ಬೆಂಗಳೂರು: ಹಿರಿಯರ ಮೊಗದಲ್ಲಿ ಬಾಲ್ಯದ ನೆನಪು.. ಗಬಗಬನೆ ಇಡ್ಲಿ ತಿಂದು ಉಸ್ಸಪ್ಪ ಎಂದ ಸ್ಪರ್ಧಿಗಳು…. ರಿಂಗ್​ನಲ್ಲಿ ಗಿಫ್ಟ್ ಗಿಟ್ಟಿಸಿಕೊಳ್ಳಲು ನೂಕುನುಗ್ಗಲು… ಪ್ರಶಸ್ತಿ ಗೆದ್ದು ಖುಷಿಪಟ್ಟವರು… ವಿಜಯವಾಣಿ ಹಾಗೂ ದಿಗ್ವಿಜಯ 247 ನ್ಯೂಸ್ ಸಹಯೋಗದಲ್ಲಿ ನೃಪತುಂಗ ರಸ್ತೆಯ ವೈಎಂಸಿಎ ಮೈದಾನದಲ್ಲಿ ಆಯೋಜಿಸಿರುವ ವಿಜಯವಾಣಿ ಪ್ರೀಮಿಯರ್ ಲೀಗ್ ವಿಪಿಎಲ್- ಕ್ರೀಡೋತ್ಸವ 2ನೇ ದಿನವಾದ ಶನಿವಾರ ಕಂಡುಬಂದ ಚಿತ್ರಣವಿದು.
ಬಕೆಟ್​ನಲ್ಲಿ ಬಾಲ್, ರಿಂಗ್​ನಲ್ಲಿ ಗಿಫ್ಟ್, ಇಡ್ಲಿ ತಿನ್ನುವ ಸ್ಪರ್ಧೆ ಹಾಗೂ ಸ್ಕಿಪ್ಪಿಂಗ್​ನಲ್ಲಿ ಭಾಗವಹಿಸುವ ಮೂಲಕ ಕ್ರೀಡೋತ್ಸವಕ್ಕೆ ಸಿಬ್ಬಂದಿ ಮೆರುಗು ತಂದರು. ಇಡ್ಲಿ ತಿನ್ನುವ ಸ್ಪರ್ಧೆಯಲ್ಲಿ 10 ಮಹಿಳಾಮಣಿಗಳು ಸ್ಪರ್ಧಿಸಿದ್ದರು. ಶೈಲಜಾ 3 ನಿಮಿಷದಲ್ಲಿ 9 ಇಡ್ಲಿ ತಿನ್ನುವ ಮೂಲಕ ಪ್ರಥಮ ಸ್ಥಾನ ಪಡೆದರೆ, ಶ್ರುತಿ ಮತ್ತು ಎಂ.ಜಿ. ಅರುಣ ತಲಾ 8 ಇಡ್ಲಿ ತಿಂದು 2ನೇ ಸ್ಥಾನ ಹಂಚಿಕೊಂಡರು. ಪುರುಷರ ಸ್ಪರ್ಧೆಯಲ್ಲಿ 5 ನಿಮಿಷದಲ್ಲಿ ಆರ್.ಎಂ. ವಿಜಯ್ಕುಮಾರ್ 19 ಇಡ್ಲಿ ತಿಂದು ಟ್ರೋಫಿ ಗಿಟ್ಟಿಸಿದರು. ಬಸವರಾಜ್ 17 ಇಡ್ಲಿ ತಿಂದು ರನ್ನರ್ ಆಪ್ ಸ್ಥಾನ ಪಡೆದರು.
ಮಹಿಳಾ ಸ್ಕಿಪ್ಪಿಂಗ್ ಸ್ಪರ್ಧೆಯಲ್ಲಿ ದಿಗ್ವಿಜಯ ನ್ಯೂಸ್​ನ ಅನಿತಾ ವಿಜೇತರಾದರೆ, ದಿಗ್ವಿಜಯ ನ್ಯೂಸ್​ನ ಶೈಲಜಾ 2ನೇ ಸ್ಥಾನ ಪಡೆದರು. ಪುರುಷರ ಸ್ಕಿಪ್ಪಿಂಗ್ ಸ್ಪರ್ಧೆಯಲ್ಲಿ ವಿಜಯವಾಣಿಯ ವೀರೇಶ್ ತಿಪ್ಪಣ್ಣ ಪ್ರಥಮ ಸ್ಥಾನಕ್ಕೆ ಭಾಜನರಾದರೆ, ಶಿವಕುಮಾರ್ 2ನೇ ಸ್ಥಾನಕ್ಕೆ ತೃಪ್ತಿಪಟ್ಟರು. ಬಕೆಟ್​ನಲ್ಲಿ ಬಾಲ್ ಸ್ಪರ್ಧೆಯಲ್ಲಿ ರಾಜಶೇಖರಮೂರ್ತಿ ಹಾಗೂ ಧನಂಜಯ ಕ್ರಮವಾಗಿ 1 ಮತ್ತು 2ನೇ ಸ್ಥಾನ ಪಡೆದರು.
ಪ್ರೋತ್ಸಾಹಿಸಿದ ಕಸಾಪ ಅಧ್ಯಕ್ಷ
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಮಹೇಶ ಜೋಶಿ 2ನೇ ದಿನದ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಇಡ್ಲಿ ತಿನ್ನುವ ಸ್ಪರ್ಧೆಯಲ್ಲಿ ವಿಜೇತರಾದ ವಿಜಯ್​ಕುಮಾರ್​ಗೆ 1,900 ರೂ. ಹಾಗೂ ಶೈಲಜಾಗೆ 900 ರೂ.ಗಳನ್ನು ವೈಯಕ್ತಿಕವಾಗಿ ನೀಡಿದರು. ರಿಂಗ್​ನಲ್ಲಿ ಗಿಫ್ಟ್, ಬಕೆಟ್​ನಲ್ಲಿ ಬಾಲ್ ಹಾಗೂ ಸ್ಕಿಪ್ಪಿಂಗ್ ಆಟಗಳು ನನ್ನ ಬಾಲ್ಯ ಜೀವನವನ್ನು ನೆನಪಿಸಿದವು. ಸೋಲು-ಗೆಲುವು ಈ ಎರಡನ್ನು ಸಮನಾಗಿ ಸ್ವೀಕರಿಸುವುದೇ ಕ್ರೀಡಾ ಮನೋಭಾವ. ಅಂಥ ಮನೋಭಾವ ಬೆಳೆಸಿಕೊಳ್ಳಲು ಇಂಥ ಕ್ರೀಡಾಕೂಟ ಮಹತ್ವದ ಕಾಣಿಕೆ ಸಲ್ಲಿಸುತ್ತದೆ ಎಂದರು.
ಇಂದು ಫೈನಲ್
ದಿಗ್ವಿಜಯ ಡೇರ್​ಡೆವಿಲ್ಸ್ ತಂಡ ಸತತ 2 ಪಂದ್ಯ ಗೆದ್ದು ಹಾಗೂ ಸರ್ಕ್ಯುಲೇಷನ್ ಚೀತಾ ತಂಡ ರನ್​ರೇಟ್ ಆಧಾರದಲ್ಲಿ ಸೆಮಿಫೈನಲ್​ಗೆ ಪ್ರವೇಶಿಸಿವೆ. ದಿಗ್ವಿಜಯ ಕಿಂಗ್ಸ್, ಬ್ಯೂರೋ ಬ್ರದರ್ಸ್ ಹಾಗೂ ಪ್ರಿಂಟ್ ಚಾಲೆಂಜರ್ಸ್ ತಲಾ ಒಂದು ಪಂದ್ಯಗಳನ್ನು ಜಯಸಿದವು. ಮೊಫ್ಯುಸಿಲ್ ಹಂಟರ್ಸ್ 2 ಪಂದ್ಯ ಹಾಗೂ ವಿಜಯವಾಣಿ ಸ್ಟಾರ್ಸ್ ತಂಡ ಒಂದು ಪಂದ್ಯ ಸೋಲು ಅನುಭವಿಸಿದೆ. ಭಾನುವಾರ (ಏ.24) 2ನೇ ಹಂತದ ಪಂದ್ಯಾವಳಿ ಹಾಗೂ ಸೆಮಿಫೈನಲ್, ಫೈನಲ್ ಜರುಗಲಿವೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − three =
Remember me
