ಬೆಂಗಳೂರು:ಸಾಹಿತ್ಯ, ಸಿನಿಮಾ, ರಾಜಕೀಯ ಅಂದ್ರೆ ನನಗೆ ಇಷ್ಟ ಎಂದು ನಟಿ ಮೇಘನಾ ಗಾಂವ್ಕರ್​ ಹೇಳಿದ್ದಾರೆ. ವಿಜಯವಾಣಿ ವತಿಯಿಂದ ಬಸವನಗುಡಿಯ ನ್ಯಾಷನಲ್​ ಕಾಲೇಜು ಮೈದಾನದಲ್ಲಿ ಆಯೋಜಿಸಿರುವ ಎರಡು ದಿನಗಳ “ಎಜುಕೇಷನ್​ ಎಕ್ಸ್​ಪೋ’ ಮೇಳ ಉದ್ಘಾಟಿಸಿ ಮಾತನಾಡಿದರು.
ಎಸ್ಸೆಸ್ಸೆಲ್ಸಿ, ಪಿಯುಸಿ ಮುಗಿದ ಬಳಿಕ ಸಾಹಿತ್ಯ ಕೋರ್ಸ್​ ಓದಬೇಕೆಂಬ ಆಸೆ ಇತ್ತು. ಈ ಬಗ್ಗೆ ಪಾಲಕರಿಗೆ ಹೇಳುವ ಧೈರ್ಯ ನನಗೆ ಇರಲಿಲ್ಲ. ನಮ್ಮ ತಂದೆಗೆ ವಿಜ್ಞಾನ ಕೋರ್ಸ್​ ತೆಗೆದುಕೊಳ್ಳಬೇಕೆಂದು ಹೇಳಿದ್ದರು. ಆದರೆ, ಅಂತಿಮವಾಗಿ ಬಿ.ಕಾಂ ಓದಿದ್ದೆ. ಕಾಲೇಜಿಗೆ ಸೇರಿಸುವ ಮುನ್ನ ಪಾಲಕರು ತಮ್ಮ ಮಕ್ಕಳ ಜತೆ ಚರ್ಚಿಸಬೇಕು. ಇಷ್ಟವಾದ ಕೋರ್ಸ್​ ಓದಲು ಪ್ರೋತ್ಸಾಹ ನೀಡಬೇಕು. ಯಾವುದೇ ಕಾರಣಕ್ಕೂ ಇಷ್ಟವಿಲ್ಲದಿರುವ ಕೋರ್ಸ್​ ಓದುವಂತೆ ಪಾಲಕರು ತಮ್ಮ ಮಕ್ಕಳಿಗೆ ಬಲವಂತ ಮಾಡಬಾರದು ಎಂದು ಸಲಹೆ ನೀಡಿದರು. “ಎಜುಕೇಷನ್​ ಎಕ್ಸ್​ಪೋ’ಅಂತಹ ಕಾರ್ಯಕ್ರಮಗಳಿಗೆ ಭೇಟಿ ನೀಡಿದರೆ ಶಿಕ್ಷಣಕ್ಕೆ ಸಂಬಂಧಿಸಿದ ಜ್ಞಾನ ವೃದ್ಧಿಯಾಗುತ್ತದೆ. ನಾನು ಕಾಲೇಜುಗೆ ತೆರಳುವ ಸಂದರ್ಭದಲ್ಲಿ ಇಂತಹ ಎಕ್ಸ್​ಪೋಗಳು ಇರಲಿಲ್ಲ. ಶಿಕ್ಷಣವೂ ನಮ್ಮ ದೇಶದ ಆಧಾರಸ್ತಂಭ. ಪ್ರತಿಯೊಬ್ಬರ ಜೀವನದಲ್ಲೂ ಶಿಕ್ಷಣ ಎಂಬುದು ತುಂಬ ಮುಖ್ಯ. ನಾನು ಪ್ರವಾಸ ಮಾಡುವಾಗ ಆ ರಾಜ್ಯದ ಸಾಕ್ಷರತೆ ಎಷ್ಟಿದೆ ಎಂಬುದರ ಬಗ್ಗೆ ತಿಳಿದುಕೊಳ್ಳುತ್ತೇನೆ.ಕರ್ನಾಟಕವು ಶೇ.100 ಸಾಕ್ಷರತೆ ಹೊಂದಿರುವ ರಾಜ್ಯವಾಗಬೇಕು ಎಂದರು.
ಚಿನ್ನಸ್ವಾಮಿಯಲ್ಲಿ ಮತ್ತೊಂದು ಐತಿಹಾಸಿಕ ದಾಖಲೆ ಬರೆದ ವಿರಾಟ್​​ ಕೊಹ್ಲಿ
ಬಿ.ಕಾಂ ಓದಿದ್ದೆ:ಶಾಲಾ-ಕಾಲೇಜಿನಲ್ಲಿ ಮಕ್ಕಳಿಗೆ ಪ್ರವೇಶ ಕಲ್ಪಿಸುವುದು,ಕಳುಹಿಸುವುದು ಪಾಲಕರಿಗೆ ಐಎಎಸ್​ ಪರೀಕ್ಷೆ ಬರೆದಂತೆ.ವಿಜಯವಾಣಿ ಆಯೋಜಿಸಿರುವ “ಎಜುಕೇಷನ್​ ಎಕ್ಸ್​ಪೋ’ದಲ್ಲಿ ಶಿಕ್ಷಣಕ್ಕೆ ಸಂಬಂಧಿಸಿದ ಎಲ್ಲ ಮಾಹಿತಿಗಳು ಒಂದೇ ಸೂರಿನಡಿ ದೊರೆಯಲಿದೆ. ಇದನ್ನು ಪಾಲಕರು, ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಳ್ಳಬೇಕು. ನಾನು ಬಿ.ಕಾಂ ಕೋರ್ಸ್​ ಓದಿದ್ದೆ. ನನ್ನ ಅಣ್ಣ “ಚಾರ್ರ್ಟಡ್​ ಅಕೌಂಟೆಂಟ್​'(ಸಿಎ) ಓದಿದ್ದಾನೆ. ನನ್ನ ಅಣ್ಣ ಆ ಕೋರ್ಸ್​ ಓದುವಂತೆ ನನಗೆ ಪುಸ್ತಕ ತಂದುಕೊಟ್ಟ. ಆ ಪುಸ್ತಕಗಳನ್ನು ನೋಡಿದ ತಕ್ಷಣ “ಮೈಗ್ರೇನ್​ ಅಟ್ಯಾಕ್​’ಆಯ್ತು. ಆಮೇಲೆ ಸಿನಿಮಾ ಕ್ಷೇತ್ರಕ್ಕೆ ಬಂದೆ ಎಂದು ನಟ ದಿಗಂತ್​ ಹೇಳಿದರು.
ನನ್ನ ಇಬ್ಬರು ಮಕ್ಕಳು ಶಾಲಾ-ಕಾಲೇಜಿನಲ್ಲಿ ಓದುತ್ತಿದ್ದಾರೆ. “ಎಜುಕೇಷನ್​ ಎಕ್ಸ್​ಪೋ’ಕ್ಕೆ ಭೇಟಿ ನೀಡಿ ಕೋರ್ಸ್​ಗಳ ಬಗ್ಗೆ ಮಾಹಿತಿ ಪಡೆದುಕೊಂಡಿದ್ದೇನೆ. ಇಂತಹ ಕಾರ್ಯಕ್ರಮಗಳಿಂದ ನಮ್ಮಂತಹ ಪಾಲಕರಿಗೆ ಸಾಕಷ್ಟು ಅನುಕೂಲವಾಗುತ್ತದೆ. “ಎಕ್ಸ್​ಪೋ’ದಲ್ಲಿ ಪಿಯುಸಿ, ಎಸ್ಸೆಸ್ಸೆಲ್ಸಿ ಮುಗಿದ ಬಳಿಕ ಯಾವ ಕೋರ್ಸ್​ ಓದಿದರೆ ಒಳ್ಳೆಯದು ಎಂಬುದರ ಬಗ್ಗೆ ಪರಿಣಿತರಿಂದ ಅಮೂಲ್ಯ ಮಾಹಿತಿ ದೊರೆಯುತ್ತದೆ. ವಿಆರ್​ಎಲ್​ ಲಾಜಿಸ್ಟಿಕ್​ ಕಂಪನಿ, ರಾಜ್ಯದ ಮೂಲೆ ಮೂಲೆಗೆ ಸಾರಿಗೆ ಸೌಲಭ್ಯ ಕಲ್ಪಿಸಿರುವುದರಿಂದ ಗಮನಾರ್ಹ.ಗುರುರಾಜ್​ ಕುಲಕರ್ಣಿ. ನಿರ್ದೇಶಕ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − fourteen =
Remember me
