ಬೆಂಗಳೂರು:ರಾಜ್ಯ ಸರ್ಕಾರ ಪೊಲೀಸರ ವೇತನ ಮತ್ತು ಭತ್ಯೆ ಪರಿಷ್ಕರಣೆ ವರದಿಯನ್ನು ಸಮರ್ಪಕವಾಗಿ ಅನುಷ್ಠಾನ ಮಾಡದಿರುವುದಕ್ಕೆ ಬೇಸರವಿದೆ ಎಂದು ನಿರ್ಗಮಿತ ಡಿಜಿಪಿ ರಾಘವೇಂದ್ರ ಔರಾದ್ಕರ್ ಹೇಳಿದರು.
ಶುಕ್ರವಾರ ಕೋರಮಂಗಲದ ಕೆಎಸ್​ಆರ್​ಪಿ ಮೈದಾನದಲ್ಲಿ ಪೊಲೀಸ್ ಇಲಾಖೆ ವತಿಯಿಂದ ನಡೆದ ಬಿಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿ, ಪೊಲೀಸ್ ಇಲಾಖೆಗೆ ಇರುವಷ್ಟು ಕೆಲಸ ಬೇರೆ ಯಾವ ಇಲಾಖೆಗೂ ಇಲ್ಲ. ಹೊರರಾಜ್ಯಗಳಿಗೆ ಹೋಲಿಸಿದರೆ ಇಲ್ಲಿನ ಅಧಿಕಾರಿ ಮತ್ತು ಸಿಬ್ಬಂದಿ ವೇತನ ಕಡಿಮೆ ಇದೆ. ಹಾಗಾಗಿ ರಾಜ್ಯ ಸರ್ಕಾರ ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕಿತ್ತು ಎಂದರು.
ಪೊಲೀಸರ ವೇತನ ಮತ್ತು ಭತ್ಯೆ ಅನುಷ್ಠಾನ ವರದಿ ಸಲ್ಲಿಸಿದ ಬಳಿಕ ಮೂರು ಸರ್ಕಾರಗಳು ಬದಲಾಗಿವೆ. ವರದಿ ಅನುಷ್ಠಾನ ಬಗ್ಗೆ ಮೂರೂ ಸರ್ಕಾರಗಳ ಜತೆ ರ್ಚಚಿಸಿದ್ದೇನೆ. ಪೊಲೀಸರ ಸಮಸ್ಯೆಯನ್ನು ಗಮನಕ್ಕೆ ತಂದಿದ್ದೇನೆ. ಮುಂದಿನ ದಿನಗಳಲ್ಲಿ ವರದಿಯಲ್ಲಿನ ಅಂಶಗಳು ಹಂತ ಹಂತವಾಗಿ ಜಾರಿಯಾಗಲಿದೆ. ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಿರುವುದು ವೃತ್ತಿ ಜೀವನದ ಖುಷಿ ಸಂಗತಿ ಎಂದು ತಿಳಿಸಿದರು.
ಜನರಿಗೆ ಪೊಲೀಸರ ಮೇಲೆ ಅಪಾರವಾದ ನಂಬಿಕೆ ಇದೆ. ಅದನ್ನು ಹುಸಿಗೊಳಿಸುವ ಕೆಲಸ ಆಗಬಾರದು. ಜನರ ನಂಬಿಕೆ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸೇವೆ ಸಲ್ಲಿಸಬೇಕು. ಸಾರ್ವಜನಿಕರ ಆಸ್ತಿ ಮತ್ತು ಪ್ರಾಣ ರಕ್ಷಣೆ ನಮ್ಮ ಕರ್ತವ್ಯ. ವೃತ್ತಿಪರತೆ ಬೆಳೆಸಿಕೊಳ್ಳಲು ಸಿದ್ಧರಿರಬೇಕು. ಕರ್ತವ್ಯದ ಜತೆ ಕುಟುಂಬಕ್ಕೂ ಒತ್ತು ನೀಡಬೇಕು ಎಂದು ಸಲಹೆ ನೀಡಿದರು.
ನಿರ್ಗಮಿತ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ಎನ್.ರಾಜು ಮಾತನಾಡಿ, ರಾಜ್ಯದಲ್ಲಿ ವಿಧಾನಸಭಾ ಮತ್ತು ಲೋಕಸಭಾ ಚುನಾವಣೆಗಳನ್ನು ಶಾಂತಿಯುವಾಗಿ ನಡೆಸಿದ್ದೇವೆ. ರಾಜ್ಯ ಪೊಲೀಸರ ಕಾರ್ಯವೈಖರಿಗೆ ಕೇಂದ್ರ ಚುನಾವಣಾ ಆಯೋಗ ಪ್ರಶಂಸೆ ವ್ಯಕ್ತಪಡಿಸಿದೆ. ಸರ್ಕಾರ ಹಾಗೂ ಜನರು ಕೊಟ್ಟ ಸಹಕಾರದಿಂದಾಗಿ ಮುಕ್ತವಾಗಿ ಕೆಲಸ ಮಾಡಲು ಸಾಧ್ಯವಾಗಿದೆ ಎಂದು ಹೇಳಿದರು. ಕೆಎಸ್​ಆರ್​ಪಿ ಎಡಿಜಿಪಿ ಅಲೋಕ್​ಕುಮಾರ್, ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಹೆಚ್ಚುವರಿ ಪೊಲೀಸ್ ಆಯುಕ್ತರಾದ ಮುರುಗನ್, ಕೆ.ಉಮೇಶ್ ಹಾಗೂ ಎಲ್ಲ ವಿಭಾಗದ ಡಿಸಿಪಿ ಮತ್ತು ಎಸಿಪಿ ಪಾಲ್ಗೊಂಡಿದ್ದರು.
ಗೌರವ ವಂದನೆ
ಹಿರಿಯ ಐಪಿಎಸ್ ಅಧಿಕಾರಿ ನೀಲಮಣಿ ಎನ್.ರಾಜು, ರಾಘವೇಂದ್ರ ಔರಾದ್ಕರ್ ಮತ್ತು ಎಂ.ಎನ್.ರೆಡ್ಡಿ ಅವರು 36 ವರ್ಷ ಸೇವೆ ಸಲ್ಲಿಸಿದ್ದಾರೆ. ಶುಕ್ರವಾರ (ಜ31) ಕರ್ತವ್ಯದ ಕೊನೆಯ ದಿನವಾಗಿತ್ತು. ಹಾಗಾಗಿ ಇಲಾಖೆ ವತಿಯಿಂದ ಬೆಳಗ್ಗೆ 8 ಗಂಟೆಯಲ್ಲಿ ಕೋರಮಂಗಲದ ಕೆಎಸ್​ಆರ್​ಪಿ ಕವಾಯತು ಮೈದಾನದಲ್ಲಿ ಸಿಎಆರ್, ಕೆಎಸ್​ಆರ್​ಪಿ ತುಕಡಿ, ಶ್ವಾನದಳ ಹಾಗೂ ಅಶ್ವದಳದ ಮೂಲಕ ಗೌರವ ವಂದನೆ ಸಲ್ಲಿಸಿ ಬೀಳ್ಕೊಡುಗೆ ನೀಡಲಾಯಿತು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − 4 =
Remember me
