ರಾಮನಗರ:ಕನಕಪುರ ತಾಲೂಕಿನ ‌ಬೊಮ್ಮಸಂದ್ರ ಗ್ರಾಮದ ಬಳಿ ಸೋಮವಾರ ಸ್ಫೋಟಕಗಳು ಪತ್ತೆಯಾಗಿವೆ. ಗ್ರಾಮದ ಕಾವೇರಿ‌ ನದಿ ಪಕ್ಕದಲ್ಲಿ ಪತ್ತೆಯಾದ ಇವುಗಳಲ್ಲಿ ತಾಮ್ರ ಇರಬಹದು ಎಂದು ಕೆಲವರು ಬೆಂಕಿ ಹಾಕಿ ಸ್ಫೋಟಿಸಿದ್ದಾರೆ. ಆ ಪೈಕಿ ನಾಲ್ಕು ಸ್ಫೋಟಗೊಂಡಿದ್ದು, ಇನ್ನೊಂದು ಸಜೀವ ಸ್ಫೋಟಕ ಪತ್ತೆಯಾಗಿದೆ.
ಇದನ್ನೂ ಓದಿತಿರುಪತಿ ದೇವಾಲಯಕ್ಕೆ 400 ಕೋಟಿ ರೂ. ನಷ್ಟ!
ಸಾತನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಬಾಂಬ್ ಸ್ಕ್ವಾಡ್, ಎಫ್ಎಸ್ಎಲ್ ತಂಡ ಭೇಟಿ ನೀಡಿ ಪರಿಶೀಲಿಸಿದೆ. ಪೊಲೀಸರು ತನಿಖೆ ಮುಂದುವರಿಸಿದ್ದು, ಸ್ಫೋಟಿಸಿದ ಸಂಬಂಧ ಒಬ್ಬನನ್ನು ವಶಕ್ಕೆ ಪಡೆಯಲಾಗಿದೆ.
ಸ್ಫೋಟಕ ಪತ್ತೆಯಾದ ಸ್ಥಳದಲ್ಲಿ ಈ ಹಿಂದೆ ಮಿಲಿಟರಿ ಚಟುವಟಿಕೆ ನಡೆಯುತ್ತಿತ್ತು. ಆ ವೇಳೆ ಇವುಗಳು ಇಲ್ಲೇ ಉಳಿದಿರಬೇಕು. ಇಲ್ಲವೇ ಕಾವೇರಿ ನದಿ ನೀರಿನ ಮೂಲಕ ಬೇರೆಡೆಯಿಂದ ಬಂದಿರಬೇಕು ಎಂಬ ಶಂಕೆ ವ್ಯಕ್ತವಾಗಿದೆ.
ಇದನ್ನೂ ಓದಿಮುಂಬೈನಲ್ಲಿ ಪೂನಂ ಪಾಂಡೆ ಬಂಧನ!
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:thirteen − six =
Remember me
