|ಚೇತನ್ ನಾಡಿಗೇರ್ಬೆಂಗಳೂರು
‘ನಿನ್ನ ಜೀವನದಲ್ಲಾಗಿರುವ ತಪು್ಪಗಳನ್ನು ಸರಿಪಡಿಸಿ ಕೊಳ್ಳೋಕೆ ಎರಡನೇ ಅವಕಾಶ ಕೊಡ್ತೀನಿ, ತಗೋ …’
ಅರ್ಜುನ್ ಮತ್ತು ಅನು ಬಾಲ್ಯ ಸ್ನೇಹಿತರು. ಅದೊಂದು ದಿನ ಮದುವೆಯಾಗೋಣ ಎಂದು ಅನು ಹೇಳುತ್ತಾಳೆ. ಅರ್ಜುನ್ ಸಹ ಒಪು್ಪತ್ತಾನೆ. ಇಬ್ಬರೂ ಬಹಳ ಬೇಗ ಮದುವೆಯಾಗುತ್ತಾರೆ. ಸ್ನೇಹಿತೆಯನ್ನು ಹೆಂಡತಿಯನ್ನಾಗಿ ಸ್ವೀಕರಿಸಲು ಅರ್ಜುನ್​ಗೆ ಸಾಧ್ಯವಾಗುವುದಿಲ್ಲ. ಇಷ್ಟವಿಲ್ಲದ ಜೀವನವನ್ನು ಬದುಕುವುದಕ್ಕೆ ಆಗುವುದಿಲ್ಲ. ಹಾಗಂತ ಹಳೆಯ ಸ್ನೇಹವೂ ಮುಂದುವರೆಯುವುದಿಲ್ಲ. ಕ್ರಮೇಣ ಅವರಿಬ್ಬರ ನಡುವೆ ವೈಮನಸ್ಸುಂಟಾಗಿ ದೂರಾಗುತ್ತಾರೆ. ಇಂಥ ಸಂದರ್ಭದಲ್ಲೇ ದೇವರು ಅವನ ಜೀವನದಲ್ಲಿ ಎಂಟ್ರಿ ಕೊಡುವುದು. ತಪು್ಪಗಳನ್ನು ಸರಿಪಡಿಸಿಕೊಳ್ಳುವುದಕ್ಕೆ ಎರಡನೆಯ ಅವಕಾಶ ಕೊಡುವುದು. ಆ ಎರಡನೆಯ ಅವಕಾಶವನ್ನು ಪಡೆಯುವ ಅವನು ತನ್ನ ಜೀವನವನ್ನು ಸರಿಪಡಿಸಿಕೊಳ್ಳುತ್ತಾನಾ? ಮಾಡಿದ ತಪು್ಪಗಳನ್ನು ತಿದ್ದಿಕೊಳ್ಳುತ್ತಾನಾ? ಅಥವಾ ಅದನ್ನೇ ಮುಂದುವರಿಸುತ್ತಾನಾ?
ಇದು ‘ಲಕ್ಕಿ ಮ್ಯಾನ್’ ಚಿತ್ರದ ಕಥೆ. ಇದು ಸ್ನೇಹದ ಕಥೆಯೋ, ಪ್ರೇಮದ ಕಥೆಯೋ, ದಾಂಪತ್ಯದ ಕಥೆಯೋ ಹೇಳುವುದು ಕಷ್ಟ. ಆದರೆ, ಇವೆಲ್ಲವೂ ಇರುವ ಒಂದು ಅಪರೂಪದ ಕಥೆ ಎಂಬುದಂತೂ ನಿಜ. ಇಲ್ಲಿ ನೋವಿದೆ, ನಲಿವಿದೆ, ಖುಷಿ ಇದೆ, ದುಃಖವಿದೆ. ಆದರೆ, ಯಾವುದೂ ಅತಿರೇಕವಿಲ್ಲ. ಎಲ್ಲವೂ ಎಷ್ಟು ಬೇಕೋ ಅಷ್ಟು ಮಾತ್ರ ಇದೆ ಎನ್ನುವುದು ವಿಶೇಷ. ಎಲ್ಲಕ್ಕಿಂತ ಹೆಚ್ಚಾಗಿ ಇದು ಸಾಮಾನ್ಯ ಮನುಷ್ಯರ ಕಥೆ. ಇಲ್ಲಿ ನಾಯಕ ಸೂಪರ್ ಹೀರೋ ಅಲ್ಲ. ಅವನೂ ತಪು್ಪ ಮಾಡುತ್ತಾನೆ. ಅದಕ್ಕಾಗಿ ಪರಿತಪಿಸುತ್ತಾನೆ. ಅದನ್ನು ತಿದ್ದುಕೊಳ್ಳುವುದಕ್ಕೆ ಪ್ರಯತ್ನಿಸುತ್ತಾನೆ. ಅವನಷ್ಟೇ ಅಲ್ಲ, ಎಲ್ಲ ಪಾತ್ರಗಳೂ ಅಷ್ಟೇ. ಇಲ್ಲಿ ಯಾರೂ ಒಳ್ಳೆಯವರಲ್ಲ, ಯಾರೂ ಕೆಟ್ಟವರಲ್ಲ. ಮೊದಲು ನೆಗೆಟಿವ್ ತರಹ ಕಂಡರೂ, ಇನ್ನೊಂದು ರೀತಿಯಲ್ಲಿ ನೋಡಿದಾಗ ಪಾಸಿಟಿವ್ ಆಗಿರುತ್ತದೆ.
ಆ ನಿಟ್ಟಿನಲ್ಲಿ ಇದೊಂದು ಫೀಲ್ ಗುಡ್ ಸಿನಿಮಾ ಎನ್ನಬಹುದು ಮತ್ತು ಚಿತ್ರಕ್ಕೆ ಕಥೆ (ಇದು ತಮಿಳಿನ ‘ಓ ಮೈ ಕಡವುಳೆ’ ರೀಮೇಕ್) ಬರೆದ ಅಶ್ವತ್ಥ್ ಮಾರಿಮುತ್ತು ಅವರ ಬೆನ್ನು ತಟ್ಟಬಹುದು. ಇದೊಂದು ಪಕ್ಕಾ ರೊಮ್ಯಾಂಟಿಕ್ ಕಾಮಿಡಿ ಚಿತ್ರ. ಮೊದಲಾರ್ಧ ತಮಾಷೆ ಮತ್ತು ಲವಲವಿಕೆಯಿಂದ ಕೂಡಿದ್ದು, ಹೋಗುವುದೇ ಗೊತ್ತಾಗುವುದಿಲ್ಲ. ದ್ವಿತೀಯಾರ್ಧ ಬಹಳ ನಿಧಾನಗತಿಯಲ್ಲಿ ಸಾಗುತ್ತದೆ. ಈ ಭಾಗವನ್ನು ಇನ್ನೊಂದಿಷ್ಟು ಚುರುಕುಗೊಳಿಸಿದ್ದರೆ ಚಿತ್ರ ಇನ್ನಷ್ಟು ಚುರುಕಾಗಿರುತ್ತಿತ್ತೋ ಏನೋ? ಇಲ್ಲಿ ಯಾವುದು ಭ್ರಮೆ, ಯಾವುದು ವಾಸ್ತವ, ಯಾವುದು ಕಲ್ಪನೆ ಎಂದು ತರ್ಕ ಮಾಡುವುದಕ್ಕೆ ಸಾಧ್ಯವಿಲ್ಲ. ಮಾಡಿದರೆ ಸ್ಪಷ್ಟತೆಯೂ ಸಿಗುವುದಿಲ್ಲ. ಎಲ್ಲವನ್ನೂ ಬೆರೆಸಿ ಚಿತ್ರಕಥೆ ಮಾಡಲಾಗಿದೆ. ಅದು ಪ್ಲಸ್ಸೂ ಹೌದು, ಮೈನಸ್ಸೂ ಹೌದು.
‘ಲಕ್ಕಿ ಮ್ಯಾನ್’ನ ಒಂದು ವಿಶೇಷತೆಯೆಂದರೆ, ಇದುವರೆಗೂ ಯಾವ ಚಿತ್ರದಲ್ಲೂ ನೋಡದ ಕೃಷ್ಣ ಅವರನ್ನು ಈ ಚಿತ್ರದಲ್ಲಿ ನೋಡಬಹುದು. ಪ್ರತಿಯೊಂದು ಭಾವನೆಯನ್ನು ಅವರು ಚೆನ್ನಾಗಿ ಅಭಿವ್ಯಕ್ತಗೊಳಿಸಿದ್ದಾರೆ. ಸಂಗೀತಾ ಶೃಂಗೇರಿ, ರಂಗಾಯಣ ರಘು, ನಾಗಭೂಷಣ್ ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಪುನೀತ್ ಇಲ್ಲಿ ಎರಡು ನಿಮಿಷ ಬಂದು ಹೋಗುತ್ತಾರೆಂದುಕೊಂಡರೆ ಅದು ಸುಳ್ಳು. ಅವರಿಗೆ ದೊಡ್ಡ ಪಾತ್ರವಿದೆ ಮತ್ತು ಅವರ ಪಾತ್ರಕ್ಕೆ ಅವರದ್ದೇ ಧ್ವನಿಯೂ ಇದೆ. ಇರುವಷ್ಟು ಸಮಯ ಖುಷಿಯಿಂದ ನೋಡಿಸಿಕೊಂಡು ಹೋಗುವುದರ ಜತೆಗೆ, ಬಹಳ ಸರಳವಾಗಿ ಜೀವನದ ಪಾಠವನ್ನು ಹೇಳಿಕೊಡುತ್ತಾರೆ ಪುನೀತ್. ಕೊನೆಯ ಒಂದು ಹಾಡಿನಲ್ಲಿ ಪ್ರಭುದೇವ ಬಂದು ಪ್ರೇಕ್ಷಕರನ್ನು ಕುಣಿಸಿ ಹೋಗುತ್ತಾರೆ.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:one × 1 =
Remember me
