ದೇವನಹಳ್ಳಿ:ಮಳೆಗಾಗಿ ಜನ ನಾನಾ ಆಚರಣೆಗಳ ಮೊರೆ ಹೋಗುವುದು ತಿಳಿದೇ ಇದೆ. ದೇವರಿಗೆ ಪ್ರಾರ್ಥನೆ, ವಿಶೇಷ ಪೂಜೆ, ಹೋಮದಿಂದ ಹಿಡಿದು, ಗೊಂಬೆಗಳ ಮದುವೆ, ಕಪ್ಪೆಗಳ ಮದುವೆಗಳು ಅಲ್ಲಲ್ಲಿ ನಡೆಯುತ್ತಿವೆ. ಜೊತೆಗೆ ಕತ್ತೆಗಳ ಮದುವೆಯೂ. ಇವೆಲ್ಲಾ ಸಾಂಕೇತಿಕವಾಗಿ ನಡೆಯುತ್ತವಷ್ಟೇ. ಆದರೆ ದೊಡ್ಡಬಳ್ಳಾಪುರ ತಾಲೂಕಿನ ಪಚ್ಚಾರಲಹಳ್ಳಿಯಲ್ಲಿ‌ ಗ್ರಾಮದಲ್ಲಿ ಇಬ್ಬರು ಗಂಡು ಮಕ್ಕಳಿಗೆ ವಿವಾಹವಾಗಿ ಬಹಳ ಅದ್ಧೂರಿಯಾಗಿ ನಡೆಯಿತು. ಗ್ರಾಮಸ್ಥರೆಲ್ಲಾ ಸೇರಿ, ಹಿರಿಯರು ಮುಂದೆ ನಿಂತು ಶಾಸ್ತ್ರಬದ್ಧವಾಗಿ ವಿವಾಹವನ್ನು ನೆರವೇರಿಸಿದ್ದು ವಿಶೇಷವಾಗಿತ್ತು.
ಇದನ್ನೂ ಓದಿ:ಮದುವೆ ಮನೆಯಲ್ಲಿಯೇ ನಡೆಯಿತು ದುರಂತ: ಆಡಳಿತ ಮಂಡಳಿಯ ನಿರ್ಲಕ್ಷ್ಯವೇ ಕಾರಣ..?
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಪಚ್ಚಾರಲಹಳ್ಳಿಯಲ್ಲಿ‌, ಮಳೆಗಾಗಿ ಇಬ್ಬರು ಗಂಡು ಮಕ್ಕಳಿಗೆ ಅಣಕು ಮದುವೆ ಮಾಡಿ ಮಳೆಗಾಗಿ ಪ್ರಾರ್ಥನೆ ಮಾಡಿದ್ದಾರೆ.
ಇದನ್ನೂ ಓದಿ:ವಿದೇಶಿ ಜಾತಿಯ ಸಾಕು ಬೆಕ್ಕನ್ನು ಅಪಹರಿಸಿದ ತೃತೀಯ ಲಿಂಗಿಗಳ ಗುಂಪು..!
ಹುಡುಗನಿಗೆ ಹುಡುಗಿ ವೇಶ ಹಾಕಿ ಸೀರೆ ಉಡಿಸಿ ವಧುವಿನಂತೆ ಅಲಂಕಾರಣ ಶಾಸ್ತ್ರೋಕ್ತವಾಗಿ ಗ್ರಾಮಸ್ಥರ ಮುಂದೆ ಮದುವೆ‌ ಮಾಡಿ ಮಳೆಗಾಗಿ ಆರಾಧನೆ ಮಾಡಿದ್ದಾರೆ. ಹೀಗೆ ಮದುವೆ ಮಾಡಿದರೆ ಮಳೆಯಾಗುತ್ತದೆ ಎಂಬ ನಂಬಿಕೆ ಇದೆ. ಹೀಗಾಗಿ ಗ್ರಾಮಾಸ್ಥರೆಲ್ಲಾ ಸೇರಿ ಮದುವೆ ಮಾಡಿ ಮಳೆರಾಯನಿಗೆ ಪ್ರಾರ್ಥನೆ ಮಾಡಿದ್ದಾರೆ.
ಇದನ್ನೂ ಓದಿ:ಚಿನ್ನ-ಬೆಳ್ಳಿ ದರದಲ್ಲಿ ಭಾರೀ ಏರಿಕೆ: ಬೆಂಗಳೂರಿನಲ್ಲಿ ಇಂದಿನ ಬೆಲೆ ಹೇಗಿದೆ…..
ಈ ವರ್ಷ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಮಳೆ ಕೊರತೆಯಾಗಿದೆ. ಕೃಷಿಯನ್ನೇ ಅವಲಂಬಿಸಿರುವ ರೈತರು ಕಂಗೆಟ್ಟಿದ್ದಾರೆ. ಬರಗಾಲಕ್ಕೆ ಬೇಸೆತ್ತ ರೈತರು ಮಳೆಯಿಲ್ಲದೆ ಬೆಳೆ ನಾಶಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ತನ್ನ ಮಳೆಗಾಗಿ ಹಳ್ಳಿಗಳಲ್ಲಿ ವಿಭಿನ್ನ ರೀತಿ ಆಚರಣೆ ಮಾಡಿದ್ದಾರೆ.
ಯಶಸ್ಸಿನ ಕಥೆ: ವಿದೇಶದಲ್ಲಿ ಉತ್ತಮ ಉದ್ಯೋಗ ತೊರೆದು..ಬಾಳೆ ಕೃಷಿಯೊಂದಿಗೆ ರೂ. 100 ಕೋಟಿ ಗಳಿಸಿದ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 1 =
Remember me
