಣಗಳು ಕಂಡುಬಂದಾಗ ಹತ್ತಿರದ ವ್ಯಾಸ್ಕ್ಯುಲಾರ್​ ವೈದರನ್ನು ಸಂಪರ್ಕಿಸಬೇಕು ಎಂದು ಸಲಹೆ ನೀಡಿದರು.
ಕಂಠೀರವ ಮೈದಾನದಲ್ಲಿ ಆರಂಭವಾದ ಜಾಥಾವು ಕಸ್ತೂರಿ ಬಾ ರಸ್ತೆ, ವಿಧಾನಸೌಧ, ನೃಪತುಂಗ ರಸ್ತೆ ಮೂಲಕ ಸಾಗಿ ಕಂಠೀರವ ಸ್ಟೇಡಿಯಂನಲ್ಲಿ ಸಮಾಪ್ತಿಯಾಯಿತು. ರಾಷ್ಟ್ರೀಯ ಭದ್ರತೆ ಮಾಜಿ ಸಲಹೆಗಾರ ವಿ.ಕೆ. ಆತ್ರೆ, ವಿಎಸ್​ಐ ಅಧ್ಯಕ್ಷ ಡಾ.ವಿವೇಕಾನಂದ, ರಾಜ್ಯ ವ್ಯಾಸ್ಕರ್​ ಸೊಸೈಟಿ ಕಾರ್ಯದರ್ಶಿ ಡಾ.ವಿಷ್ಣು, ನಟಿ ಸಂಜನಾ ಗಲ್ರಾನಿ ಸೇರಿ ಸಾವಿರಕ್ಕೂ ಹೆಚ್ಚು ವೈದ್ಯರು, ವಿದ್ಯಾರ್ಥಿಗಳು, ಶೂಶ್ರೂಷಕ ಸಿಬ್ಬಂದಿ ಮತ್ತಿತರರಿದ್ದರು.
ಸಿದ್ದರಾಮಯ್ಯ ವಿರುದ್ಧ ವ್ಯವಸ್ಥಿತ ಪಿತೂರಿ ಆರೋಪ: ಕುರುಬ ಸಮಾಜದ ಸ್ವಾಮೀಜಿಗಳಿಂದ ಆಕ್ರೋಶ.
15 ಸಾವಿರ ರೋಗಿಗಳಿಗೆ ಚಿಕಿತ್ಸೆಜಯದೇವ ಆಸ್ಪತ್ರೆಯಲ್ಲಿ ವ್ಯಾಸ್ಕ್ಯುಲಾರ್​ ಚಿಕಿತ್ಸೆಗೆ ಸಂಬಂಧಿಸಿದ ಎಲ್ಲ ರೀತಿಯ ಆಧುನಿಕ ಸೌಲಭ್ಯಗಳು ದೊರೆಯಲಿವೆ. ವರ್ಷದಲ್ಲಿ 15 ಸಾವಿರಕ್ಕೂ ಅಧಿಕ ಜನರಿಗೆ ಚಿಕಿತ್ಸೆ ನೀಡಿ 700ಕ್ಕೂ ಹೆಚ್ಚು ಶಸಚಿಕಿತ್ಸೆಗಳು ನಡೆಸಲಾಗುತ್ತಿದೆ ಎಂದು ಜಯದೇವ ಆಸ್ಪತ್ರೆಯ ವ್ಯಾಸ್ಕ್ಯುಲಾರ್​ ಸರ್ಜನ್​ ಡಾ.ಮುರುಳಿಕೃಷ್ಣ ಮಾಹಿತಿ ನೀಡಿದರು.
ಮೂರು ದಶಕಗಳಿಂದ ವ್ಯಾಸ್ಕ್ಯುಲಾರ್​ ಸರ್ಜನ್​ ಅಸೋಸಿಯೇಷನ್​ ನಿರಂತರ ಸೇವೆ ಸಲ್ಲಿಸುತ್ತಿದೆ. ಡಾ.ಎನ್​.ಕೆ. ಭಗವಾನ್​ ಅವರ ದೂರದೃಷ್ಟಿ ಹಾಗೂ ಪ್ರಸ್ತುತ ಡಾ.ಕೆ.ಆರ್​. ಸುರೇಶ್​ ಮಾರ್ಗದರ್ಶನದಲ್ಲಿ ಸಹಸ್ರಾರು ಶಸಚಿಕಿತ್ಸೆಗಳ ಮೂಲಕ ಸಾವಿರಾರು ರೋಗಿಗಳು ಶಾಶ್ವತ ಅಂಗವಿಕಲರಾಗುವುದನ್ನು ತಪ್ಪಿಸಿರುವುದು ಹೆಮ್ಮೆಯ ಸಂಗತಿ. ವ್ಯಾಸ್ಕಾರ್​ ಅರಿವು ಕಾರ್ಯಕ್ರಮ ನಿರಂತರವಾಗಿ ಇರಲಿದೆ.ಡಾ.ವೆಂಕಟೇಶ್​ ರೆಡ್ಡಿ. ವ್ಯಾಸ್ಕಾರ್​ ಅಧ್ಯಕ್ಷ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve − 4 =
Remember me
