|ಬಾಬುರಾವ ಯಡ್ರಾಮಿಕಲಬುರಗಿ
ಪಿಎಸ್​ಐ ನೇಮಕ ಪರೀಕ್ಷೆ ಅಕ್ರಮ ಪ್ರಕರಣದಲ್ಲಿ ಡೀಲ್ ಗಿರಾಕಿಗಳಿಗೆ ಡಿವೈಸ್ ಮೂಲಕ ಉತ್ತರ ಹೇಳಿದ ಪರಿಣತರಿಗೆ ಗಾಳ ಹಾಕಲು ಸಿಐಡಿ ಮುಂದಾಗಿದ್ದು, ಉತ್ತರ ಹೇಳಿದ ಜಾಣರ ಹೃದಯಬಡಿತ ಹೆಚ್ಚಿಸಿದೆ.
ಪರೀಕ್ಷೆಯಲ್ಲಿ ಅಕ್ರಮ ನಡೆಸಲು ಪ್ಲ್ಯಾನ್ ಮಾಡಿದ ಕಿಂಗ್​ಪಿನ್ ರುದ್ರಗೌಡ (ಆರ್​ಡಿ) ಪಾಟೀಲ್ ಇತರರು ವಿಜಯಪುರ, ಸಿಂದಗಿ, ಧಾರವಾಡ, ಬೆಂಗಳೂರು ಮೊದಲಾದ ಕಡೆಯ ಕೋಚಿಂಗ್ ಸೆಂಟರ್​ಗಳಲ್ಲಿ ಕೆಲಸ ಮಾಡುತ್ತಿರುವ ಪರಿಣತ ಶಿಕ್ಷಕರ ಜತೆಗೂ ಡೀಲ್ ಕುದುರಿಸಿಕೊಂಡಂತಿದೆ. ಅಂತಲೇ ಕಠಿಣ ಪ್ರಶ್ನೆಗಳಿಗೂ ಸಲೀಸಾಗಿ ಉತ್ತರ ಲಭ್ಯವಾಗಿದೆ.
ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳು ಆರ್.ಡಿ. ಪಾಟೀಲ್​ನನ್ನು ವಿಚಾರಣೆಗೆ ಒಳಪಡಿಸಿದಾಗ ಹಲವು ಮಾಹಿತಿ ಕಕ್ಕಿದ್ದಾನೆ. ಇದನ್ನು ಗಮನಿಸಿದರೆ ಕಿಂಗ್​ಪಿನ್​ಗಳ ಜತೆಗೆ ಪೊಲೀಸ್ ಅಧಿಕಾರಿಗಳು ಇತರರೊಂದಿಗೆ ಜಾಣರೂ ಕೈಜೋಡಿಸಿರುವಂತಿದೆ. ಈಗ ಅಂತಹ ಜಾಣರಿಗೆ ಸಂಕಷ್ಟ ಶುರುವಾಲಿದೆ ಎಂದು ಸಿಐಡಿ ಮೂಲಗಳು ವಿಜಯವಾಣಿಗೆ ತಿಳಿಸಿವೆ.
ಕಲಬುರಗಿ, ಬೆಂಗಳೂರು ಇತರ ಕಡೆ ಕೇಂದ್ರಗಳಲ್ಲಿ ಯಾರ್ಯಾರು ಉತ್ತರಗಳನ್ನು ಬ್ಲೂಟೂತ್ ಡಿವೈಸ್ ಮೂಲಕ ಪರೀಕ್ಷೆ ಬರೆಯುವಂತೆ ಡೀಲ್ ಕುದುರಿಸಿಕೊಂಡು ಅಭ್ಯರ್ಥಿಗಳಿಗೆ ಹೇಳಿದ್ದಾರೆ ಎಂಬುದರ ಸಮಗ್ರ ವಿವರ ಸಿಐಡಿ ಅಧಿಕಾರಿಗಳು ಕಲೆ ಹಾಕುತ್ತಿದ್ದಾರೆ. ಈಗಾಗಲೆ ಕೆಲವರ ಹೆಸರು ಕಿಂಗ್​ಪಿನ್ ರುದ್ರಗೌಡ ಹೇಳಿದ್ದು, ಅವರೆಲ್ಲ ಮೊಬೈಲ್ ಸ್ವಿಚ್ ಆಫ್ ಮಾಡಿ ಮಹಾರಾಷ್ಟ್ರ ಇತರ ಕಡೆ ಜಂಪ್ ಆಗಿದ್ದರಿಂದ ಸಿಐಡಿಯವರು ವಶಕ್ಕೆ ಪಡೆದು ವಿಚಾರಣೆ ನಡೆಸಲು ಪದೇಪದೆ ನಡೆಸುತ್ತಿರುವ ಪ್ರಯತ್ನಗಳು ಕೈಗೂಡುತ್ತಿಲ್ಲ. ಹೀಗಾಗಿ ಜಾಣರನ್ನು ಹಿಡಿಯಲು ಇನ್ನಷ್ಟು ಜಾಣ ಐಡಿಯಾಗಳನ್ನೇ ಸಿಐಡಿ ಹುಡುಕಾಡುತ್ತಿದೆ.
ಕೇಸ್​ನಲ್ಲಿ ಸಿಲುಕಿಸಲು ಸಂಚು!:ಹಳೆಯ ವೈಷಮ್ಯದ ಹಿನ್ನೆಲೆಯಲ್ಲಿ ಜೇವರ್ಗಿ ತಾಲೂಕಿನ ಮಲ್ಲಾಬಾದ ಮೂಲದ ಸದ್ಯಕ್ಕೆ ಜೇವರ್ಗಿ ರಸ್ತೆಯ ಕೋಟನೂರ ಮಠದ ಹಿಂಭಾಗದಲ್ಲಿ ವಾಸವಾಗಿರುವ ಬಸವರಡ್ಡಿ ಎಂಬುವರನ್ನು ಪಿಎಸ್​ಐ ಅಕ್ರಮ ಕೇಸ್​ನಲ್ಲಿ ಸಿಲುಕಿಸಲು ರುದ್ರಗೌಡ ಪಾಟೀಲ್ ಸಂಚು ರೂಪಿಸುವ ಮೂಲಕ ಸೇಡು ತೀರಿಸಿಕೊಳ್ಳಲು ಪ್ಲ್ಯಾನ್ ಮಾಡಿದ್ದ. ಆದರೆ ಅದು ಠುಸ್ ಆಗಿದೆ. ರುದ್ರಗೌಡ ಮತ್ತು ಬಸವರಡ್ಡಿ ನಡುವೆ ಹಣಕಾಸಿನ ವಿಷಯದಲ್ಲಿ ಜಗಳವಾಗಿತ್ತು. ರುದ್ರಗೌಡ ಆಪ್ತನೊಬ್ಬನ ಮೂಲಕ ಬಸವರಡ್ಡಿ ವಿರುದ್ಧ ವಿಶ್ವವಿದ್ಯಾಲಯ ಠಾಣೆಯಲ್ಲಿ ಜಾತಿನಿಂದನೆ ಮತ್ತು ದೌರ್ಜನ್ಯ ಕೇಸ್ ದಾಖಲಿಸಿದ್ದು, ಪ್ರಕರಣ ತನಿಖೆ ಹಂತದಲ್ಲಿತ್ತು. ತನಿಖೆ ಪೂರ್ಣಗೊಳಿಸಿದ ನಂತರ ಸಬ್ ಅರ್ಬನ್ ಉಪ ವಿಭಾಗದ ಪೊಲೀಸರು ಬಿ ರಿಪೋರ್ಟ್ ಹಾಕಿದ್ದರು. ಇದು ಜೈಲಿನಲ್ಲಿದ್ದ ರುದ್ರಗೌಡನಿಗೆ ತಿಳಿಯಿತು. ಜೈಲಲ್ಲಿದ್ದಾಗಲೇ ಹಲವರ ಮುಂದೆ ರುದ್ರಗೌಡ ಕೂಗಾಡಿದ್ದನಂತೆ. ರಡ್ಡಿ ಕೇಸ್​ನಿಂದ ಪಾರಾಗಿರಬಹುದು. ಆದರೆ ನೋಡಿ, ಅವನನ್ನು ಹೇಗೆ ಮತ್ತೆ ಅರೆಸ್ಟ್ ಮಾಡಿಸುತ್ತೇನೆ ಎಂದು ಹೇಳಿದ್ದನಂತೆ. ಸಿಐಡಿಯವರು ಮರಳಿ ಮೊನ್ನೆ ಆತನನ್ನು ವಶಕ್ಕೆ ಪಡೆದ ಬೆನ್ನಲ್ಲೇ ಬಸವರಡ್ಡಿ ಹೆಸರು ಹೇಳಿ ಈತನೇ ರಾಜಾಪುರದ ಪ್ರಭು ಎಂಬ ಅಭ್ಯರ್ಥಿಗೆ ಡಿವೈಸ್ ಕೊಟ್ಟು ಬಂದಿದ್ದಾನೆ. ಅವನನ್ನು ಬಂಧಿಸಿ ಎಂದು ಹೇಳಿದನಂತೆ. ಇದರಿಂದಾಗಿ ಸಿಐಡಿಯವರು ಯೋಚಿಸಿ ಪ್ರಭು, ಆತನ ತಂದೆ ಹಾಗೂ ಡೀಲ್ ಕುದುರಿಸಿದ್ದ ಚಂದ್ರಕಾಂತ ಕುಲಕರ್ಣಿಗೆ ಬಸವರಡ್ಡಿ ಫೋಟೋ ತೋರಿಸಿ, ಈತನ ಪರಿಚಯವಿದೆಯೇ ಎಂದು ಕೇಳಿದ್ದಾರೆ. ಆಗ ಆತ ಗೊತ್ತಿಲ್ಲ, ಡಿವೈಸ್ ಕೊಟ್ಟಿದ್ದು ಈತನಲ್ಲ ಎಂದು ಹೇಳಿದಾಗ ಸಿಐಡಿಯವರು ಕಕ್ಕಾಬಿಕ್ಕಿಯಾಗಿದ್ದಾರೆ. ತನಿಖಾಧಿಕಾರಿಗಳನ್ನೇ ದಾರಿ ತಪ್ಪಿಸುವ ಕೆಲಸವನ್ನು ಕಿಂಗ್​ಪಿನ್ ಆರ್​ಡಿಪಿ ಮಾಡುತ್ತಿದ್ದಾನೆ.
ಕಲಬುರಗಿ:ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ನಮೂನೆ 156 ದುರ್ಬಳಕೆ ಮಾಡಿ ಕೋಟ್ಯಂತರ ರೂ. ಲಪಟಾಯಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಕಲಿ ದಾಖಲೆ ಸೃಷ್ಟಿಸಿದ ಆರೋಪಿ, ಹೊರಗುತ್ತಿಗೆ ನೌಕರ ಮಹ್ಮದ್ ರಹೀಲ್​ನನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ. ಇಲಾಖೆ ಫಾಮ್ರ್ 156 ಅನ್ನು ಕಲಬುರಗಿ ಕಚೇರಿ ಕೆಲ ಸಿಬ್ಬಂದಿ ಸೇರಿ ದುರ್ಬಳಕೆ ಮಾಡಿಕೊಂಡು ನಕಲಿ ಸಂಸ್ಥೆಗಳನ್ನು ಸ್ಥಾಪಿಸಿ ಟಿಡಿಎಸ್ ಮೂಲಕ ಬರಬೇಕಿದ್ದ ಕೋಟ್ಯಂತರ ರೂ. ಲೂಟಿ ಮಾಡಿದ ಆರೋಪ ಕೇಳಿ ಬಂದಿತ್ತು. ಈ ಸಂಬಂಧ ಎಫ್​ಡಿಎ ಪಂಢರಿನಾಥನನ್ನು ಕಳೆದ ಸೋಮವಾರ ಬಂಧಿಸಲಾಗಿತ್ತು. ಇದೀಗ ಮಹ್ಮದ್ ರಹೀಲ್​ನನ್ನು ಬಂಧಿಸಿದ್ದು, ಮಹ್ಮದ್ ಇರ್ಫಾನ್ ಹಾಗೂ ಜಲಮಂಡಳಿ ಎಇಇ ಕಚೇರಿ ನೌಕರ ಆಸೀಫ್ ತಲೆಮರೆಸಿಕೊಂಡಿದ್ದಾರೆ. ಸ್ಟೇಷನ್ ಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತಲೆಮರೆಸಿಕೊಂಡ ಇಬ್ಬರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ಯಾವ ಹುಡ್ಗಿಯೂ ಮದ್ವೆಗೆ ಒಪ್ಪಲಿಲ್ಲ ಎಂದು ಬೇಸತ್ತ ಯುವಕ ಆತ್ಮಹತ್ಯೆ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten + 12 =
Remember me
