| ಗೋವಿಂದರಾಜು ಚಿನ್ನಕುರ್ಚಿ, ಬೆಂಗಳೂರು
ರಾಜ್ಯದ ಕಾರಾಗೃಹಗಳಲ್ಲಿ ಮೊಬೈಲ್ ಬಳಕೆ ನಿಷೇಧಿಸಿ, ಸಿಗ್ನಲ್ ಸಿಗದಂತೆ ಜಾಮರ್ ಅಳವಡಿಸುವುದಕ್ಕೆ ಕೋಟಿ ಕೋಟಿ ರೂ. ಖರ್ಚು ಮಾಡಿದರೂ ಫೋನ್​ಗಳು ರಿಂಗಣಿಸುವುದಕ್ಕೆ ಮಾತ್ರ ತಡೆ ಬಿದ್ದಿಲ್ಲ.! ಪರಪ್ಪನ ಅಗ್ರಹಾರ ಸೇರಿ 7 ಜೈಲುಗಳಿಗೆ ‘ಟವರ್ಸ್ ಆಫ್ ದಿ ಹಮೋನೀಸ್ ಸೆಲ್ ಬ್ಲಾಕಿಂಗ್ ಸಿಸ್ಟಮ್ ಟೆಕ್ನಾಲಜಿ (ಟಿ-ಎಚ್​ಸಿಬಿಎಸ್) ಒಳಗೊಂಡ ಮೊಬೈಲ್ ಟವರ್ ಅಳವಡಿಸಲಾಗಿದೆ. ಜತೆಗೆ 5 ವರ್ಷದ ನಿರ್ವಹಣೆಗೆ 11.32 ಕೋಟಿ ರೂ. ಬಿಡುಗಡೆಯಾಗಿದೆ. ಟಿ-ಎಚ್​ಸಿಬಿಎಸ್ ಟವರ್​ಗಳು ನಿಗದಿತ ವ್ಯಾಪಿಯಲ್ಲಿ ಮೊಬೈಲ್​ಗೆ ಸಿಗ್ನಲ್​ಗಳು ದೊರೆಯದಂತೆ ಕೆಲಸ ಮಾಡುತ್ತವೆ.
ಇವುಗಳ ನಿರ್ವಹಣೆಗೂ ಕೋಟ್ಯಂತರ ರೂಪಾಯಿ ಖರ್ಚು ಮಾಡಲಾಗುತ್ತಿದೆ. ಆದರೆ, ಭಯೋತ್ಪಾದಕ ಚಟುವಟಿಕೆ, ಸಮಾಜಘಾತುಕ ಕೃತ್ಯ, ಕೊಲೆ ಪ್ರಕರಣಗಳಂತಹ ಗಂಭೀರ ಕೇಸಿನಲ್ಲಿ ನ್ಯಾಯಾಂಗ ಬಂಧನ ಅಥವಾ ಶಿಕ್ಷೆಗೆ ಒಳಗಾಗಿರುವ ಕೈದಿಗಳ ಕೈಯಲ್ಲಿ ಸ್ಮಾರ್ಟ್ ಫೋನ್ ಸುಲಭವಾಗಿ ಸಿಗುತ್ತಿವೆ. ಕೆಲವರು ಜೈಲಿನಲ್ಲಿ ಕುಳಿತು ಹೊರಜಗತ್ತಿನೊಂದಿಗೆ ನಂಟು ಬೆಳೆಸಿಕೊಂಡು ದುಷ್ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದರೆ, ಇನ್ನೂ ಕೆಲವರು ಬೆದರಿಕೆ ಕರೆ ಮಾಡಿ ಹಫ್ತಾ ವಸೂಲಿ ಮಾಡುತ್ತಿದ್ದಾರೆ.
2.96 ಕೋಟಿ ರೂ. ಬಿಡುಗಡೆ: ಪರಪ್ಪನ ಅಗ್ರಹಾರ ಜೈಲಲ್ಲಿ ಮೂರು ಟಿ-ಎಚ್​ಸಿಬಿಸ್ ಮೊಬೈಲ್ ಟವರ್ ಅಳವಡಿಕೆ ಮತ್ತು 5 ವರ್ಷದ ನಿರ್ವಹಣೆಗಾಗಿ 4.67 ಕೋಟಿ ರೂ. ವೆಚ್ಚವಾಗುತ್ತಿದೆ. ಮೇ 2ರಂದು 2.96 ಕೋಟಿ ರೂ. ಬಿಡುಗಡೆಯಾಗಿದೆ. ನಟ ದರ್ಶನ್ ಮತ್ತು ರೌಡಿಗಳು ಮೊಬೈಲ್ ಬಳಕೆ ಮಾಡಿರುವ ಫೋಟೋ ಮತ್ತು ವಿಡಿಯೋ ಹೊರ ಬಂದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರಕ್ಕೆ ಮುಜುಗರ ಉಂಟಾಯಿತು. ಕಾರಾಗೃಹ ಮತ್ತು ಸುಧಾರಣಾ ಸೇವೆ ಡಿಜಿಪಿ ಮಾಲಿನಿ ಕೃಷ್ಣಮೂರ್ತಿಗೆ ಕಾರಣ ಕೇಳಿ ನೋಟಿಸ್ ಸಹ ಜಾರಿ ಮಾಡಲಾಗಿದೆ.
11.32 ಕೋಟಿ ರೂ. ವೆಚ್ಚ: ಬೆಂಗಳೂರು, ಬೆಳಗಾವಿ, ವಿಜಯಪುರ, ಧಾರವಾಡ, ಶಿವಮೊಗ್ಗ, ಬಳ್ಳಾರಿ, ತುಮಕೂರು ಕೇಂದ್ರ ಕಾರಾಗೃಹಗಳಲ್ಲಿ ಟಿ-ಎಚ್​ಸಿಬಿಎಸ್ ಮೊಬೈಲ್ ಟವರ್ ಅಳವಡಿಕೆ ಮತ್ತು ನಿರ್ವಹಣೆ ಸಲುವಾಗಿ 11.32 ಕೋಟಿ ರೂ. ಮೀಸಲಿಡಲಾಗಿದೆ.
ಸೇವಾ ಪೂರೈಕೆದಾರರಿಗೆ ಆರ್​ಟಿಜಿಎಸ್ ಮೊತ್ತ
ಬೆಳಕಿಗೆ ಬಂದ ಪ್ರಕರಣಗಳು
ಅಬ್ಬಾ! ಎಂತಹ ಜಾಗದಲ್ಲಿ ಅಡಗಿದೆ MH370 ವಿಮಾನ: ನಿಗೂಢ ನಾಪತ್ತೆ ಕೇಸ್​ ಬಗೆಹರಿದಿದೆ ಎಂದ ವಿಜ್ಞಾನಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven − 7 =
Remember me
