ರಾಮನಗರ:ಹಾಸನ ಕ್ಷೇತ್ರ ಹೊರತುಪಡಿಸಿ ಉಳಿದ ಕ್ಷೇತ್ರಗಳ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಇಂದು ಸಂಜೆ ಬಿಡುಗಡೆ ಮಾಡಲಾಗುವುದು ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಈ ಮೂಲಕ ಹಾಸನ ವಿಧಾಸಭಾ ಕ್ಷೇತ್ರಕ್ಕೆ ಜೆಡಿಎಸ್ ಅಭ್ಯರ್ಥಿ ಯಾರೆಂಬುದರ ಬಗ್ಗೆ ರಹಸ್ಯ ಕಾಪಾಡಿಕೊಂಡಿದ್ದಾರೆ.
ಜೆಡಿಎಸ್ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ವಿಚಾರವಾಗಿ ಎಚ್.ಡಿ,ಕುಮಾರಸ್ವಾಮಿ ಮಾತನಾಡುತ್ತಾ, ದೇವೆಗೌಡರು ದೆಹಲಿಗೆ ಹೋಗಿದ್ದಾರೆ. ಹಾಸನ ಕ್ಷೇತ್ರದ ಟಿಕೆಟ್​ನ್ನು ದೇವೆಗೌಡರವರು ಫೈನಲ್ ಮಾಡುತ್ತಾರೆ. ಹಾಸನ ಟಿಕೆಟ್ ವಿಚಾರದಲ್ಲಿ ನನ್ನ ನಿಲುವು ಬದಲಾವಣೆ ಆಗುವುದಿಲ್ಲ. ಹಾಸನದಲ್ಲಿ ಜನಾಭಿಪ್ರಾಯ ಹಾಗೂ ಕಾರ್ಯಕರ್ತರ ಅಭಿಪ್ರಾಯ ತೆಗೆದುಕೊಳ್ಳಲಾಗುತ್ತದೆ. ಎರಡನೇ ಪಟ್ಟಿಯಲ್ಲಿ ಕೆಲವರ ಹೆಸರುಗಳನ್ನು ಅಂತಿಮ ಮಾಡಲಾಗುತ್ತದೆ. ಮೂರನೇ ಪಟ್ಟಿ ಕೂಡ ಬಿಡುಗಡೆ ಮಾಡಲಾಗುತ್ತದೆ‌ ಎಂದರು.
ಇದನ್ನೂ ಓದಿ:ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆ ಏರಿಕೆ; ಗ್ರಾಹಕರಿಗೆ ತಟ್ಟಿದ ಹೋಟೆಲ್ ಊಟ ತಿಂಡಿಗಳ ದರ ಹೆಚ್ಚಳ ಬಿಸಿ
ಇದೇ ವೇಳೆ ಭವಾನಿ ರೇವಣ್ಣ ಟಿಕೆಟ್ ಸಿಗದೇ ಇದ್ದಲ್ಲಿ‌ ಪಕ್ಷೇತರವಾಗಿ ಚುನಾವಣೆಗೆ ನಿಲ್ಲುತ್ತಾರೆ ಎಂಬ ಪ್ರಶ್ನೆ ಎದುರಾಗುತ್ತಿದ್ದಂತೆ ಇದೆಲ್ಲಾ ನನಗೆ ಗೊತ್ತಿಲ್ಲ. ಅದೆಲ್ಲಾ ಉಹಾಪೋಹ ಎಂದು ಹೇಳಿದರು.
ಕನಕಪುರ ತಾಲ್ಲೂಕಿನ ಸಾತನೂರಿನಲ್ಲಿ ಕಸಾಯಿಖಾನೆಗೆ ಹಸು ಸಾಗಾಣಿಕೆ ವೇಳೆ ವ್ಯಕ್ತಿ ಸಾವು ವಿಚಾರವಾಗಿ ಪ್ರತಿಕ್ರಿಯಿಸಿ, ಎತ್ತುಗಳನ್ನು, ಹೋರಿಗಳನ್ನು ತೆಗೆದುಕೊಂಡು ಹೋದರು ಎಂದು ಕೊಲೆ ಮಾಡಲು ಹೋಗುತ್ತಾರೆ. ಪುನೀತ್ ಕೆರೆಹಳ್ಳಿ ನೈತಿಕ ಪೋಲಿಸ್ ಗಿರಿ ಪ್ರದರ್ಶನ ಮಾಡಿದ್ದಾನೆ. ಸರ್ಕಾರಕ್ಕೆ ಏನಾದರೂ ಮಾನ ಮರ್ಯಾದೆ ಇದ್ದರೆ ಅವನನ್ನು ಮೊದಲು ಒದ್ದು ಒಳಗೆ ಹಾಕಬೇಕು ಎಂದರು.ಇದನ್ನೂ ಓದಿ:VIDEO | ಪಿಸ್ತೂಲ್ ಬಳಸಿ ಕೇಕ್ ಕಟ್ ಮಾಡಿದ ಯುವಕ ಪೊಲೀಸರಿಂದ ಬಂಧನದ ಗಿಫ್ಟ್!
ಅವನಿಗೆ ಚಿತ್ರ ಹಿಂಸೆ ಕೊಟ್ಟು ಕೊಲೆ ಮಾಡಿದ್ದಾನೆ. ಈ ಕೆಲಸವನ್ನು ಮುಸ್ಲೀಂ ಸಮುದಾಯದವರು ಮಾಡಿದ್ದರೆ, ಬಿಜೆಪಿಯ ಮಹಾನಾಯಕರು ದೇಶ ಬೆಂಕಿ ಹಚ್ಚಿಕೊಂಡಿದೆ ಎಂದು ಕುಣಿಯುತ್ತಿದ್ದರು. ಇವಾಗ ಎಲ್ಲಿ ಹೋಗಿದ್ದಾರೆ ಇವರೆಲ್ಲಾ? ಹಿಂದೂ ಧರ್ಮ ಕೊಲೆ ಮಾಡಿ ಎಂದು ಹೇಳುತ್ತದೆಯಾ? ಸರ್ಕಾರದವರು ಒಬ್ಬರೂ ಕೂಡ ಈ ಬಗ್ಗೆ ತುಟಿ ಬಿಚ್ಚುವುದಿಲ್ಲ. ಮೊದಲು ಅವನನ್ನು ಶೀಘ್ರವೇ ಬಂಧಿಸಬೇಕು ‘ಎಂದು ಎಚ್.ಡಿ,ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
ಇದನ್ನೂ ಓದಿ:ಹುಬ್ಬಳ್ಳಿ | 5 ರೂ. ಕೇಳಿದ್ದೇ ತಪ್ಪಾಯ್ತು; ಸಿಟ್ಟಿನಲ್ಲಿ ಬಾಲಕನ ಜೀವ ತೆಗೆದ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three − two =
Remember me
