ಬೆಂಗಳೂರು:ಕೋವಿಡ್-19 ಸಂದರ್ಭದಲ್ಲಿನ ಕೆಲಸದ ಒತ್ತಡದಿಂದಾಗಿ ಚಿಕಿತ್ಸೆ ನೀಡಬೇಕಾದ ವೈದ್ಯರೇ ಮಾನಸಿಕ ಖಿನ್ನತೆಗೆ ಒಳಗಾಗುತ್ತಿದ್ದು, ಖುದ್ದು ಮನೋರೋಗ ತಜ್ಞರ ಮೊರೆ ಹೋಗುತ್ತಿದ್ದಾರೆ. ಆರು ತಿಂಗಳಿನಿಂದ ಕರೊನಾ ಸೋಂಕಿತರ ಚಿಕಿತ್ಸೆಯಲ್ಲಿ ನಿರತರಾಗಿರುವ ವೈದ್ಯರಿಗೆ ರೋಗಿಗಳಿಂದ ಸೋಂಕಿಗೆ ಒಳಗಾಗುವ ಭೀತಿ ಒಂದೆಡೆಯಾದರೆ, ಮೇಲಧಿಕಾರಿಗಳ ಒತ್ತಡ, ರಜೆ ಇಲ್ಲದ ಕೆಲಸ, ರೋಗಿಗಳ ಕುಟುಂಬಸ್ಥರಿಂದ ಹಲ್ಲೆ ಹಾಗೂ ಬೆದರಿಕೆಗಳ ಜತೆಗೆ ಸರ್ಕಾರದ ಕಠಿಣ ನಿಯಮಗಳು ಮಾನಸಿಕವಾಗಿ ಮತ್ತಷ್ಟು ಜಜ್ಜರಿತಗೊಳಿಸಿವೆ.
ಈ ಹಿನ್ನೆಲೆಯಲ್ಲಿ ವೈದ್ಯರಿಗೆ ಪರಿಸ್ಥಿತಿ ನಿಭಾಯಿಸಲು ಅನುಕೂಲವಾಗಲೆಂದು ಭಾರತೀಯ ವೈದ್ಯಕೀಯ ಸಂಘದಿಂದ (ಐಎಂಎ) ರಾಜ್ಯದಲ್ಲಿ ಮನೋರೋಗ ಚಿಕಿತ್ಸಾ ಕೇಂದ್ರ (ಸೈಕಿಯಾಟ್ರಿಕ್ ಸೆಲ್) ಪ್ರಾರಂಭಿಸಿದೆ. ಇಲ್ಲಿ ಆನ್​ಲೈನ್ ಮೂಲಕ ವೈದ್ಯರು ಉಚಿತ ಸೇವೆ ಪಡೆಯಬಹುದಾಗಿದೆ. ಈ ಸಂಬಂಧ ನಿಮ್ಹಾನ್ಸ್ ನೆರವು ಪಡೆಯಲು ಸಂಘ ಚಿಂತನೆ ನಡೆಸಿದ್ದು, ಕಾರ್ಯ ಪ್ರಗತಿಯಲ್ಲಿದೆ ಎಂದು ಐಎಂಎ ಕಾರ್ಯದರ್ಶಿ ಡಾ.ಎಸ್.ಶ್ರೀನಿವಾಸ್ ತಿಳಿಸಿದ್ದಾರೆ.ಇದನ್ನೂ ಓದಿ:21 ರಾಜ್ಯಗಳ ಆಯ್ಕೆ 1, ಯಾರಿಗೂ ಬೇಕಿಲ್ವಾ ಆಯ್ಕೆ 2?
ಆರೋಗ್ಯ ಮತ್ತು ವೈದ್ಯಕೀಯ ಶಿಕ್ದಣ ಇಲಾಖೆಯಲ್ಲಿ ವೈದ್ಯರ ಕೊರತೆ ಇರುವುದರಿಂದ ಕರೊನಾ ಸಂದರ್ಭ ಹೆಚ್ಚುವರಿ ಸೇವೆ ನೀಡುವ ಅನಿವಾರ್ಯತೆ ವೈದ್ಯರಿಗೆ ಎದುರಾಗಿದೆ. ಹೀಗಾಗಿ ರಜೆ ಇಲ್ಲದೆ ಕಾರ್ಯನಿರ್ವಹಿಸಬೇಕಾಗಿದೆ. ಒಂದು ವಾರ ಕೆಲಸ, ಮತ್ತೊಂದು ವಾರ ಕ್ವಾರಂಟೈನ್ ಕಾರಣಕ್ಕೆ ಕುಟುಂಬದವರೊಂದಿಗೆ ಸಮಯ ಕಳೆಯಲು, ಅವರ ಬೇಕು-ಬೇಡಗಳ ಬಗ್ಗೆ ವಿಚಾರಿಸಲು ಸಾಧ್ಯವಿಲ್ಲ. ಮನೆಯಲ್ಲಿ ವೃದ್ಧರು ಹಾಗೂ ಚಿಕ್ಕ ಮಕ್ಕಳನ್ನು ಹೊಂದಿರುವವರು ಸೋಂಕು ಭೀತಿಯಿಂದ ಮನೆಯಿಂದ ದೂರವೇ ಉಳಿದಿದ್ದು ಕುಟುಂಬದ ಕಡೆ ಗಮನ ಹರಿಸಲು ಸಾಧ್ಯವಾಗುತ್ತಿಲ್ಲ. ಖಾಸಗಿ ಆಸ್ಪತ್ರೆಗಳ ವೈದ್ಯರೂ ಈ ಸಮಸ್ಯೆಗಳಿಂದ ಹೊರತಾಗಿಲ್ಲ.
ಪ್ರಸಕ್ತ ರಾಜ್ಯದಲ್ಲಿ 40 ವೈದ್ಯರ ಮೇಲೆ ದಾಳಿ ನಡೆದಿದೆ. ಕರ್ತವ್ಯನಿರತ ವೈದ್ಯರ ಮೇಲೆ ಹಲ್ಲೆ ನಡೆಸಿದರೆ ಕಾನೂನಿನಡಿ 3 ವರ್ಷ ಜೈಲು ಶಿಕ್ಷೆ ಸಹಿತ ದಂಡ ವಿಧಿಸಲು ಅವಕಾಶವಿದೆ. ಈ ಕಾನೂನು ಪರಿಣಾಮಕಾರಿಯಾಗಿ ಜಾರಿಯಾಗದ ಕಾರಣ, ವೈದ್ಯರ ಮೇಲಿನ ಹಲ್ಲೆ ಪ್ರಕರಣಗಳು ಮುಂದುವರಿದಿವೆ. ರಾಜ್ಯದಲ್ಲಿ ಕಳೆದ ಹತ್ತು ವರ್ಷಗಳಲ್ಲಿ 344 ಪ್ರಕರಣಗಳು ದಾಖಲಾಗಿವೆ. ಕೋವಿಡ್ ಸಂದರ್ಭದಲ್ಲಿ ಇದು ಮತ್ತಷ್ಟು ಹೆಚ್ಚಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಘ ಆರೋಪಿಸಿದೆ.
ವೈದ್ಯಕೀಯ ಕ್ಷೇತ್ರದಲ್ಲಿ ಪ್ರಾಕ್ಟೀಷನರ್ಸ್ ಬಹುತೇಕ ವಯಸ್ಸಾದವರೇ ಹೆಚ್ಚು. ಸಣ್ಣ ಪುಟ್ಟ ಕ್ಲಿನಿಕ್​ಗಳನ್ನು ನಡೆಸಿಕೊಂಡು ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ಇವರಲ್ಲಿ ಬಹುತೇಕರು ಮಧುಮೇಹ, ರಕ್ತದೊತ್ತಡ ಸೇರಿ ವಯೋಸಹಜ ಆರೋಗ್ಯ ಸಮಸ್ಯೆಗಳನ್ನು ಹೊಂದಿದ್ದಾರೆ. ಹೀಗಾಗಿ ಕ್ಲಿನಿಕ್ ತೆರೆಯಲು ಹೆದರುತ್ತಿದ್ದು, ಬಹುತೇಕರು ಪ್ರಾಕ್ಟೀಸ್ ನಿಲ್ಲಿಸಿ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಸರ್ಕಾರ ಕೆಪಿಎಂಇ ಅಡಿ ಪರವಾನಗಿ ರದ್ದು ಪಡಿಸುವುದಾಗಿ ಬೆದರಿಕೆ ಒಡ್ಡಿರುವುದರಿಂದ ಹಲವರು ಸೇವೆ ಆರಂಭಿಸಿದ್ದು, ಸೋಂಕಿಗೆ ಒಳಗಾಗುತ್ತಿದ್ದಾರೆ.ಇದನ್ನೂ ಓದಿ:‘ಮನೆಗೆ ಕರೆದುಕೊಂಡು ಹೋಗಿ ಮಾಡಬಾರದ್ದು ಮಾಡಿದ…’: ಠಾಣೆ ಮೆಟ್ಟಿಲೇರಿದ ಯುವತಿ
ಕರೊನಾ ಸೋಂಕಿನಿಂದ ರೋಗಿಗಳ ಜೀವ ಉಳಿಸುವ ವೈದ್ಯರಿಗೆ ಸಾವು ಬದುಕಿನ ನಡುವೆ ಸೆಣೆಸುವಂತಾಗಿದೆ. ಐಎಂಎ ಕರ್ನಾಟಕ ಶಾಖೆ ಮಾಹಿತಿ ಪ್ರಕಾರ, ರಾಜ್ಯದಲ್ಲಿ ಕಳೆದ ಆರು ತಿಂಗಳಲ್ಲಿ 43 ವೈದ್ಯರು ಕರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಕಾರ್ಯದೊತ್ತಡದಿಂದ ಮೂವರು ಸಾವನ್ನಪ್ಪಿದ್ದಾರೆ. ಭಾರತೀಯ ವೈದ್ಯಕೀಯ ಸಂಘ ಹೇಳುವಂತೆ, ದೇಶದಲ್ಲಿ ಸಾಮಾನ್ಯ ಜನಸಂಖ್ಯೆಗಿಂತ 5-6 ಪಟ್ಟು ವೈದ್ಯರು ಕೋವಿಡ್-19ಕ್ಕೆ ಬಲಿಯಾಗಿದ್ದಾರೆ. ಅಂಕಿ-ಅಂಶಗಳ ಪ್ರಕಾರ, ಈವರೆಗೂ 2,238ಕ್ಕೂ ಹೆಚ್ಚು ವೈದ್ಯರು ಸೋಂಕಿಗೆ ಒಳಗಾಗಿದ್ದು, 383 ಮಂದಿ ಸಾವಿಗೀಡಾಗಿದ್ದಾರೆ. ವೈದ್ಯರ ಕೋವಿಡ್ ಮರಣ ಪ್ರಮಾಣ ಶೇ.17.11 ಆಗಿದ್ದು, ಇದು ದೇಶದ ಒಟ್ಟಾರೆ ಕೋವಿಡ್ ಮರಣ ಪ್ರಮಾಣ ಶೇ.1.7ಕ್ಕಿಂತ ಹೆಚ್ಚಿದೆ.
ಜ್ವರದಿಂದ ಬಳಲುತ್ತಿದ್ದ ಕುಂದಗೋಳ ಕ್ಷೇತ್ರದ ಶಾಸಕಿ ಕುಸುಮಾವತಿ ಶಿವಳ್ಳಿ ಅವರಿಗೆ ಕರೊನಾ ಪಾಸಿಟಿವ್ ದೃಢಪಟ್ಟಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದರಿಂದ ಅವರು ಸೋಮವಾರ ಆರಂಭಗೊಳ್ಳುವ ವಿಧಾನಸಭೆ ಅಧಿವೇಶನದಿಂದ ದೂರ ಉಳಿಯಬೇಕಾಗಿದೆ.
ಕೋವಿಡ್ ಕಾರ್ಯದಲ್ಲಿ ನಿರತರಾಗಿರುವ ಖಾಸಗಿ ವೈದ್ಯರಿಗೂ ಮಹಾರಾಷ್ಟ್ರ ಮಾದರಿಯಲ್ಲಿ 50 ಲಕ್ಷ ರೂ. ವಿಮಾ ಸೌಲಭ್ಯ ಒದಗಿಸುವಂತೆ ಸರ್ಕಾರವನ್ನು ಒತ್ತಾಯಿಸಲಾಗಿದೆ.
| ಡಾ.ಎಸ್.ಶ್ರೀನಿವಾಸ್. ಕಾರ್ಯದರ್ಶಿಐಎಂಎ ರಾಜ್ಯ ಶಾಖೆ
ಕರ್ನಾಟಕದಲ್ಲಿ ಹೆಚ್ಚಲಿದೆ ಕರೊನಾ ಮರಣ ಪ್ರಮಾಣ; ತಜ್ಞರ ಎಚ್ಚರಿಕೆ

ಅಪಾಯದಲ್ಲಿ ಹಾವೇರಿ; ಮುನ್ನೆಚ್ಚರಿಕೆಗೆ ಗೃಹ ಸಚಿವರಿಂದ ಖಡಕ್​ ಸೂಚನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 + 20 =
Remember me
