|ರುದ್ರಣ್ಣ ಹರ್ತಿಕೋಟೆಬೆಂಗಳೂರು
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಎಂಟನೇ ಬಜೆಟ್ ಮಂಡಿಸಿದ ಬೆನ್ನಲ್ಲೇ ಮುಂದಿನ ಆರ್ಥಿಕ ವರ್ಷಗಳಲ್ಲಿ ರಾಜ್ಯದ ಹಣಕಾಸು ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವ ಮುನ್ಸೂಚನೆಯನ್ನು ರಾಜಸ್ವ ಕೊರತೆ ಹೆಚ್ಚಳ ಹೊರಹಾಕಿದೆ. ಹೀಗಾಗಿ ಇದನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ ಸಬ್ಸಿಡಿಗಳ ಕಡಿತ ಸೇರಿದಂತೆ ಹಲವು ಕ್ರಮಗಳತ್ತ ಗಮನ ಹರಿಸುವ ಮೂಲಕ ಸ್ಪಷ್ಟ ಹೆಜ್ಜೆಯನ್ನಿಟ್ಟಿದೆ. ರಾಜ್ಯದ ಜಿಎಸ್​ಡಿಪಿ ಶೇ.2.6 ಕಡಿಮೆಯಾಗಿರುವುದರಿಂದ ಅನೇಕ ಪರಿಣಾಮಗಳು ಕಾಣಿಸಿಕೊಂಡಿವೆ. ವಿತ್ತೀಯ ನಿರ್ವಹಣೆ ಪರಿಶೀಲನಾ ಸಮಿತಿ ನೀಡಿರುವ ಸಲಹೆಗಳ ಜಾರಿ ಮೂಲಕವೇ ವಿತ್ತೀಯ ಸವಾಲು ಎದುರಿಸಲು ಸರ್ಕಾರದ ಮುಂದಾಗಿದೆ. ರಾಜಸ್ವ ಕೊರತೆಯಿಂದಾಗಿ ಮುಂದಿನ ವರ್ಷಗಳಲ್ಲಿ ಬಹಳ ದೊಡ್ಡ ಸಂಕಷ್ಟ ಎದುರಾಗಲಿದೆ. ಸಾಲವನ್ನೇ ಅವಲಂಬಿಸಬೇಕಿದೆ. ಸರ್ಕಾರ ಬರಿಸಲೇಬೇಕಾದ ಬದ್ಧತಾ ವೆಚ್ಚಗಳಿಂದಾಗಿ ರಾಜ್ಯದ ಸ್ವಂತ ತೆರಿಗೆಗಳು ಶೇ.91ಕ್ಕೆ ತಲುಪಿದ್ದರೆ, ಸಾಲದ ಮೇಲಿನ ಬಡ್ಡಿ ಪ್ರಮಾಣ ರಾಜಸ್ವ ವೆಚ್ಚದ ಶೇ.15 ದಾಟಲಿದೆ. ಆದ್ದರಿಂದಲೇ ರಾಜ್ಯ ಸರ್ಕಾರ ವಿವೇಚನೆಯ ಹೆಜ್ಜೆ ಹಾಕಬೇಕಾಗಿರುವುದನ್ನು ಪರಿಶೀಲನಾ ಸಮಿತಿ ಸರ್ಕಾರದ ಗಮನಕ್ಕೆ ತಂದಿದೆ. ಈ ವರ್ಷವೇ ರಾಜ್ಯದ ಸಾಲ 71 ಸಾವಿರ ಕೋಟಿ ರೂ.ಗೆ ತಲುಪುತ್ತಿದೆ. 2024-25ಕ್ಕೆ ಸಾಲ 6,42,578 ಕೋಟಿ ರೂ.ಗಳಾಗುವುದರಿಂದ ಬಡ್ಡಿ ಹೆಚ್ಚಾಗುತ್ತದೆ. ಬದ್ಧ ವೆಚ್ಚಕ್ಕೂ ಸಮಸ್ಯೆಯಾಗಬಾರದೆಂಬ ಉದ್ದೇಶವನ್ನು ಸಮಿತಿ ಹೊಂದಿರುವುದು ವರದಿಯಲ್ಲಿನ ಶಿಫಾರಸುಗಳನ್ನು ನೋಡಿದಾಗ ತಿಳಿಯುತ್ತದೆ. ತೆರಿಗೆ ಸಂಗ್ರಹದ ಜತೆಗೆ ಕೇಂದ್ರದ ಪಾಲು ಕಡಿಮೆಯಾಗಿರುವುದನ್ನು ಕೇವಲ ಈ ವರ್ಷಕ್ಕೆ ಮಾತ್ರವೆಂದು ಪರಿಗಣಿಸಲಾಗದು. ಮುಂದಿನ ವರ್ಷಗಳಲ್ಲಿ ಇನ್ನಷ್ಟು ಪರಿಣಾಮ ಉಂಟಾಗಲಿದೆ ಎಂಬ ಎಚ್ಚರಿಕೆಯನ್ನೂ ಸಮಿತಿ ನೀಡಿದೆ.
ಇಲಾಖೆ ವಿಲೀನ ಧ್ವನಿಗೆ ಬಲ:ರಾಜಸ್ವ ಕೊರತೆಯಿಂದಾಗಿ ಬದ್ಧತಾ ವೆಚ್ಚ ಹೆಚ್ಚುವುದರಿಂದ ಇಲಾಖೆಗಳ ವಿಲೀನ ಹಾಗೂ ಹುದ್ದೆಗಳ ಪುನರ್ ಜೋಡಿಸುವ ಸರ್ಕಾರದ ಚರ್ಚೆಗೆ ಮತ್ತಷ್ಟು ಬಲ ಬಂದಿದೆ. ಇಲಾಖೆಗಳನ್ನು ತರ್ಕಬದ್ಧಗೊಳಿಸಿದರೆ ನೌಕರರ ಉತ್ಪಾದಕತೆಯನ್ನು ಹೆಚ್ಚಿಸಬಹುದೆಂದು ಹೇಳಲಾಗುತ್ತಿದೆ. ಇದರಿಂದ ಆಡಳಿತ ವೆಚ್ಚದ ಮೇಲೂ ನಿಯಂತ್ರಣ ಸಾಧಿಸಬಹುದಾಗಿದೆ. ವೇತನಗಳಿಗೆ 2020-21ನೇ ಸಾಲಿನಲ್ಲಿ 37080 ಕೋಟಿ ರೂ.ಗಳಿರುವುದು, 2021-22 ನೇ ಸಾಲಿಗೆ 38626 ಕೋಟಿ ರೂ.ಗಳಿಗೆ, 2024-25 ನೇ ಸಾಲಿಗೆ 61696 ಕೋಟಿ ರೂ.ಗಳಿಗೆ ತಲುಪಲಿದೆ. ಆದ್ದರಿಂದಲೇ ಇಲಾಖೆಗಳ ವಿಲೀನ ತುರ್ತು ಅನಿವಾರ್ಯ ಎಂಬ ಸ್ಥಿತಿ ಉಂಟಾಗಿದೆ.
ತೆರಿಗೇಯೇತರ ರಾಜಸ್ವ ಹೆಚ್ಚಳ:ತೆರಿಗೆ ಆದಾಯ ಹೆಚ್ಚಳ ಅಸಾಧ್ಯ ಎಂಬುದನ್ನು ಮನಗಂಡೇ ಸಮಿತಿ ತೆರಿಗೆಯೇತರ ರಾಜಸ್ವ ಹೆಚ್ಚಳಕ್ಕೆ ಸೂಚಿಸಿದೆ. ಕಳೆದ 3 ವರ್ಷಗಳಿಂದ ಆಗದ ಬಳಕೆದಾರರ ಶುಲ್ಕ ಹೆಚ್ಚಿಸಬೇಕೆಂದು ಸ್ಪಷ್ಟವಾಗಿ ಹೇಳಿದೆ. ಇದರಿಂದ ಮುಂದಿನ ದಿನಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿ ಬಳಕೆದಾರರ ಶುಲ್ಕದ ಹೊರೆಯನ್ನು ಹೊರಲು ಜನಸಾಮಾನ್ಯರು ಸಿದ್ಧರಾಗಬೇಕಾಗಿದೆ.
ಸಬ್ಸಿಡಿ ಕಡಿತ ಎಷ್ಟು?:ರಾಜ್ಯ ಸರ್ಕಾರ ಆಹಾರ, ಹಾಲು, ವಸತಿ, ಕೃಷಿ, ಶಿಕ್ಷಣ, ಸಾರಿಗೆ ಹೀಗೆ ವಿವಿಧ ವಲಯಗಳಲ್ಲಿ ಜನ ಸಾಮಾನ್ಯರಿಗೆ ಸಬ್ಸಿಡಿ ನೀಡುತ್ತದೆ. ಆದರೆ ಹಣಕಾಸಿನ ತೀವ್ರ ಕೊರತೆ ಹಿನ್ನೆಲೆಯಲ್ಲಿ ಸಬ್ಸಿಡಿ ಕಡಿಮೆ ಮಾಡಿದೆ. 2020-21ನೇ ಸಾಲಿನಲ್ಲಿ 25133.25 ಕೋಟಿ ರೂ.ಗಳಿದ್ದ ಸಬ್ಸಿಡಿ ಪ್ರಮಾಣ 2021-22ನೇ ಸಾಲಿನಲ್ಲಿ 23758.60 ಕೋಟಿ ರೂ.ಗೆ ಇಳಿಕೆಯಾಗುತ್ತಿದೆ. ಅಂದರೆ 1374.65 ಕೋಟಿ ರೂ. ಕಡಿಮೆಯಾಗುತ್ತಿದೆ. ಅದರಲ್ಲೂ ಪ್ರಮುಖವಾಗಿ ಆಹಾರಕ್ಕೆ ಸುಮಾರು 1000 ಕೋಟಿ ರೂ. ಕಡಿಮೆ ಮಾಡಲಾಗಿದೆ.
ಬಂಡವಾಳಕ್ಕೆ ಕೊರತೆ:ರಾಜಸ್ವ ಕೊರತೆ ಹೆಚ್ಚುವುದರಿಂದ ಮುಂದಿನ 5 ವರ್ಷಗಳಲ್ಲಿ ರಾಜ್ಯದಲ್ಲಿ ಬಂಡವಾಳಕ್ಕೆ ಹಣದ ಸಮಸ್ಯೆ ಎದುರಾಗುತ್ತದೆ. 2024-25 ನೇ ಸಾಲಿಗೆ ಬಂಡವಾಳಕ್ಕೆ ಸಿಗುವ ಹಣ 10942 ಕೋಟಿ ರೂ. ಮಾತ್ರ. ಬರುವ ಆದಾಯವೆಲ್ಲ ವೇತನ, ಪಿಂಚಣಿ, ಸಾಲ, ಬಡ್ಡಿ ಪಾವತಿಗೆ ಹೋಗುತ್ತದೆ. ಆದ್ದರಿಂದಲೇ ಎಚ್ಚರಿಕೆ ಹೆಜ್ಜೆಯನ್ನಿಡಬೇಕೆಂಬ ಬಗ್ಗೆ ಸಮಿತಿ ಸೂಚಿಸಿರುವುದೆಂದು ಹಣಕಾಸು ಇಲಾಖೆಯ ಮೂಲಗಳು ಹೇಳುತ್ತವೆ.
ರಾಮನನ್ನು ನೀವು ಗುತ್ತಿಗೆ ಪಡೆದಿದ್ದೀರಾ? ನನ್ನ ಹೆಸರಲ್ಲೇ ರಾಮನಿದ್ದಾನೆ: ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ

ಹೆಂಡತಿಯನ್ನು ಸೇರಲೊಪ್ಪದ ಗಂಡ, ಆಕೆಗೆ ದೆವ್ವ ಹಿಡಿದಿದೆ ಎಂದು ಕಿರುಕುಳ ಕೊಟ್ಟ; ಪತಿ, ಅತ್ತೆ-ಮಾವನ ವಿರುದ್ಧ ದೂರಿತ್ತ ಮಹಿಳೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − 7 =
Remember me
