ಬೆಂಗಳೂರು:ಕರೊನಾ ಆರ್ಭಟ ತೀವ್ರಗೊಳ್ಳುತ್ತಿರುವ ಸಂದರ್ಭದಲ್ಲೂ ಆರೋಗ್ಯ ಇಲಾಖೆ ಅಧೀನದ ಕರ್ನಾಟಕ ಸ್ಟೇಟ್ ಡ್ರಗ್ಸ್ ಲಾಜಿಸ್ಟಿಕ್ ಆಂಡ್ ವೇರ್​ಹೌಸಿಂಗ್ ಸೊಸೈಟಿ (ಕೆಡಿಎಲ್​ಡಬ್ಲು್ಯಎಸ್)ಯಲ್ಲಿ ಮತ್ತೊಂದು ಕಮಿಷನ್ ದಂಧೆ ಆರೋಪ ಕೇಳಿಬಂದಿದೆ. ಪಿಪಿಇ ಕಿಟ್ ಹಾಗೂ ಸ್ಯಾನಿಟೈಸರ್ ಖರೀದಿಯಲ್ಲಿ ಅಕ್ರಮ ನಡೆದಿರುವ ಆರೋಪ ಚರ್ಚೆಯಲ್ಲಿರುವಾಗಲೇ ‘ನಾಸಲ್ ಕ್ಯಾನ್ಯುಲ್ ಥೆರಪಿ ಡಿವೈಸ್’ ಖರೀದಿಯಲ್ಲೂ ಅವ್ಯವಹಾರದ ಕಮಟು ಬಡಿದಿದೆ.
ನಾಸಲ್ ಕ್ಯಾನ್ಯುಲ್ ಥೆರಪಿ ಡಿವೈಸ್ ಖರೀದಿಸಿ ಸರಬರಾಜು ಮಾಡುವುದಕ್ಕಾಗಿ ಕೆಡಿಎಲ್​ಡಬ್ಲು್ಯಎಸ್ ಮೇ 22ರಂದು ಟೆಂಡರ್ ಕರೆದಿತ್ತು. ಮೇ 29ರಂದು ಬಿಡ್​ದಾರರು ದಾಖಲೆ ಸಲ್ಲಿಸಿದ್ದರು. ಬಳಿಕ ಮೇ 30ರಂದು ಟೆಂಡರ್ ದಾಖಲೆ ಸಲ್ಲಿಸುವ ಸಮಯವನ್ನು ವಿಸ್ತರಿಸಲಾಯಿತು. ಆದರೆ, ಪಾರದರ್ಶಕವಾಗಿ ನಡೆಯಬೇಕಿರುವ ಈ ಟೆಂಡರನ್ನು, ಕಮಿಷನ್ ಆಸೆಗಾಗಿ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿನ ಪಾರದರ್ಶಕ ಕಾಯ್ದೆ (ಕೆಟಿಪಿಪಿ) 4(ಎ) ದುರ್ಬಳಕೆ ಮಾಡಿಕೊಂಡು ಏಕಾಏಕಿ ಷರತ್ತುಗಳನ್ನೇ ಬದಲಾಯಿಸಿ ಹೆಚ್ಚಿನ ಮೊತ್ತಕ್ಕೆ ಖರೀದಿಸಿದ ಆರೋಪ ಕೇಳಿಬಂದಿದೆ.
ಬೊಕ್ಕಸಕ್ಕೆ 4.5 ಕೋಟಿ ರೂ.ನಷ್ಟ
ಕೇರಳದಲ್ಲಿ ಇದೇ ಮಾದರಿಯ ಸಾಮಗ್ರಿಗೆ ಅಮೆರಿಕ ಮೂಲದ ಕಂಪನಿಯೊಂದು ಪ್ರತಿ ಯೂನಿಟ್​ಗೆ 2,86,961 ರೂ.ನಂತೆ 3 ವರ್ಷದ ಖಾತ್ರಿ ನೀಡಿ ಪೂರೈಸಲು ಗುತ್ತಿಗೆ ಪಡೆದಿದೆ. ಆದರೆ, ಅದೇ ಮಾದರಿ ಸಾಮಗ್ರಿಯನ್ನು ಕೆಡಿಎಲ್​ಡಬ್ಲ್ಯುಎಸ್ ಎರಡು ಪಟ್ಟು ಹೆಚ್ಚು ಅಂದರೆ ಪ್ರತಿ ಯೂನಿಟ್​ಗೆ 4,36,000 ರೂ.ನಂತೆ 13 ಕೋಟಿ ರೂ. ವೆಚ್ಚದಲ್ಲಿ 300 ಯೂನಿಟ್ ಖರೀದಿಸಲು ಮುಂದಾಗಿದೆ. ಕೇರಳದಂತೆ ಖರೀದಿಸಿದ್ದಲ್ಲಿ 8.5 ಕೋಟಿ ರೂ.ವೆಚ್ಚದಲ್ಲಿ 300 ಯೂನಿಟ್ ಖರೀದಿಸಬಹುದಿತ್ತು. ಆದರೆ, ಕಮಿಷನ್ ಆಸೆಗಾಗಿ ಪ್ರತಿ ಯೂನಿಟ್​ಗೆ 4,36,000 ರೂ.ನಂತೆ ಖರೀದಿಸಲು ಹೊರಟಿದ್ದಾರೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಹೆಚ್ಚುವರಿಯಾಗಿ 4.5 ಕೋಟಿ ರೂ. ನಷ್ಟ ಉಂಟಾಗಲಿದೆ.
ಆರೋಗ್ಯಕರ ಸ್ಪರ್ಧೆ ಇಲ್ಲ
ಟೆಂಡರ್​ನಲ್ಲಿ ಮೊದಲಿಗೆ ಸಂಸ್ಥೆಯ ವಾರ್ಷಿಕ ವಹಿವಾಟು 20 ಕೋಟಿ ರೂ. ನಿಗದಿಯಾಗಿತ್ತು. ಈ ಸಂಬಂಧ ಬಿಡ್​ದಾರರಿಂದ ಆಕ್ಷೇಪಣೆ ಕೇಳಿಬಂದ ಹಿನ್ನೆಲೆಯಲ್ಲಿ ಮೇ 28 ರಂದು ನಡೆದ ಗವರ್ನರ್ ಕೌನ್ಸಿಲ್ ಸಭೆಯಲ್ಲಿ ವಾರ್ಷಿಕ ವಹಿವಾಟು ಮೊತ್ತವನ್ನು 5 ಕೋಟಿ ರೂ.ಗೆ ಇಳಿಸಲಾಯಿತು. ಅಲ್ಲದೆ, ಮೇ 29ರಂದು ನಡೆದ ಕಾರ್ಯಕಾರಿಣಿ ಸಮಿತಿ ಸಭೆಯಲ್ಲಿ ಎಂಎಇಎಸ್​ಇ ಸಂಸ್ಥೆಗೆ 5 ಕೋಟಿ ರೂ ಹಾಗೂ ಇತರ ಸಂಸ್ಥೆಗಳಿಗೆ 10 ಕೋಟಿ ರೂ.ನಿಗದಿ ಮಾಡಲಾಯಿತು. ವಾರ್ಷಿಕ ವಹಿವಾಟಿನ ಮೊತ್ತ ಇಳಿಸಿದ ಮೇಲೆ 10 ಕೋಟಿ ರೂ. ವಾರ್ಷಿಕ ವಹಿವಾಟು ನಡೆಸಿರುವ ಸಂಸ್ಥೆಗಳಿಗೆ ಟೆಂಡರ್​ನಲ್ಲಿ ಭಾಗವಹಿಸಲು ಕಾಲಾವಕಾಶ ನೀಡಬೇಕಿತ್ತು. ಆದರೆ, ಕೇವಲ 2 ಸಂಸ್ಥೆಗಳು ಟೆಂಡರ್​ನಲ್ಲಿ ಭಾಗವಹಿಸುವಂತೆ ನೋಡಿಕೊಳ್ಳಲಾಗಿದೆ.
ಏನಿದು ನಾಸಲ್ ಕ್ಯಾನ್ಯುಲ್?
ಶ್ವಾಸಕೋಶ ಸಮಸ್ಯೆಗಳಿಂದ ಬಳಲುವ ರೋಗಿಗಳಿಗೆ ಅಥವಾ ಸ್ವಯಂ ಉಸಿರಾಟದ ಶಕ್ತಿ ಕಳೆದುಕೊಂಡವರಿಗಾಗಿ ಹೆಚ್ಚುವರಿ ಅಮ್ಲಜನಕ ಪೂರೈಸಲು ಇದನ್ನು ಬಳಸಲಾಗುತ್ತದೆ. ಜತೆಗೆ, ರೋಗಿಯ ಮೂಗಿನ ಮೂಲಕ ಗಂಟಲಿನಿಂದ ಶ್ವಾಸಕೋಶದ ಕಡೆಗೆ ಸಾಗುವ ವಾಯುನಾಳದವರೆಗೆ ಪೈಪ್ ತೂರಿಸಿ ಹೆಚ್ಚುವರಿ ಅಮ್ಲಜನಕ ಪೂರೈಸಲಾಗುತ್ತದೆ. ಇದರಿಂದ ರೋಗಿಯ ರಕ್ತದಲ್ಲಿ ಆಮ್ಲಜನಕ ನಿಗದಿತ ಮಟ್ಟದಲ್ಲಿ ಇರುವಂತೆ ಕಾಯ್ದುಕೊಳ್ಳಲು ಸಹಾಯವಾಗಲಿದೆ.
30 ದಿನಗಳ ಕಾಲಾವಕಾಶ
ಕೆಟಿಪಿಪಿ ನಿಯಾಮಾನುಸಾರ ಟೆಂಡರ್ ಮೊತ್ತ 2 ಕೋಟಿ ರೂ.ಗಿಂತ ಅಧಿಕವಿದ್ದರೆ ಬಿಡ್ ಸಲ್ಲಿಸಲು ಒಂದು ತಿಂಗಳು ಕಾಲಾವಕಾಶ ಕೊಡಬೇಕು. ವಿಶೇಷ ಸಂದರ್ಭದಲ್ಲಿ ಸರ್ಕಾರದಿಂದ ಅನುಮತಿ ಪಡೆದು ಟೆಂಡರ್ ನಡೆಸಬೇಕು. ಅಲ್ಲದೆ, ಇಲಾಖೆಯಿಂದ ಅನುಮತಿ ಪಡೆದು ಬಿಡ್​ದಾರರಿಗೆ ಟೆಂಡರ್​ನಲ್ಲಿ ಕೋರಿರುವ ದಾಖಲೆಗಳನ್ನು ಸಲ್ಲಿಸಲು ಕನಿಷ್ಠ 15 ದಿನಗಳ ಕಾಲಾವಕಾಶ ನೀಡಬೇಕು. ಆದರೆ, ಈ ಟೆಂಡರ್​ನಲ್ಲಿ ಕೇವಲ 7 ದಿನ ಅವಕಾಶ ನೀಡಲಾಗಿದೆ.
| ಬೇಲೂರು ಹರೀಶ
ಸಿದ್ದು, ಖರ್ಗೆ, ಡಿಕೆಶಿ.. ಕಾಂಗ್ರೆಸ್​ನಲ್ಲಿ ಯಾರ ಕೈ ಮೇಲು?

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:17 − 8 =
Remember me
