ಬೆಳ್ತಂಗಡಿ:ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ ಡಿ.8ರಿಂದ 12ರವರೆಗೆ ಲಕ್ಷದೀಪೋತ್ಸವ ನಡೆಯಲಿದೆ. ಡಿ.11ರಂದು 91ನೇ ವರ್ಷದ ಸರ್ವಧರ್ಮ ಸಮ್ಮೇಳನ ನಡೆಯಲಿದ್ದು, 12ರಂದು ಸಾಹಿತ್ಯ ಸಮ್ಮೇಳನ ನಡೆಯಲಿದೆ.
ಡಿ.8ರ ಬೆಳಗ್ಗೆ 10.30ಕ್ಕೆ ಪುತ್ತೂರು ಸಹಾಯಕ ಆಯುಕ್ತ ಗಿರೀಶ್ ನಂದನ್ ಎಂ. ವಸ್ತುಪ್ರದರ್ಶನ ಉದ್ಘಾಟಿಸುವರು. ಸಂಜೆ 6.30ರಿಂದ 7.30ರವರೆಗೆ ಧರ್ಮಸ್ಥಳದ ಪ್ರಸೀದಾ ರಾವ್ ಮತ್ತು ಬಳಗದವರಿಂದ ಭಕ್ತಿಗಾನಾಮೃತ, ರಾತ್ರಿ 7.30ರಿಂದ ಶಿವಮೊಗ್ಗದ ಶ್ರೀಕಾಂತ ಮತ್ತು ತಂಡದವರಿಂದ ಸುಗಮ ಸಂಗೀತ, 8.30ರಿಂದ ಶ್ರೀಕಾಂತ ಮತ್ತು ತಂಡದವರಿಂದ ಕೂಚುಪುಡಿ ನೃತ್ಯ, 9.30ರಿಂದ 10.30ರವರೆಗೆ ಪಂಜ ಶ್ರೀ ಶಾರ ದಾಂಬಾ ಯಕ್ಷಗಾನ ಕಲಾ ಸೇವಾ ಟ್ರಸ್ಟ್ ಸದಸ್ಯರಿಂದ ಯಕ್ಷಗಾನ ನಡೆಯಲಿದೆ. ಡಿ.9ರ ಸಂಜೆ 6ರಿಂದ ಯುವ ಕಲಾಭಾರತಿ ತಂಡದಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ, ರಾತ್ರಿ 7ರಿಂದ 8ರವರೆಗೆ ಅಘರ್Â ಬೆಂಗಳೂರು ನಿರ್ದೇಶನದಲ್ಲಿ ಭರತನಾಟ್ಯ, 8ರಿಂದ 9ರವರೆಗೆ ಮಂಗಳೂರು ಕೊಟ್ಟಾರದ ಭರತಾಂಜಲಿ ತಂಡದಿಂದ ಭರತನಾಟ್ಯ, 9ರಿಂದ 10ರವರೆಗೆ ನಾಟ್ಯನಿಲಯಂ ಬಾಲಕೃಷ್ಣ ಮಂಜೇಶ್ವರ ಅವರಿಂದ ನೃತ್ಯ ಸಿಂಚನ ನಡೆಯಲಿದೆ.
ಡಿ.10ರ ರಾತ್ರಿ 7ರಿಂದ ಅಮೃತವರ್ಷಿಣಿ ಸಭಾಭವನದಲ್ಲಿ ಲಲಿತಕಲಾ ಗೋಷ್ಠಿ, ಗಾನನೃತ್ಯ ವೈವಿಧ್ಯ ಗುರುಕಿರಣ್ ನೈಟ್ ನಡೆಯಲಿದ್ದು, ಸಂಗೀತ ನಿರ್ದೇಶಕ ಗುರುಕಿರಣ್, ಅನುರಾಧಾ ಭಟ್, ಇಂದು ನಾಗರಾಜ್, ಸಂತೋಷ್ ವೆಂಕಿ ಮೊದಲಾದ ಗಾಯಕರು ಭಾಗವಹಿಸಲಿದ್ದಾರೆ. ಸಂಜೆ 5ರಿಂದ 5.45ರವರೆಗೆ ಡಾ.ಶ್ರುತಿ ಕಾಂತಾಜೆ ಅವರಿಂದ ಭಕ್ತಿ ಸಂಗೀತ, ಸಂಜೆ 5.45ರಿಂದ 6.45ರವರೆಗೆ ಬೆಂಗಳೂರಿನ ಡಾ.ರಕ್ಷಾ ಕಾರ್ತಿಕ್ ಮತ್ತು ತಂಡದಿಂದ ಭರತನಾಟ್ಯ, 6.45ರಿಂದ 7.45ರವರೆಗೆ ಬೆಂಗಳೂರಿನ ಕನ್ನಡ ಕಲಾಲಯ ಸಾಂಸ್ಕೃತಿಕ ವೇದಿಕೆಯಿಂದ ‘ಶಿವನಾದ’ ಕಾರ್ಯಕ್ರಮ ನಡೆಯಲಿದೆ.
ಸರ್ವಧರ್ಮ ಸಮ್ಮೇಳನದಲ್ಲಿ ಉಪನ್ಯಾಸ:ಡಿ.11ರ ಸಂಜೆ 5ರಿಂದ ಅಮೃತವರ್ಷಿಣಿ ಸಭಾಭವನದಲ್ಲಿ ಸರ್ವಧರ್ಮ ಸಮ್ಮೇಳನ ನಡೆಯಲಿದ್ದು, ಅಕಾಡೆಮಿ ಫಾರ್ ಕ್ರಿಯೇಟಿವ್ ಟೀಚಿಂಗ್ ಸ್ಥಾಪಕ ಡಾ.ಗುರುರಾಜ ಕರ್ಜಗಿ ಉದ್ಘಾಟಿಸುವರು. ಸಿದ್ಧಗಂಗಾ ಮಠದ ಪೀಠಾಧಿಪತಿ ಶ್ರೀ ಸಿದ್ದಲಿಂಗ ಸ್ವಾಮಿ ಅಧ್ಯಕ್ಷತೆ ವಹಿಸುವರು. ಸುಪ್ರೀಂಕೋರ್ಟ್ ವಕೀಲ, ವಾಗ್ಮಿ ಡಾ.ಎಂ.ಆರ್.ವೆಂಕಟೇಶ್, ಬೆಂಗಳೂರು ವಿಭು ಅಕಾಡೆಮಿ ಸಂಸ್ಥಾಪಕ ಮುಖ್ಯಸ್ಥೆ ಡಾ.ವಿ.ಬಿ.ಆರತಿ, ವಾಗ್ಮಿ ಮಹಮ್ಮದ್ ಗೌಸ ರ.ಹವಾಲ್ದಾರ ವಿಜಯಪುರ ಉಪನ್ಯಾಸ ನೀಡುವರು.
ರಾತ್ರಿ 8.30ರಿಂದ ಸಾಂಸ್ಕೃತಿಕ ಕಾರ್ಯಕ್ರದಲ್ಲಿ ಅನುರಾಧಾ ವಿಕ್ರಾಂತ್ ಮತ್ತು ದೃಷ್ಟಿ ನೃತ್ಯ ಮೇಳ ನೃತ್ಯಸಮರ್ಪಣಂ ನಡೆಯಲಿದೆ. ಸಂಜೆ 5.30ರಿಂದ ಅನಂತನಾರಾಯಣ ಭಾಗವತರ್ ಕುಂಭಕೋಣಂ ಅವರಿಂದ ನಾಮಸಂಕೀರ್ತನಂ, 6.30ರಿಂದ 7.30ರವರೆಗೆ ಪದಯಾನ ತಂಡದವರಿಂದ ಭರತನಾಟ್ಯ, 7.30ರಿಂದ 8.30ರವರೆಗೆ ವಿಭಾ ಶ್ರೀನಿವಾಸ್ ನಾಯಕ್ ಅವರಿಂದ ಭಕ್ತಿ ಸಂಗೀತ, 8.30ರಿಂದ 9.30ರವರೆಗೆ ಪೆರ್ಲ ಶಿವ ನಾಟ್ಯಾಂಜಲಿ ನೃತ್ಯ ವಿದ್ಯಾಲಯ ಕೇಂದ್ರದಿಂದ ನಾಟ್ಯಮಂಜರಿ, 9.30ರಿಂದ 11ರವರೆಗೆ ಬೆಂಗಳೂರಿನ ಶ್ರೀಕೃಷ್ಣ ಕಲಾಲಯ ತಂಡದಿಂದ ಭರತನಾಟ್ಯ ನಡೆಯಲಿದೆ.
12ರಂದು ಸಾಹಿತ್ಯ ಸಮ್ಮೇಳನ:ಡಿ.12ರ ಸಂಜೆ 5ರಿಂದ ಅಮೃತವರ್ಷಿಣಿ ಸಭಾಭವನದಲ್ಲಿ ಸಾಹಿತ್ಯ ಸಮ್ಮೇಳನ ನಡೆಯಲಿದ್ದು, ಇಸ್ರೋ ಅಧ್ಯಕ್ಷ ಡಾ.ಎಸ್.ಸೋಮನಾಥ್ ಉದ್ಘಾಟಿಸುವರು. ವಿದ್ವಾಂಸ ಮತ್ತು ಗಮಕಿ ಡಾ.ಎ.ವಿ.ಪ್ರಸನ್ನ ಬೆಂಗಳೂರು ಅಧ್ಯಕ್ಷತೆ ವಹಿಸುವರು. ವಿಶ್ರಾಂತ ಪ್ರಾಧ್ಯಾಪಕ ಮತ್ತು ಬರಹಗಾರ ಶ್ರೀಪಾದ ಶೆಟ್ಟಿ ಹೊನ್ನಾವರ, ರಂಗಕರ್ವಿು ಪ್ರಕಾಶ್ ಬೆಳವಾಡಿ, ಲೇಖಕ, ಪ್ರಾಧ್ಯಾಪಕ ಡಾ.ಅಜಕ್ಕಳ ಗಿರೀಶ್ ಭಟ್ ಬಂಟ್ವಾಳ ಉಪನ್ಯಾಸ ನೀಡಲಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮದ ಪ್ರಯುಕ್ತ ರಾತ್ರಿ 8.30ರಿಂದ ವಿದುಷಿ ಅರ್ಚನಾ ಪುಣ್ಯೇಷ್ ಮತ್ತು ವಿದ್ಯಾರ್ಥಿಗಳಿಂದ ಶಿವಾರ್ಪಣಂ ಮತ್ತು ಹರಿವಿಲಾಸ ಕಾರ್ಯಕ್ರಮ ನಡೆಯಲಿದೆ. ಸಂಜೆ 5.30ರಿಂದ 6.30ರವರೆಗೆ ಮಂಗಳೂರಿನ ಸವಿಲಾವನಂ ನೃತ್ಯ ಕಲಾಕ್ಷೇತ್ರದಿಂದ ನೃತ್ಯ, 6.30ರಿಂದ 7.30ರವರೆಗೆ ಮೈಸೂರು ಶ್ರೀ ದುರ್ಗಾ ನೃತ್ಯ ಅಕಾಡೆಮಿಯಿಂದ ನೃತ್ಯಾರ್ಪಣಂ, 7.30ರಿಂದ 8.15ರವರೆಗೆ ಧಾರವಾಡದ ಕವನಾ ವೆಂ.ಹೆಗಡೆ ಅವರಿಂದ ಕಥಕ್ ನೃತ್ಯ, 8.15ರಿಂದ 9.15ರವರೆಗೆ ಸರಸ್ವತಿ ನಾಟ್ಯಾಲಯದಿಂದ ಶಿವ ರೂಪಕ, 9.15ರಿಂದ 11.30ರವರೆಗೆ ಪುತ್ತೂರಿನ ಪುನೀತ್ ಆರ್ಕೆಸ್ಟ್ರಾದಿಂದ ಸಂಗೀತ ರಸಮಂಜರಿ ನಡೆಯಲಿದೆ.
ಧಾರ್ವಿುಕ ಕಾರ್ಯಕ್ರಮ:ಧಾರ್ವಿುಕ ಕಾರ್ಯಕ್ರಮದ ಪ್ರಯುಕ್ತ ಡಿ.8ರ ರಾತ್ರಿ 9ರಿಂದ ಹೊಸಕಟ್ಟೆ ಉತ್ಸವ, 9ರಂದು ಕೆರೆಕಟ್ಟೆ ಉತ್ಸವ, 10ರಂದು ಲಲಿತೋದ್ಯಾನ ಉತ್ಸವ, 11ರಂದು ಕಂಚಿಮಾರುಕಟ್ಟೆ ಉತ್ಸವ, 12ರಂದು ಗೌರಿಮಾರುಕಟ್ಟೆ ಉತ್ಸವ, 13ರಂದು ಶ್ರೀ ಚಂದ್ರನಾಥ ಸ್ವಾಮಿಯ ಸಮವಸರಣ ಪೂಜೆ ನಡೆಯಲಿದೆ.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:6 − 4 =
Remember me
