ಬೆಂಗಳೂರು:ಮಾಜಿ ಮುಖ್ಯಮಂತ್ರಿ ದಿವಂಗತ ಧರ್ಮಸಿಂಗ್ ಸಂಬಂಧಿ ಸಿದ್ದಾರ್ಥ್ ಕೊಲೆ ಪ್ರಕರಣ ದಿನದಿಂದ ದಿನಕ್ಕೆ ರೋಚಕವಾಗುತ್ತಿದೆ. ಅಪಹರಿಸಿ ಕೊಲೆ ಮಾಡಿದ್ದಾರೆ ಎನ್ನಲಾದ ಆರೋಪಿಯೊಬ್ಬ ಆಂಧ್ರದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇನ್ನೊಬ್ಬ ಆರೋಪಿಯೂ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆಗೆ ಯತ್ನಿಸಿ ಅದೃಷ್ಟವಶಾತ್ ಬಚಾವಾಗಿದ್ದಾನೆ. ಕೇಸಿನಲ್ಲಿ ಸಂಬಂಧಿಕರೇ ಭಾಗಿಯಾಗಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸುತ್ತಿದ್ದಾರೆ.
ಇಂಜಿನಿಯರ್ ಶ್ಯಾಮ್‌ಸುಂದರ್ ರೆಡ್ಡಿ (28) ಆತ್ಮಹತ್ಯೆ ಮಾಡಿಕೊಂಡವ. ಈಗಾಗಲೇ ಬಂಧನಕ್ಕೆ ಒಳಗಾಗಿರುವ ವಿನೋದ್ ಕೂಡ ಪೊಲೀಸರಿಗೆ ಸಿಗುವ ಮುನ್ನ ತಿರುಪತಿ-ರೇಣಿಗುಂಟ ರೈಲ್ವೆ ಹಳಿಯಲ್ಲಿ ರೈಲಿಗೆ ಸಿಲುಕಿ ಆತ್ಮಹತ್ಯೆಗೆ ಯತ್ನಿಸಿದ್ದ. ಆದರೆ, ವೇಗವಾಗಿ ಬಂದ ರೈಲು ಡಿಕ್ಕಿ ಹೊಡೆದ ಪರಿಣಾಮ ವಿನೋದ್ ಹಳಿಯಿಂದ ಪಕ್ಕಕ್ಕೆ ಹಾರಿ ಬಿದ್ದಿದ್ದ. ವಿನೋದ್‌ನ ಕೈಗಳು ಮತ್ತು ಕಾಲುಗಳಿಗೆ ಗಾಯವಾಗಿದ್ದು, ಸ್ಥಳೀಯರು ವಿನೋದ್‌ನನ್ನು ಆಸ್ಪತ್ರೆಗೆ ದಾಖಲಿಸಿದ್ದರಿಂದ ಬದುಕುಳಿದಿದ್ದ.ಇದನ್ನೂ ಓದಿರಿಕೈ ಕೊಟ್ಟ ಪ್ರೇಯಸಿಯ ಬರ್ತ್​ ಡೇ ಪಾರ್ಟಿಗೆ ಮಾಜಿ ಲವರ್ ಎಂಟ್ರಿ! ನೋಡನೋಡುತ್ತಿದ್ದಂತೆ ನಡೆಯಿತು ದುರಂತ
ಜ.19ರಂದು ಸಿದ್ದಾರ್ಥ್ ಕಾಣೆಯಾಗಿ ಕೊಲೆಯಾದ ಪ್ರಕರಣದಲ್ಲಿ ಇವರಿಬ್ಬರ ಕೈವಾಡವಿರುವುದು ಗೊತ್ತಾಗಿತ್ತು. ಪೊಲೀಸರು ತಮ್ಮನ್ನು ಬಂಧಿಸಬಹುದು ಎಂಬ ಆತಂಕದಿಂದ ವಿನೋದ್ ಮತ್ತು ಶ್ಯಾಮ್‌ಸುಂದರ್ ಆತ್ಮಹತ್ಯೆಗೆ ಶರಣಾಗಲು ತೀರ್ಮಾನಿಸಿರುವ ಸಾಧ್ಯತೆ ಇದೆ. ಶ್ಯಾಮ್‌ಸುಂದರ್ 5 ದಿನಗಳ ಹಿಂದೆ ತನ್ನ ಶರ್ಟ್‌ನಿಂದಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತಿರುಪತಿ ಶ್ರೀನಿವಾಸಂ ತಾಳ್ಲಪಾಕ ಕೆರೆಯ ಬಳಿಯ ಮುಳ್ಳಿನ ಪೊದೆಯಲ್ಲಿ ಸೋಮವಾರ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಸ್ಥಳೀಯರ ಮಾಹಿತಿಗೆ ಮೇರೆಗೆ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿ ಬೆಂಗಳೂರಿನ ಪೊಲೀಸರಿಗೆ ಮಾಹಿತಿ ನೀಡಿದ್ದರು. ಶ್ಯಾಮ್ ಸುಂದರ್ ಜ.22ರಂದು ಫೋನ್ ಮಾಡಿ ಹಣಕಾಸಿನ ಸಮಸ್ಯೆ ಇರುವುದಾಗಿ ಹೇಳಿದ್ದ ಎಂದು ಆತನ ತಂದೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಶಾಮ್‌ಸುಂದರ್ ಯಾರು?: ತಿರುಪತಿಯ ಕಾರ್ಲಗುಂಟ ನಿವಾಸಿ ಚೆನ್ನಾರೆಡ್ಡಿ ಎಂಬುವರ ಮಗ ಶ್ಯಾಮ್‌ಸುಂದರ್ ರೆಡ್ಡಿ ಬಿ.ಟೆಕ್ ವ್ಯಾಸಂಗ ಮಾಡಿದ್ದ. 2014ರಲ್ಲಿ ಚೆನ್ನೈ ಮತ್ತು ಬೆಂಗಳೂರಿನ ಹಲವು ಕಂಪನಿಗಳಲ್ಲಿ ಕೆಲಸಕ್ಕಾಗಿ ಪ್ರಯತ್ನಿಸಿದ್ದ. ಆ ವೇಳೆ ತಿರುಪತಿಯ ಕಾರ್ಲಗುಂಟ ಮೂಲದ ಬೆಂಗಳೂರಿನಲ್ಲಿ ನೆಲೆಸಿದ್ದ ಸ್ನೇಹಿತ ವಿನೋದ್ ಜತೆ ಕೆಲವು ದಿನಗಳ ಕಾಲ ವಾಸಿಸುತ್ತಿದ್ದ.
ಹೂತಿಟ್ಟಿದ್ದ ಸಿದ್ದಾರ್ಥ್ ಶವ ಹೊರಕ್ಕೆ:ಆರೋಪಿ ವಿನೋದ್ ಮಾಹಿತಿ ಮೇರೆಗೆ ಅಮೃತಹಳ್ಳಿ ಠಾಣೆಯ ಪೊಲೀಸರು, ಸಿದ್ದಾರ್ಥ್ ಶವ ಪತ್ತೆ ಹಚ್ಚಲು ಆಂಧ್ರಪ್ರದೇಶಕ್ಕೆ ತೆರಳಿದ್ದರು. ಆಂಧ್ರ ಪ್ರದೇಶ ಮತ್ತು ಕರ್ನಾಟಕ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ನೆಲ್ಲೂರು ಜಿಲ್ಲೆಯ ರಾಪೂರು ಅರಣ್ಯ ಪ್ರದೇಶದಲ್ಲಿ ಹೂತು ಹಾಕಿದ್ದ ಸಿದ್ದಾರ್ಥ್‌ನ ಶವವನ್ನು ಸ್ಥಳೀಯ ತಹಶೀಲ್ದಾರ್ ಸಮ್ಮುಖದಲ್ಲಿ ಮಂಗಳವಾರ (ೆ.2) ಹೊರ ತೆಗೆದಿದ್ದಾರೆ. ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಸಿದ್ದಾರ್ಥ್ ಪಾಲಕರ ಆಕ್ರಂದನ ಮುಗಿಲು ಮುಟ್ಟುವಂತಿತ್ತು.
ಸಂಬಂಧಿಕರಿಂದ ಹತ್ಯೆ ಶಂಕೆ: ತಂದೆ ದೇವೇಂದರ್ ಸಿಂಗ್ ಮೊದಲ ಪತ್ನಿಯ ಮಗ ಸಿದ್ದಾರ್ಥ್. ಆಸ್ತಿ ಆಸೆಗೆ ಬಿದ್ದು ದೇವೆಂದರ್ ಸಿಂಗ್ ಸಂಬಂಧಿಯೊಬ್ಬರು ಹತ್ಯೆ ಮಾಡಿಸಿರುವ ಶಂಕೆ ವ್ಯಕ್ತವಾಗಿದೆ. ಈ ಸಂಬಂಧಿಗೆ ವಿನೋದ್ ಪರಿಚಯವಿತ್ತು ಎನ್ನಲಾಗುತ್ತಿದ್ದು, ಪೊಲೀಸರು ಎಲ್ಲ ಆಯಾಮಗಳಲ್ಲೂ ತನಿಖೆ ನಡೆಸುತ್ತಿದ್ದಾರೆ. ಕೊಲೆ ಪ್ರಕರಣದಲ್ಲಿ ಹಲವು ಆರೋಪಿಗಳು ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದ್ದು, ಇವರ ಪತ್ತೆಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ವೈಯಕ್ತಿಕ ದ್ವೇಷ ಮತ್ತು ಹಣಕಾಸಿನ ವಿಚಾರಕ್ಕೆ ಸಿದ್ದಾರ್ಥ್ ಕೊಲೆ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.
ಅಮೆರಿಕದಲ್ಲಿ ವ್ಯಾಸಂಗ ಮಾಡಿದ್ದ ಸಿದ್ದಾರ್ಥ್ ಅಮೃತಹಳ್ಳಿಯ ದಾಸರಹಳ್ಳಿಯ ಅಪಾರ್ಟ್‌ಮೆಂಟ್‌ವೊಂದರಲ್ಲಿ ಒಬ್ಬರೇ ವಾಸವಾಗಿದ್ದರು. ಜ.19 ರಂದು ತಂದೆ ದೇವೇಂದರ್ ಸಿಂಗ್ ಕೊನೆಯ ಬಾರಿ ಮಾಡಿದ ಮೆಸೇಜ್ನಲ್ಲಿ ಸ್ನೇಹಿತರನ್ನು ಭೇಟಿಯಾಗಲು ಅಮೆರಿಕಕ್ಕೆ ಹೋಗುತ್ತಿರುವುದಾಗಿ ವಾಟ್ಸ್‌ಆ್ಯಪ್ ಮಾಡಿದ್ದರು. ಅನಂತರ ಅವರ ಮೊಬೈಲ್ ಸ್ವಿಚ್ಾ ಆಗಿತ್ತು. ಎರಡು ಮೂರು ದಿನಗಳ ಕಳೆದರೂ ಮಗ ಅಮೆರಿಕಕ್ಕೆ ಹೋಗದೆ, ಮನೆಗೂ ಬಾರದೇ ನಾಪತ್ತೆಯಾಗಿರುವುದನ್ನು ಕಂಡ ಪಾಲಕರು ಜ. 25ರಂದು ಅಮೃತಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಕಾಣೆಯಾಗಿದ್ದ ಗಂಡ ಸಿಗೋದಕ್ಕೆ ಸಹಾಯವಾಗಿದ್ದು ಆ ವೈರಲ್​ ವಿಡಿಯೋ! ಅಧಿಕಾರಿಗಳ ತಪ್ಪಿನಿಂದಲೇ ಈ ಕುಟುಂಬಕ್ಕೆ ಒಳ್ಳೆಯದಾಯ್ತು!

ರಾಜಕಾರಣಿಗಳ ಸಂಬಂಧಿಕರಿಗೆ, 60 ವರ್ಷ ಮೇಲ್ಪಟ್ಟವರಿಗೆ ಬಿಜೆಪಿ ಟಿಕೆಟ್​ ಇಲ್ಲ!

ಪ್ರಧಾನಿ ಮೋದಿಯ ತಮ್ಮ ಎಂದು ಕಂಡಕಂಡವರ ಬಳಿ ದುಡ್ಡು ವಸೂಲಿ ಮಾಡುತ್ತಿದ್ದವ ಅರೆಸ್ಟ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 1 =
Remember me
