– ಶಾರದೇಯ
ಧನುರ್ ಸಂಕ್ರಮಣ ಎಂದು ಕರೆಯಲ್ಪಡುವ ಧನುರ್ ರಾಶಿಯಲ್ಲಿ ಸೂರ್ಯನ ಪ್ರವೇಶದಿಂದ ಧನುರ್ಮಾಸದ ಆರಂಭವನ್ನು ಗುರುತಿಸಲಾಗಿದೆ. ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು ಸ್ನಾನಾದಿಗಳನ್ನು ಮುಗಿಸಿ, ನಕ್ಷತ್ರಗಳು ಇನ್ನೂ ಹೊಳೆಯುತ್ತಿರುವಾಗಲೇ ದೇಗುಲಗಳಲ್ಲಿ ಮುಂಜಾನೆಯ ಪೂಜೆಯು ಆರಂಭವಾಗಿ, ಸೂರ್ಯೋದಯಕ್ಕಿಂತ ಮುನ್ನವೇ ಮುಕ್ತಾಯವಾಗುವ ಮಾಸವಿದು. ಇದನ್ನು ಧನು ಪೂಜೆ ಎಂದೂ ಕರೆಯುತ್ತಾರೆ.
ಇದನ್ನೂ ಓದಿ:ಬಹುನಿರೀಕ್ಷಿತ ‘D50’ ಬಗ್ಗೆ ಹೊಸ ಅಪ್ಟೇಟ್​ ಕೊಟ್ಟ ನಟ ಧನುಷ್​!
ದೇವತೆಗಳಿಗೆ ದಕ್ಷಿಣಾಯಣವು ರಾತ್ರಿಯ ಕಾಲ, ಉತ್ತರಾಯಣವು ಹಗಲಿನ ಕಾಲ, ಆದರೆ ಈ ಧನುರ್ಮಾಸವು ರಾತ್ರಿ ಮತ್ತು ಹಗಲು ಎರಡೂ ಸೇರಿದ ಸಮಯವೆಂದೂ, ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು ಸ್ನಾನ ಮಾಡಿ ಯಾರು ಭಗವಂತನನ್ನು ಪೂಜಿಸಿ, ನೈವೇದ್ಯವನ್ನು ಅರ್ಪಿಸುತ್ತಾರೋ ಅವರ ಸಕಲ ಇಷ್ಟಾರ್ಥಗಳು ನೆರವೇರುತ್ತವೆ. ಧನುರ್ಮಾಸವನ್ನು ಕೆಲವು ಪ್ರದೇಶಗಳಲ್ಲಿ ಅಶುಭವೆಂದು ಪರಿಗಣಿಸಲಾಗುತ್ತದೆ. ಈ ಅವಧಿಯಲ್ಲಿ ಕೇವಲ ಪ್ರಾರ್ಥನೆಗಳು ಮತ್ತು ದೈವಿಕ ಕಾರ್ಯಗಳನ್ನು ನಿರ್ವಹಿಸಲಾಗುತ್ತದೆ. ಯಾವುದೇ ಶುಭ ಸಮಾರಂಭಗಳನ್ನು ಮಾಡುವುದಿಲ್ಲ.
ಧನುರ್ಮಾಸದ ಸಮಯದಲ್ಲಿ ಬರುವ ಏಕಾದಶಿಯನ್ನು ಅತ್ಯಂತ ಮಂಗಳಕರವೆಂದು ಭಾವಿಸಲಾಗಿದೆ. ವೈಕುಂಠ ಏಕಾದಶಿಯು ಮೋಕ್ಷ ದ್ವಾರಂ ಎಂದೇ ಹೆಸರುವಾಸಿಯಾಗಿದೆ. ಈ ದಿನ ದೇವಾಲಯದ ಏಳು ಬಾಗಿಲುಗಳನ್ನು ಹಾದುಹೋಗಲು ಭಕ್ತರಿಗೆ ಮೋಕ್ಷ ದೊರಕಿದಂತೆ ಎಂಬ ನಂಬಿಕೆ ಇದೆ.
ಇದನ್ನೂ ಓದಿ:ಆಹಾರ ಸಂಸ್ಕರಣಾ ಘಟಕಗಳ ಸ್ಥಾಪನೆಗೆ ಕ್ರಮವಹಿಸಿ; ಏಕ ಗವಾಕ್ಷಿ ಸಭೆಯಲ್ಲಿ ಜಿಲ್ಲಾಧಿಕಾರಿ ರಘುನಂದನ ಮೂರ್ತಿ ಸೂಚನೆ
ಮಾರ್ಗಶೀರ್ಷದಲ್ಲಿ ವಿಷ್ಣುಪೂಜೆ:ಮಾರ್ಗಶೀರ್ಷ ತಿಂಗಳಲ್ಲಿ ಸಾಧ್ಯವಾದಾಗಲೆಲ್ಲ, ಯಮುನಾ ನದಿಯಲ್ಲಿ ಒಮ್ಮೆ ಸ್ನಾನ ಮಾಡಿ, ಶ್ರೀಕೃಷ್ಣನನ್ನು ಆರಾಧಿಸಿದರೆ ಅದು ಲಪ್ರದ. ಈ ತಿಂಗಳಲ್ಲಿ ವಿಷ್ಣುವನ್ನು ಪೂಜಿಸಿ. ಅವರಿಗೆ ತುಳಸಿ ಎಲೆಗಳನ್ನು ತಪ್ಪದೇ ಅರ್ಪಿಸಿ. ನಂತರ ಅದನ್ನು ಪ್ರಸಾದ ಎಂದು ತೆಗೆದುಕೊಳ್ಳಿ. ಈ ಪವಿತ್ರ ಮಾರ್ಗಶೀರ್ಷ ತಿಂಗಳಲ್ಲಿ ಶಂಖವನ್ನು ಕೂಡ ಪೂಜಿಸಿ. ಅದರಲ್ಲಿ ಪವಿತ್ರ ನೀರನ್ನು ತುಂಬಿಸಿ ಅದರಿಂದ ಭಗವಾನ್ ಶ್ರೀಕೃಷ್ಣನಿಗೆ ಅಭಿಷೇಕ ಮಾಡಿ. ನಂತರ ಸಂಪೂರ್ಣ ಮನೆಯಲ್ಲಿ ಶಂಖದ ನೀರನ್ನು ಸಿಂಪಡಿಸಿ. ಇದು ಕುಟುಂಬದಲ್ಲಿ ಸಂತೋಷ ಮತ್ತು ಶಾಂತಿಗೆ ಕಾರಣವಾಗುತ್ತದೆ.
ನಾಮಸಂಕೀರ್ತನೆಗೆ ಶ್ರೇಷ್ಠವಾದ ಮಾಸ:ಧನುರ್ಮಾಸದ ಈ ಪರ್ವಕಾಲದಲ್ಲಿ ಬೆಳಗ್ಗೆ ಎದ್ದು ಶುಚಿರ್ಭೂತರಾಗಿ ಭಗವಂತನ ದೇವಸ್ಥಾನಗಳಿಗೆ, ಆಲಯಗಳಿಗೆ ಹೋಗುವ ಭಕ್ತರು ಅವನ ನಾಮಗುಣ ಕೀರ್ತನೆಯನ್ನ ವಿವಿಧ ತಾಳವಾದ್ಯಗಳೊಂದಿಗೆ ಮಾಡಿಕೊಂಡು ಹೋಗುವುದು ವಾಡಿಕೆ. ಹಿಂದೆ ನಗರ ಪ್ರದಕ್ಷಿಣೆ ಎನ್ನುವಂಥ ಹೆಸರಿನಿಂದ ಈ ನಾಮಸಂಕೀರ್ತನೆ ಪ್ರಚಲಿತವಿತ್ತು. ಶುಚಿರ್ಭೂತರಾದ ಊರಿನವರೆಲ್ಲ ಒಂದೆಡೆ ಸೇರಿ ತಾಳವಾದ್ಯಗಳೊಂದಿಗೆ ಭಗವಂತನ ನಾಮಗುಣ ಕೀರ್ತನೆಯನ್ನು ಹಾಡಿಕೊಂಡು ಊರಿಗೆ ಒಂದು ಪ್ರದಕ್ಷಿಣೆ ಬಂದು ನಂತರ ದೇವಸ್ಥಾನಕ್ಕೆ ಹೋಗುವುದು ರೂಢಿಯಾಗಿತ್ತು. ಆದರೆ ಇಂದು ಇದೆಲ್ಲ ಕಣ್ಮರೆಯಾಗುತ್ತಿದೆ. ನಮ್ಮದೇ ಕೆಲವು ಪರಿಚಿತ ಜನರೊಂದಿಗೆ ನಾವೆಲ್ಲ ಸೇರಿಕೊಂಡು ನಮಗೆ ತಿಳಿದ ದೇವರನಾಮಗಳನ್ನು ಹಾಡಿಕೊಂಡು ನಾವು ದೇವಸ್ಥಾನಕ್ಕೆ ಹೋಗುವುದು, ಭಗವಂತನ ಪ್ರೀತಿಗೆ ಪಾತ್ರರಾಗುವ ಒಂದು ದಿವ್ಯ ಮಾರ್ಗ.
ಧನುರ್ಮಾಸದ ಮಹತ್ವ: ಶ್ರೀವಿಲ್ಲೀಪುತ್ತೂರು ಎಂಬ ದಿವ್ಯಕ್ಷೇತ್ರದಲ್ಲಿ ವಿರಾಜಿಸಿ ಅನುಗ್ರಹಿಸುತ್ತಿರುವ ಶ್ರೀವಟಪತ್ರಶಾಯಿ ವಿಷ್ಣುವಿಗೆ ನಿತ್ಯ ಪುಷ್ಪಕೈಂಕರ್ಯ ಗೈಯುತ್ತಿದ್ದ ವಿಷ್ಣುಚಿತ್ತ ಎಂಬ ದಿವ್ಯಸೂರಿಗೆ ಭೂದೇವಿಯೆ ಶಿಶುವಾಗಿ ತುಳಸಿತೋಟದಲ್ಲಿ ದೊರೆಯುತ್ತಾಳೆ. ಗೋದಾದೇವಿ (ತಮಿಳಿನಲ್ಲಿ ‘ಆಂಡಾಳ್’) ಎಂದು ನಾಮಕರಣಗೊಂಡು, ಬಾಲ್ಯಾವಸ್ಥೆ ಯಿಂದ ಭಕ್ತಿಯಲ್ಲಿ ಬೆಳೆಯುತ್ತ ಪ್ರೌಢಾವಸ್ಥೆಗೆ ಬರುವಷ್ಟರಲ್ಲಿ ಶ್ರೀಮನ್ನಾರಾಯಣನಲ್ಲದೆ ಬೇರೆ ಯಾರನ್ನೂ ವರಿಸಲಾರೆ ಎಂದು ನಿರ್ಧರಿಸಿ ಭಗವಂತನನ್ನು ಪತಿಯಾಗಿ ಭಾವಿಸಿ ಮಧುರಭಾವವೆಂಬ ಭಕ್ತಿಯ ಅತ್ಯುನ್ನತ ಪ್ರಕಾರದಿಂದ ಸೇವಿಸಲಾರಂಭಿಸುವಳು.
ಇದನ್ನೂ ಓದಿ:ಗುಡ್ಡಗಾಡು ಶಾಲೆಗಳಿಗೆ ಧ್ವನಿವರ್ಧಕ ವಿತರಣೆ
ಹಿಂದೆ ವೃಂದಾವನದ ಗೋಪಿಕೆಯರೆಲ್ಲ ಕಾತ್ಯಾಯನಿ ವ್ರತವನ್ನಾಚರಿಸುವ ಮೂಲಕ ನಂದಗೋಪನ ಮಗನಾದ ಶ್ರೀಕೃಷ್ಣನನ್ನು ಪತಿಯಾಗಿ ದಯಪಾಲಿಸಬೇಕೆಂದು ಪರಾಶಕ್ತಿ ಕಾತ್ಯಾಯನಿಯನ್ನು ಪ್ರಾರ್ಥಿಸಿದ್ದರು. ಅಂತೆಯೇ ಗೋದಾದೇವಿಯೂ ಶ್ರೀಕೃಷ್ಣನೇ ತನಗೆ ಪತಿಯಾಗಬೇಕೆಂದು ಆ ಪುರುಷೋತ್ತಮ ಕೃಷ್ಣನನ್ನೇ ಪ್ರಾರ್ಥಿಸಿಕೊಂಡು ಈ ಮಾರ್ಗಶಿರ ಮಾಸದಲ್ಲಿ ತನ್ನ ಗೆಳತಿಯರೊಡನೆ ವ್ರತವನ್ನಾಚರಿಸಿ ಶ್ರೀಕೃಷ್ಣನ ಧೈರ್ಯ, ಮಾಧುರ್ಯ, ಗಾಂಭೀರ್ಯ, ಐಶ್ವರ್ಯಗಳನ್ನೊಳಗೊಂಡ ಅನಂತ ಕಲ್ಯಾಣಗುಣಗಳನ್ನು 30 ಪದ್ಯ (ಪಾಸುರಂ) ಗಳಲ್ಲಿ ಹಾಡುತ್ತಾಳೆ.
ಮುಂದೆ ಆಕೆಯ ಪ್ರಾರ್ಥನೆಯನ್ನು ಪೂರೈಸಲು ಶ್ರೀರಂಗಂನಲ್ಲಿ ಪ್ರಣವಾಕಾರ ವಿಮಾನದ ಕೆಳಗೆ ಶೇಷ ಪರ್ಯಂಕದಲ್ಲಿ ಶಯನಿಸುತ್ತಿರುವ ಶ್ರೀರಂಗನಾಥ ಸ್ವಾಮಿಯೇ ಗೋದಾದೇವಿಯನ್ನು ಮದುವೆಯಾಗುವರು. ಶ್ರೀವೈಷ್ಣವ ಸಂಪ್ರದಾಯದ 12 ದಿವ್ಯಸೂರಿ (ಆಳ್ವಾರರು) ಗಳಲ್ಲಿ ಗೋದಾದೇವಿಯೂ ಒಬ್ಬಳಾಗಿ ನಿಲ್ಲುತ್ತಾಳೆ. ಹೀಗೆ ಆಕೆ ಹಾಡಿದ 30 ಪದ್ಯಗಳೆ ‘ತಿರುಪ್ಪಾವೈ’ ಎಂಬ ದಿವ್ಯ ಪ್ರಬಂಧವಾಗಿದೆ.
ಇನ್ನೊಂದೆಡೆ ಅರಿಮರ್ದನ ಪಾಂಡ್ಯ ಎಂಬ ರಾಜನ ಮಂತ್ರಿಯಾಗಿದ್ದ ಶಿವಭಕ್ತಶಿರೋಮಣಿಯೋರ್ವರು ವ್ಯಾಪಾರದ ವಿಚಾರವಾಗಿ ರಾಜಧಾನಿಯಿಂದ ಹೊರಟಾಗ ವಟವೃಕ್ಷದ ಕೆಳಗೆ ನಾಲ್ಕು ಶಿಷ್ಯರಿಂದ ಆವೃತರಾಗಿ ಯೋಗಿರಾಜರೊಬ್ಬರು ಕುಳಿತದ್ದನ್ನು ಕಂಡು, ಆಕರ್ಷಿತರಾಗಿ ಬಳಿ ಸಾರಿ ಶರಣಾಗತರಾಗಲು, ಆ ಯೋಗಿರಾಜನು ಸನತ್ ಕುಮಾರರಿಂದ ಕೂಡಿದ ಸಾಕ್ಷಾತ್ ದಕ್ಷಿಣಾಮೂರ್ತಿ ಶಿವನಾಗಿ ದರ್ಶನ ನೀಡಿದನು.
ಇದನ್ನೂ ಓದಿ:ಜೇಬಲ್ಲಿ ಹಣವಿಲ್ಲದಿದ್ದರೂ ವಿಮಾನದಲ್ಲಿ ಪ್ರಯಾಣಿಸಬಹುದು! ವಿವರ ಇಲ್ಲಿದೆ..
ಜ್ಞಾನೋದಿತರಾದ ಮಂತ್ರಿಗಳು ಪಾಂಡಿತ್ಯ, ಪದವಿ, ರಾಜ್ಯವನ್ನೆಲ್ಲ ತ್ಯಜಿಸಿ, ಶಿವಕಿಂಕರರಾಗುವರು. ತಮ್ಮಲ್ಲಿದ್ದ ಹಣ-ಧನದಿಂದ ಶಿವಾಲಯಗಳನ್ನು ನಿರ್ಮಿಸಿ ಕುಂಭಾಭಿಷೇಕಗೈದರು. ತಮ್ಮ ವಾಕ್ ಸಂಪತ್ತಿನಿಂದ ಪರಮೇಶ್ವರನನ್ನು ಸ್ತುತಿಸಿದರು. ಮಾಣಿಕ್ಯದಂಥ ವಾಗ್ವೆ ಖರಿ ಹೊಂದಿದ್ದರಿಂದ ‘ಮಾಣಿಕ್ಯವಾಚಕರು’ ಎಂದು ಸಿದ್ಧರಾದರು, ಪ್ರಸಿದ್ಧರಾದರು.
ಶೈವಸಿದ್ಧಾಂತದ ಯತಿಪರಂಪರೆಯಲ್ಲಿ ಪ್ರಮಥರಾದರು. ಪರಮಪುರುಷನಾದ ಮಹಾದೇವ ಶಿವನನ್ನು ಪತಿಯಾಗಿ ನೆನೆದು, ತನ್ನನ್ನು ಸತಿಯಾಗಿ ಭಾವಿಸಿ, ಶೈವಸಿದ್ಧಾಂತದ ‘ನಾಯಕ-ನಾಯಕಿ’ ಎಂಬ ವಿರಳವಾದ ಭಕ್ತಿಯ ರೀತಿಯನ್ನು ಅನುಸರಿಸಿ, ‘ಶರಣ ಸತಿ-ಲಿಂಗ ಪತಿ’ ತತ್ವವನ್ನು ಎತ್ತಿ ಹಿಡಿದರು. ತಿರುವಣ್ಣಾಮಲೈ ಎಂಬ ಭವ್ಯವಾದ ಕ್ಷೇತ್ರದಲ್ಲಿ ಪ್ರಜ್ವಲಿಸುವ ಅರುಣಾಚಲೇಶ್ವರ ಸ್ವಾಮಿಯು ಅಗ್ನಿಲಿಂಗವೆಂಬ ಪ್ರತೀತಿ. ತಮ್ಮ ಮಾಧುರ್ಯ ಪೂರ್ಣ ಭಾವದಿಂದ ಮಹಾದೇವನ ವಿವಿಧ ಲೀಲಾವಿನೋದಗಳನ್ನು ಹಾಡಿ ಅರುಣಾಚಲೇಶ್ವರನನ್ನು ಸೇರಲು ತವಕಿಸುತ್ತಾರೆ.
ವ್ಯಾಕುಲತೆಯಿಂದ ಮೌನವಾದ ಶಬ್ದಗಳಲ್ಲಿ ಬಡಬಡಿಸುತ್ತಾರೆ. ಹೀಗೆ ಅವರು ಹಾಡಿದ 20 ಪದ್ಯಗಳೇ ‘ತಿರುವೆಂಬಾವೈ’ ಎಂದು ತಮಿಳುನಾಡಿನಲ್ಲಿ ವಿಖ್ಯಾತ. ಶಿವಭಕ್ತರು ಈ ಮಾಸದಲ್ಲಿ ತಿರುವೆಂಬಾವೈ ಮತ್ತು ಇವರೇ ರಚಿಸಿರುವ ಸುಪ್ರಭಾತವನ್ನು ಹಾಡಿ, ಒಟ್ಟು ಮೂವತ್ತು ಪದ್ಯಗಳ ಪಠಣ ಮಾಡುವುದರ ಮೂಲಕ ಜಗತ್ಪತಿಯಾದ ಶಂಕರನನ್ನು ಸೇರಲು ಪ್ರಯತ್ನಿಸುತ್ತಾರೆ. ಮಾಣಿಕ್ಯವಾಚಕರು ಶೈವಸಿದ್ಧಾಂತದ 63 ಶಿವಕಿಂಕರ (ನಾಯನ್ಮಾರ)ರಲ್ಲಿ ಅಗ್ರವಂದ್ಯರು.
ನಾವೇನು ಮಾಡಬಹುದು? (ಉಪಸಂಹಾರ):ಈ ಪವಿತ್ರವಾದ ಮಾರ್ಗಶೀರ್ಷ ಮಾಸದಲ್ಲಿ ಬೆಳಗ್ಗೆ ಬೇಗನೆ ಎದ್ದು, ಶುಚಿರ್ಭೂತರಾಗಿ, ಭಗವಂತನ ನಾಮಗುಣ ಕೀರ್ತನೆ ಮಾಡುತ್ತ, ದೇವಸ್ಥಾನಗಳಿಗೆ ಹೋಗಿ, ಅಲ್ಲಿ ಭಗವಂತನ ದಿವ್ಯದರ್ಶನ ಪಡೆದು ನಮ್ಮ ಜೀವನ ಸಾರ್ಥಕವಾಗಿಸಿಕೊಳ್ಳೋಣ.
‘ಯುವನಿಧಿ ಯೋಜನೆ’: ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳೇನು? ಇಲ್ಲಿದೆ ಉಪಯುಕ್ತ ಮಾಹಿತಿಯ ವಿಡಿಯೋ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − 6 =
Remember me
