ಬೆಂಗಳೂರು: ಎನ್.ಆರ್. ಕಾಲೋನಿಯಲ್ಲಿರುವ ಬಿಎಂಶ್ರೀ ಪ್ರತಿಷ್ಠಾನದ ಆಶ್ರಯದಲ್ಲಿ ಆ.25ಕ್ಕೆ ಭಕ್ತಿಗೀತೆ ಗಾಯನ ಮತ್ತು ಭರತನಾಟ್ಯ ಸ್ಪರ್ಧೆಯನ್ನು ಆಯೋಜಿಸಲಾಗಿದೆ.
ಕೆ.ಮೋಹನ್ ದೇವ್ ಆಳ್ವ ಮತ್ತು ಡಾ. ಎಂ.ಕೆ. ಶೈಲಜಾ ಆಳ್ವ ದಂಪತಿಗಳು ಬಿ.ಎಂ.ಶ್ರೀ ಪ್ರತಿಷ್ಠಾನದಲ್ಲಿ ಸ್ಥಾಪಿಸಿರುವ ರಾಜಾ ಸರ್ ಮುತ್ತಯ್ಯ ಚೆಟ್ಟಿಯಾರ್ ಮತ್ತು ರುಕ್ಕಿಣಿದೇವಿ ಆರುಂಡೇಲ್ ದತ್ತಿ ಅಡಿಯಲ್ಲಿ 13 ರಿಂದ 16ರ ವರ್ಷ ವಯಸ್ಸಿನವರಿಗಾಗಿ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಸ್ಪರ್ಧೆಯಲ್ಲಿ ಗೆದ್ದವರಿಗೆ ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಬಹುಮಾನವಾಗಿ 4 ಸಾವಿರ, 3 ಸಾವಿರ ಮತ್ತು 2 ಸಾವಿರ ಹಾಗೂ ಪ್ರಮಾಣ ಪತ್ರವನ್ನು ಕೊಡಲಾಗುತ್ತದೆ.
ಆಸಕ್ತರು ಬಿ.ಎಂ.ಶ್ರೀ ಪ್ರತಿಷ್ಠಾನದಿಂದ ನಿಗದಿತ ನಮೂನೆ ಪಡೆದು ವಯಸ್ಸಿನ ದೃಢೀಕರಣದೊಂದಿಗೆ ಭಕ್ತಿಗೀತೆ ಗಾಯನ ಮತ್ತು ಭರತನಾಟ್ಯ ಸ್ಪರ್ಧೆಗೆ ಪ್ರತ್ಯೇಕ ಅರ್ಜಿ ಸಲ್ಲಿಸಬೇಕು. ಹೆಸರು ನೊಂದಾಯಿಸಲು ಆ.15 ಕಡೇ ದಿನ. ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ : 9972812127 ಸಂಪರ್ಕಿಸಬಹುದು.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:eight − 3 =
Remember me
