ರಾಮನಗರ:ಶಿವರಾತ್ರಿ ಅಂಗವಾಗಿ ಮಲೆ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ತೆರಳುತ್ತಿದ್ದ ಭಕ್ತರ ಪೈಕಿ ಓರ್ವ ಮಹಿಳೆ ಕಾವೇರಿ ನದಿ ಪಾಲಾಗಿದ್ದು, ಈ ದುರ್ಘಟನೆಯಲ್ಲಿ ಇನ್ನೂ ಹಲವರು ಕೊಚ್ಚಿಹೋಗಿರುವ ಶಂಕೆ ಇದೆ. ಪ್ರತಿವರ್ಷ ಶಿವರಾತ್ರಿ ಸಂದರ್ಭದಲ್ಲಿ ಕನಕಪುರ ತಾಲೂಕಿನ ಏಳಗಳ್ಳಿಯಿಂದ ಸಂಗಮ ಸಮೀಪದ ಬೊಮ್ಮಸಂದ್ರ ಬಳಿ ಕಾವೇರಿ ನದಿ ದಾಟಿಕೊಂಡು ಸಾವಿರಾರು ಮಂದಿ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಕೈಗೊಳ್ಳುತ್ತಾರೆ. ಈ ಬಾರಿಯೂ ಪಾದಯಾತ್ರೆ ಆರಂಭಿಸಿದ ಭಕ್ತರು ಗುರುವಾರ ಸಂಜೆ ನದಿ ದಾಟಲು ಮುಂದಾದಾಗ ಹಲವರು ಕೊಚ್ಚಿ ಹೋಗಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಈ ಪೈಕಿ ಚಾಮರಾಜನಗರ ಜಿಲ್ಲೆ ಹನೂರು ಅರಣ್ಯ ವ್ಯಾಪ್ತಿಯಲ್ಲಿ ಮಹಿಳೆಯೊಬ್ಬರ ಮೃತದೇಹ ಸಿಕ್ಕಿದ್ದು, ಇವರ ಗುರುತು ಪತ್ತೆ ಆಗಿಲ್ಲ.
ಏನಾಯ್ತು?:ಗುರುವಾರ ಏಳಗಳ್ಳಿಯಲ್ಲಿ ಚಾಲನೆಗೊಂಡ ಯಾತ್ರೆಯಲ್ಲಿ ಭಾಗಿಯಾದ ಸಾವಿರಾರು ಮಂದಿ ಪ್ರಸಾದ ಸ್ವೀಕರಿಸಿ ಪ್ರಯಾಣ ಆರಂಭಿಸಿದರು. ಸಂಗಮ ಬಳಿ ಇರುವ ಬೊಮ್ಮಸಂದ್ರದ ಬಳಿ ಸುಮಾರು ಒಂದು ಕಿಮೀನಷ್ಟು ಉದ್ದದ ನದಿ ದಾಟಲು ಮುಂದಾಗಿದ್ದಾರೆ. ಭಕ್ತರು ನದಿ ದಾಟುತ್ತಿದ್ದಾಗ ಸಂಜೆ 6.45ರ ವೇಳೆಗೆ ನೀರಿನ ಹರಿವು ಹೆಚ್ಚಾಗಿ, ನದಿ ದಾಟಲು ಹಾಕಿದ್ದ ಹಗ್ಗ ತುಂಡಾಗಿದೆ. ಇದರಿಂದಾಗಿ ಹಲವು ಯಾತ್ರಿಗಳು ನೀರಿಗೆ ಬಿದ್ದಿದ್ದಾರೆ. ಇವರಲ್ಲಿ ಕೆಲವರು ಈಜಿ ದಡ ಸೇರಿದ್ದರೆ ಈಜು ಬಾರದ ಕೆಲವರನ್ನು ಯುವಕರು ರಕ್ಷಿಸಿದ್ದಾರೆ. ಕೆಲವರ ಬ್ಯಾಗ್​ಗಳು, ಮೊಬೈಲ್​ಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. ಈಜು ಬಾರದ ಕೆಲವರು ಕೊಚ್ಚಿ ಹೋಗಿದ್ದಾರೆ ಎಂದು ಮಾಹಿತಿ ಲಭ್ಯವಾಗಿದ್ದು ಎಷ್ಟು ಭಕ್ತರು ನೀರು ಪಾಲಾಗಿದ್ದಾರೆ ಎನ್ನುವ ಮಾಹಿತಿ ಸಿಕ್ಕಿಲ್ಲ. ಘಟನೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಸಂಸದ ಡಿ.ಕೆ. ಸುರೇಶ್ ಅವರು ತಕ್ಷಣವೇ ತೆಪ್ಪಗಳ ವ್ಯವಸ್ಥೆ ಮಾಡಿದರು.
| ಗಿರೀಶ್ ಪಾದಯಾತ್ರಿ ಹಾರೋಹಳ್ಳಿ,ಪ್ರತ್ಯಕ್ಷದರ್ಶಿ
| ದೇವರಾಜ್ ಆರ್​ಎಫ್​ಒ,ಸಂಗಮ ವನ್ಯಜೀವಿ ವಲಯ
ಮಾಹಿತಿ ನಿರೀಕ್ಷೆಯಲ್ಲಿ:ಹನೂರು ಅರಣ್ಯ ಪ್ರದೇಶಕ್ಕೆ ಸೇರಿದ ಕಾವೇರಿ ದಡದಲ್ಲಿ ಯಾತ್ರೆಯಲ್ಲಿದ್ದ ಮಹಿಳೆ ಯೊಬ್ಬರ ಮೃತದೇಹ ಪತ್ತೆ ಆಗಿದೆ. ಆದರೆ ಗುರುತು ತಿಳಿದಿಲ್ಲ. ವನ್ಯಜೀವಿಧಾಮದಲ್ಲಿ ಮೊಬೈಲ್ ನೆಟ್​ವರ್ಕ್ ಸಮಸ್ಯೆ ಇದ್ದು, ಕುಟುಂಬದವರನ್ನು ಸಂರ್ಪಸಲು ಸಾಧ್ಯ ವಾಗುತ್ತಿಲ್ಲ. ಬಹುತೇಕ ಚಾಮರಾಜ ನಗರ ಜಿಲ್ಲೆಯ ಶಾಗ್ಯ ವ್ಯಾಪ್ತಿಗೆ ತೆರಳಿದ ಮೇಲಷ್ಟೇ ನೆಟ್​ವರ್ಕ್ ದೊರೆಯಲಿದೆ. ಇನ್ನೊಂದು ದಿನದಲ್ಲಿ ಕುಟುಂಬ ಸದಸ್ಯರಿಗೆ ನೆಟ್​ವರ್ಕ್ ದೊರೆಯದಿದ್ದರೆ, ಇಲ್ಲ ಪಾದಯಾತ್ರಿಗಳು ಮನೆಗೆ ತಲುಪದಿದ್ದರೆ ನದಿಯಲ್ಲಿ ಎಷ್ಟು ಮಂದಿ ಕೊಚ್ಚಿ ಹೋಗಿರಬಹುದು ಎನ್ನುವ ಸ್ಪಷ್ಟತೆ ದೊರೆಯಲಿದೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen + eighteen =
Remember me
