ದೇವದುರ್ಗ:ತಾಲೂಕಿನ ತಿಂಥಣಿ ಬ್ರಿಡ್ಜ್‌ನಲ್ಲಿರುವ ಕಲಬುರಗಿ ವಿಭಾಗ ಮಟ್ಟದ ಶ್ರೀ ಕನಕ ಗುರುಪೀಠದ ಮಹಾಸಂಸ್ಥಾನದಲ್ಲಿ ಜ.12, 13 ಹಾಗೂ 14ರಂದು ಹಮ್ಮಿಕೊಂಡಿರುವ ಹಾಲುಮತ ಸಂಸ್ಕೃತಿ ವೈಭವ 2021 ಕಾರ್ಯಕ್ರಮದ ಸಿದ್ಧತೆ ಭರದಿಂದ ಸಾಗಿದೆ.
ಶ್ರೀಮಠದ ಸಿದ್ಧರಾಮಾನಂದ ಸ್ವಾಮೀಜಿ ಸಿದ್ಧತೆ ಬಗ್ಗೆ ಶನಿವಾರ ಪರಿಶೀಲನೆ ನಡೆಸಿದರು. ಬುಡಕಟ್ಟು, ಹಾಲುಮತ ಸಾಂಸ್ಕೃತಿಕ ಪರಂಪರೆ ಹಾಗೂ ಬುಡಕಟ್ಟು ಸಮುದಾಯಗಳ ಸಮಾವೇಶ ಎಂಬ ಮೂರು ಬಗೆಯಲ್ಲಿ ನಡೆಯುವ ಕಾರ್ಯಕ್ರಮಕ್ಕೆ ವೇದಿಕೆ ಸಿದ್ಧಪಡಿಸಲಾಗಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಸಚಿವರು, ಶಾಸಕರು, ಸಂಸದರ, ಮಠಾಧೀಶರು ಭಾಗವಹಿಸಲಿದ್ದಾರೆ.
ಈ ವರ್ಷ ಹಿಂದುಳಿದ ಜಾತಿಗಳ ಸಮಾವೇಶ ನಡೆಯಲಿದ್ದು, ಹೆಳವರು, ಗೊರವರು, ಈರಕಾರರು ಹಾಗೂ ಪೂಜಾರಿಗಳು ಪಾಲ್ಗೊಳ್ಳುವರು. ಬುಡಕಟ್ಟು ಕುರುಬ ಜನಾಂಗದ ಕೆಳ ಹಂತದ ಮತ್ತು ಮೇಲ್ವರ್ಗದ ವಿವಿಧ ಆಯಾಮಗಳ ಜಾನಪದ, ಸಾಹಿತ್ಯ ಹಾಗೂ ಅವರ ಸಂಸ್ಕೃತಿ ಬಗ್ಗೆ ಜಾಗೃತಿ ಮೂಡಿಸಿ, ಸಮಾಜದ ಮುಖ್ಯವಾಹಿನಿಗೆ ತಂದು, ಯೋಜನೆ ತಲುಪಿಸುವುದು ಸಮಾವೇಶದ ಮುಖ್ಯ ಉದ್ದೇಶ.
ಮೂರು ದಿನಗಳ ಕಾರ್ಯಕ್ರಮದಲ್ಲಿ ಟಗರು ಕಾಳಗ, ವಿವಿಧ ತಳಿಯ ಟಗರು, ಕುರಿಗಳ ಪ್ರದರ್ಶನ, ಕಂಬಳಿ ಸೇರಿ ವಿವಿಧ ಬುಡಕಟ್ಟು ಜನರ ಸಾಮಗ್ರಿಗಳ ಪ್ರದರ್ಶನ ನಡೆಯಲಿದೆ. ಇದಕ್ಕಾಗಿ ಮುಖ್ಯವೇದಿಕೆ ಸಿದ್ಧಪಡಿಸಿದ್ದು, ಟಗರು ಕಾಳಗ ಸೇರಿ ವಸ್ತು ಪ್ರದರ್ಶನಕ್ಕೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿದೆ ಎಂದು ಶ್ರೀಮಠ ತಿಳಿಸಿದೆ.ಈ ಸಂದರ್ಭ ಶ್ರೀಶಿವ ಸಿದ್ದೇಶ್ವರ ಸ್ವಾಮೀಜಿ, ಮುಖಂಡರಾದ ಶಿವಣ್ಣ ವಕೀಲ, ಶರಣಪ್ಪ ರೂಡಿಗಿ, ನಿವೃತ್ತ ಪ್ರಾಚಾರ್ಯ ಬಿ.ಜಿ.ಕರಿಗಾರ, ಶರಣಯ್ಯ ಒಡೆಯರ್ ಇದ್ದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − ten =
Remember me
