ಬೆಂಗಳೂರು:ಡಿ.ದೇವರಾಜ ಅರಸು ಆಡಳಿತದಲ್ಲಿ ಅನೇಕ ಐತಿಹಾಸಿಕ ನಿರ್ಧಾರಗಳಾಗಿವೆ. ಭೂಸುಧಾರಣಾ ಕಾಯ್ದೆಗೆ ತಿದ್ದುಪಡಿಯ ಮೂಲಕ ಗೇಣಿದಾರರಿಗೆ ಹೊಸ ಬದುಕು ಕಟ್ಟಿಕೊಟ್ಟರು ಎಂದು ಮಾಜಿ ಸ್ಪೀಕರ್ ಕಾಗೋಡು ತಿಮ್ಮಪ್ಪ ಮೆಲುಕು ಹಾಕಿದರು.
ವಿಧಾನಸೌಧ ಬ್ಯಾಂಕ್ವೆಟ್ ಹಾಲ್‌ನಲ್ಲಿ ಭಾನುವಾರ ಏರ್ಪಡಿಸಿದ್ದ ಡಿ.ದೇವರಾಜು ಅರಸು 108ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ತಮಗೆ ನೀಡಿದ ರಾಜ್ಯಮಟ್ಟದ ಡಿ.ದೇವರಾಜ ಅರಸು ಪ್ರಶಸ್ತಿಯನ್ನು ಸ್ವೀಕರಿಸಿ ಅವರು ಮಾತನಾಡಿದರು.
ಗೇಣಿದಾರರಿಗೆ ಮಾತ್ರವಲ್ಲ, ಸಾಮಾನ್ಯರ ಬದುಕಿಗೆ ಅರಸು ದಾರಿ ತೋರಿಸಿದರು. ವಂಚಿತರಿಗೆ ಅವಕಾಶ ಕಲ್ಪಿಸಲು ಆದ್ಯತೆ ನೀಡಿದರು. ಗೇಣಿದಾರರಿಗೆ ಜಮೀನಿನ ಹಕ್ಕಿಗಾಗಿ ಆರು ತಿಂಗಳ ಕಾಲ ನಡೆದ ಚಾರಿತ್ರಿಕ ಕಾಗೋಡು ಚಳವಳಿಯಲ್ಲಿ ಸ್ವತಃ ರಾಮಮನೋಹರ್ ಲೋಹಿಯಾ ಪಾಲ್ಗೊಂಡು ಸ್ಫೂರ್ತಿ ತುಂಬಿದರು ಎಂದರು.
ಅರಸು ಸಿಎಂ ಆಗಿದ್ದ ಅವಧಿಯಲ್ಲಿ ಗೇಣಿದಾರರಿಗೆ ಜಮೀನು ಹಕ್ಕುಕೊಡುವ ಸಂಬಂಧ ರಚಿಸಿದ್ದ ಕಾಯ್ದೆ ತಿದ್ದುಪಡಿ ಸಮಿತಿಯಲ್ಲಿ ನಾನೂ ಒಬ್ಬ ಸದಸ್ಯನಾಗಿದ್ದೆ. ನಂತರ ಈ ಸಮಿತಿ ಸಲ್ಲಿಸಿದ ವರದಿ ಪ್ರಕಾರ ಭೂಸುಧಾರಣೆ ಕಾಯ್ದೆಗೆ ತಿದ್ದುಪಡಿ ತಂದರು.
ಜಾತಿ ಲೆಕ್ಕಾಚಾರ ಮಾಡಿದ್ದರೆ ಗೇಣಿದಾರರಿಗೆ ಜಮೀನಿನ ಹಕ್ಕು ಕಷ್ಟಕರವಾಗುತ್ತಿತ್ತು. ಆದರೆ ಅರಸು ಜಾತಿಗಿಂತ ಗೇಣಿದಾರರಿಗೆ ಜಮೀನಿನ ಒಡೆತನ ನೀಡುವುದಕ್ಕೆ ಹೆಚ್ಚಿನ ಆದ್ಯತೆ ನೀಡಿದರು.ಪುಣ್ಯಾತ್ಮ ದೇವರಾಜ ಅರಸು ಹೆಸರಿನಲ್ಲಿ ಸರ್ಕಾರ ಸ್ಥಾಪಿಸಿರುವ ಪ್ರಶಸ್ತಿ ನೀಡಿ, ಗೌರವಿಸಿರುವುದು ಬದುಕಿನ ಅವಿಸ್ಮರಣೀಯ ಹಾಗೂ ಸಾರ್ಥಕ ಕ್ಷಣಗಳು ಎಂದು ಕಾಗೋಡು ತಿಮ್ಮಪ್ಪ ಭಾವುಕರಾಗಿ ನುಡಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − eleven =
Remember me
