ಹೊಸಕೋಟೆ :ಹೈಕಮಾಂಡ್ ಹೇಳಿದ್ರೆ ರಾಜೀನಾಮೆ ನೀಡುತ್ತೇನೆ ಎಂದು ಸಿಎಂ ಬಿಎಸ್​​ವೈ ಹೇಳಿರುವ ಬಗ್ಗೆ ಪ್ರತಿಕ್ರಿಯಿಸಿರುವ ಅಬಕಾರಿ ಸಚಿವ ಎಂ.ಟಿ.ಬಿ.ನಾಗರಾಜ್, ದೆಹಲಿಯಲ್ಲಿ ಏನೋ ಒಂದು ರೀತಿ ಬೆಳವಣಿಗೆಗಳು ಆಗ್ತಿವೆ, ಏನು ಬೆಳವಣಿಗೆ ಆಗ್ತಿದೆ ಅನ್ನೋದು ಎರಡು ಮೂರು ದಿನಗಳಲ್ಲಿ ಗೊತ್ತಾಗಲಿದೆ ಎಂದು ಹೇಳಿ ಕುತೂಹಲ ಮೂಡಿಸಿದ್ದಾರೆ.
ಹೊಸಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ನಾಗರಾಜ್​, “ನಾನು ಹತ್ತಾರು ಬಾರಿ ಹೇಳಿದ್ದೇನೆ – ಹೈಕಮಾಂಡ್ ಯಾವುದೇ ತಿರ್ಮಾನ ತೆಗೆದುಕೊಂಡರೂ ಯಡಿಯೂರಪ್ಪ ಒಪ್ಪಿಕೊಳ್ತಾರೆ. ಪಕ್ಷಕ್ಕಿಂತ ವ್ಯಕ್ತಿ ದೊಡ್ಡವರಲ್ಲ, ಪಕ್ಷ ದೊಡ್ಡದು” ಎಂದರು. ಬಿಎಸ್​​ವೈ ಪಕ್ಷವನ್ನ ಕಟ್ಟಿ‌ಬೆಳೆಸಿದ್ದಾರೆ, ಆದರೆ ಅವರಿಗೆ ಸ್ವಲ್ಪ ಸಮಸ್ಯೆಯಿದೆ. ವಯಸ್ಸಾಗಿದೆ, ಆರೋಗ್ಯ ಸಮಸ್ಯೆಯಿದೆ, ಆದರೂ ದಿನಕ್ಕೆ 12 ಗಂಟೆ ಕೆಲಸ ಮಾಡ್ತಿದ್ದಾರೆ. ಇವತ್ತು ಅವರಾಗಿಯೇ ಹೇಳಿದ್ದಾರೆ, ಹೈಕಮಾಂಡ್ ಹೇಳಿದ್ರೆ ಅವರು ಬದ್ದವಾಗಿಯೇ ಇದ್ದಾರೆ ಎಂದಿದ್ದಾರೆ.
ಇದನ್ನೂ ಓದಿ:‘ಯಡಿಯೂರಪ್ಪ ಅವರೇ ನಮ್ಮ ನಾಯಕರು’ ಎಂದ ಸಿ.ಪಿ.ಯೋಗೇಶ್ವರ್… ರಾಜೀನಾಮೆಗೂ ಸಿದ್ಧವಂತೆ!
ಜೊತೆಗೆ, ದೆಹಲಿಯಲ್ಲಿ ಏನೋ ಬೆಳವಣಿಗೆಗಳು ನಡೀತಾ ಇವೆ ಎಂದಿರುವ ನಾಗರಾಜ್​, “ಬಿಜೆಪಿಯಲ್ಲಿ ಪರ್ಯಾಯ ನಾಯಕರು ಬೇಕಾದಷ್ಟು ಜನ ಇದ್ದಾರೆ, ಎರಡು ಮೂರು ಬಾರಿ ಮಂತ್ರಿಗಳಾಗಿದ್ದು, ಸಿಎಂ ಸ್ಥಾನ ನಿಭಾಯಿಸಬಲ್ಲ‌ ನಾಯಕರಿದ್ದಾರೆ, ನಾಯಕತ್ವ ಬದಲಾವಣೆಗೆ ಹೈಕಮಾಂಡ್ ಏನೇ‌ ನಿರ್ಧಾರ ತೆಗೆದುಕೊಂಡರೂ ನಾವು ‌ಬದ್ಧರಾಗಿರುತ್ತೇವೆ ಎಂದಿದ್ದಾರೆ.
ಸಿಎಂ ಬದಲಾವಣೆ ಪ್ರಶ್ನೆಯೇ ಇಲ್ಲ : ಕೇಂದ್ರ ಸಚಿವ ಪ್ರಹ್ಲಾದ ಜೋಶಿ

ಅಧಿಕಾರಿ ಸೋದರರ ಮೇಲೆ ಪರಿಹಾರ ಸಾಮಗ್ರಿ ಕಳವು ಆರೋಪ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 4 =
Remember me
