ಬೆಂಗಳೂರು:ಹೋಂ ಗಾರ್ಡ್ ಜತೆ ಅನೈತಿಕ ಸಂಬಂಧ ಇಟ್ಟುಕೊಂಡು ಮಹಿಳಾ ಎಸ್​ಐಗೆ ಧಮ್ಕಿ ಹಾಕಿದ್ದ ಜೇಬುಗಳ್ಳನನ್ನು ವಿದ್ಯಾರಣ್ಯಪುರ ಪೊಲೀಸರು ಬಂಧಿಸಿದ್ದಾರೆ. ಕಮಲಾನಗರದ ನಿವಾಸಿ ಗೌರಿಬಿದನೂರು ಮೂಲದ ರಾಮಕೃಷ್ಣ (35) ಬಂಧಿತ.
ವಿದ್ಯಾರಣ್ಯಪುರ ಠಾಣೆಯಲ್ಲಿ ಕಾರ್ಯನಿರ್ವಹಿ ಸುತ್ತಿರುವ ಮಹಿಳಾ ಎಸ್​ಐಗೆ ಆರೋಪಿಯು ಅಶ್ಲೀಲ ಚಿತ್ರಗಳನ್ನು ಕಳುಹಿಸಿ ಧಮ್ಕಿ ಹಾಕಿದ್ದ. ಈ ಬಗ್ಗೆ ಎಸ್​ಐ ದೂರು ದಾಖಲಿಸಿದ್ದರು. ಪೊಲೀಸರು ಟವರ್ ಲೊಕೇಷನ್ ಮೂಲಕ ಗುರುವಾರ ಮಧ್ಯಾಹ್ನ ಆರೋಪಿಯನ್ನು ಬಂಧಿಸಲಾಗಿದೆ.
ಏನಿದು ಪ್ರಕರಣ?:ವಿದ್ಯಾರಣ್ಯಪುರ ಠಾಣೆಯಲ್ಲಿ ಹೋಂ ಗಾರ್ಡ್ ಆಗಿ ಕೆಲಸ ಮಾಡುತ್ತಿರುವ ಪುಟ್ಟಮ್ಮ ಎಂಬಾಕೆ ಜತೆ ಆರೋಪಿ ಅನೈತಿಕ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಕೆಲ ದಿನಗಳ ಹಿಂದೆ ಪುಟ್ಟಮ್ಮಗೆ ಸರಿಯಾಗಿ ಕೆಲಸ ಮಾಡುವಂತೆ ಎಸ್​ಐ ಸೂಚಿಸಿದ್ದರು. ಅದರಿಂದ ಆಕ್ರೋಶಗೊಂಡ ಪುಟ್ಟಮ್ಮ, ಪ್ರಿಯಕರನಿಗೆ ಈ ವಿಚಾರ ತಿಳಿಸಿದ್ದಳು. ಪುಟ್ಟಮ್ಮಳಿಂದ ಎಸ್​ಐ ಮೊಬೈಲ್ ನಂಬರ್ ಪಡೆದುಕೊಂಡ ಆರೋಪಿ, ಜ.7ರ ರಾತ್ರಿ 9.45ರಲ್ಲಿ ಎಸ್​ಐಗೆ ಕರೆ ಮಾಡಿ, ಅಶ್ಲೀಲವಾಗಿ ಮಾತಾಡಿದ್ದ. ಮೊಬೈಲ್ ನಂಬರ್ ಕೊಟ್ಟಿದ್ದು ಯಾರು ಎಂದು ಪ್ರಶ್ನಿಸಿದಾಗ, ಪುಟ್ಟಮ್ಮನ ಹೆಸರು ಹೇಳಿದ್ದ.
ಕೆಲ ಹೊತ್ತಿನ ಬಳಿಕ ಪುಟ್ಟಮ್ಮಳ ನಗ್ನ ಚಿತ್ರಗಳನ್ನು ಎಸ್​ಐ ಮೊಬೈಲ್​ಗೆ ಕಳುಹಿಸಿ, ಮತ್ತೆ ಕರೆ ಮಾಡಿ ಅಸಭ್ಯವಾಗಿ ಮಾತನಾಡಿದ್ದ. ಮರುದಿನ ಮಧ್ಯಾಹ್ನ 12 ಗಂಟೆಗೆ ತಾನು ಹೇಳಿದ ಜಾಗಕ್ಕೆ 1 ಲಕ್ಷ ರೂ. ತರಬೇಕು. ಇಲ್ಲದಿದ್ದರೆ ನಿಮ್ಮ ಬಗ್ಗೆ ಇಲ್ಲ-ಸಲ್ಲದ ಆರೋಪ ಹೊರಿಸುವುದಾಗಿ ಬೆದರಿಸಿದ್ದ. ಇದರಿಂದ ನೊಂದ ಎಸ್​ಐ ಈ ಬಗ್ಗೆ ದೂರು ನೀಡಿದ್ದರು.
ಜೈಲು ಪಾಲಾಗಿದ್ದ ಜೇಬುಗಳ್ಳ
ಆರೋಪಿ ರಾಮಕೃಷ್ಣ ಜೇಬುಗಳ್ಳತನ ಮಾಡಿ ಈ ಹಿಂದೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದ. ಈತ ಜೈಲಿನಲ್ಲಿದ್ದಾಗ ಹೋಂ ಗಾರ್ಡ್ ಆಗಿದ್ದ ಪುಟ್ಟಮ್ಮನ ಪರಿಚಯವಾಗಿತ್ತು. ಜೇಬುಗಳ್ಳತನ ನಡೆಸಲು ವಿಫಲವಾದಾಗ ಪುಟ್ಟಮ್ಮನಿಂದ ಖರ್ಚಿಗೆಂದು ಹಣ ತೆಗೆದುಕೊಳ್ಳುತ್ತಿದ್ದ. ಕೆಲ ವಕೀಲರೊಂದಿಗೆ ಆರೋಪಿ ಒಡನಾಟ ಹೊಂದಿದ್ದ. ಈ ಹಿಂದೆಯೂ ಪುಟ್ಟಮ್ಮ ಬಳಿ ಕೆಲಸ ಮಾಡಿಸಿದಾಗ ಆರೋಪಿ ಎಸ್​ಐಗೆ ಬೆದರಿಕೆ ಹಾಕಿದ್ದ. ಆದರೆ, ಇದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen + 14 =
Remember me
