ಧಾರವಾಡ:ಖ್ಯಾತ ಸಾಹಿತಿ ಎಸ್.ಎಲ್​. ಭೈರಪ್ಪ ಅವರ ಅಭಿಮಾನಿಗಳಿಗೆ ಬೇಸರದ ಸುದ್ದಿ ಇದು. “ಇನ್ನು ಮುಂದೆ ನಾನು ಬರೆಯುವುದಿಲ್ಲ” ಎಂದು ಖ್ಯಾತ ಸಾಹಿತಿ ತಿಳಿಸಿದ್ದಾರೆ.
ಧಾರವಾಡದಲ್ಲಿ ಸಾಹಿತ್ಯ ಸಂವಾದದಲ್ಲಿ ಮಾತನಾಡಿದ ಎಸ್.ಎಲ್​. ಭೈರಪ್ಪ ಅವರು, “ಇನ್ನು ನನಗೆ ವಿಷಯಗಳೇ ಹೊಳೆಯುತ್ತಿಲ್ಲ. ಹಾಗೆ ಹೊಳೆದರೂ ಅದು ಮಹತ್ವದ್ದು ಎಂದು ಎನಿಸುತ್ತಿಲ್ಲ” ಅಂದು ಅಭಿಪ್ರಾಯ ಪಟ್ಟಿದ್ದಾರೆ.
ದ.ರಾ. ಬೇಂದ್ರೆ ಅವರ 125ನೇ ಜನ್ಮ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು, “ಉತ್ತರಕಾಂಡ ಬರೆದ ಮೇಲೆ ಏನೂ ಹೊಳೆದಿಲ್ಲ. ಎಷ್ಟೋ ಹೊಳೆದಿದೆ. ಆದರೆ ಅದಕ್ಕೆ ಯಾವ ಮಾಸ್​ ಇರೋದಿಲ್ಲ. ನಾಲ್ಕು ವರ್ಷ ಆಯ್ತು, ನನ್ನ ಬರವಣಿಗೆ ಕಾಲ ಮುಗೀತು ಎಂದನಿಸಿದೆ” ಎಂದರು.
“ಹೇಳಕ್ಕಾಗಲ್ಲ, ಮುಂಚೆಯೂ ಹೀಗೆ ಅನಿಸಿದೆ. ಆದರೆ ಆಮೇಲೆ ವಿಚಾರಗಳ ಹೊಳೆದಿವೆ. ಆದರೆ ನನ್ನ ವಯಸ್ಸು ಲೆಕ್ಕ ಹಾಕಿದರೆ, ಬರೆಯೋದು ಕಷ್ಟ ಎನಿಸುತ್ತೆ” ಎಂದು ಅವರು ಹೇಳಿದರು.(ದಿಗ್ವಿಜಯ ನ್ಯೂಸ್​)

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:3 × 4 =
Remember me
