ಬೆಳ್ತಂಗಡಿ:ಕೇಂದ್ರದ ಗ್ರಾಮೀಣಾಭಿವೃದ್ಧಿ ಕಲ್ಪನೆಗೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯೇ ಪ್ರೇರಣೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಹೇಳಿದರು.
ಧರ್ಮಸ್ಥಳದಲ್ಲಿ ಶುಕ್ರವಾರ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಧರ್ಮಶ್ರೀ(ವಿಸõತ) ನೂತನ ಕಟ್ಟಡ ಉದ್ಘಾಟನೆ, ಧಾರ್ವಿುಕ ಶ್ರದ್ಧಾ ಕೇಂದ್ರಗಳ ಸ್ವಚ್ಛತಾ ಅಭಿಯಾನ ಅಂಗವಾಗಿ 20 ಸಾವಿರ ತ್ಯಾಜ್ಯ ಸಂಗ್ರಹಣಾ ಬುಟ್ಟಿ ವಿತರಣೆ, ಧರ್ಮಸ್ಥಳ ವಲಯದ ಒಕ್ಕೂಟ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದರು.
ನನಗೂ, ನಮ್ಮ ಸರ್ಕಾರಕ್ಕೂ ಮಾರ್ಗದರ್ಶಕರಾಗಿ ಕೆಲಸ ಮಾಡುತ್ತಿರುವವರು ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ. ಸರ್ಕಾರ ಯೋಜನೆ ರೂಪಿಸಿದರೂ, ಅದನ್ನು ಅನುಷ್ಠಾನಕ್ಕೆ ತಂದು ಜನರಿಗೆ ತಲುಪಿಸುವಲ್ಲಿ ಧರ್ಮಸ್ಥಳದ ಯೋಜನೆಗಳೇ ಪ್ರೇರಣೆ. ಗ್ರಾಮೀಣ ಪ್ರದೇಶಗಳಲ್ಲಿ ಹೊಸ ಸಾಮರಸ್ಯ ಬೆಳೆಸಿದ್ದು ಧ.ಗ್ರಾ.ಯೋಜನೆ. ಇಲ್ಲಿನ ಯೋಜನೆಗಳ ವ್ಯವಸ್ಥೆ ಆಡಳಿತದ ವ್ಯವಸ್ಥೆಯನ್ನು ಸರಿಪಡಿಸಲು ಮಾರ್ಗದರ್ಶಕವಾಗಿದೆ ಎಂದರು.
ತ್ಯಾಜ್ಯ ಸಂಗ್ರಹಣ ಬುಟ್ಟಿ ವಿತರಿಸಿ ಮಾತನಾಡಿದ ಮೀನುಗಾರಿಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ, ರಾಜ್ಯದ ಸಾವಿರ ದೇವಸ್ಥಾನಗಳಲ್ಲಿ ಕಸ ವಿಲೇ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಖಾಸಗಿ ಮತ್ತು ಸರ್ಕಾರಿ ದೇವಸ್ಥಾನಗಳನ್ನು ಸ್ವಚ್ಛವಾಗಿಡುವುದು ಸರ್ಕಾರದ ಉದ್ದೇಶ. ಸಾಮೂಹಿಕ ವಿವಾಹ ಯೋಜನೆ ಜಾರಿಯಾಗಿದ್ದು, ಒಂದು ಜೋಡಿ ವಿವಾಹಕ್ಕೆ 55 ಸಾವಿರ ರೂ. ಖರ್ಚು ಅಂದಾಜಿಸಲಾಗಿದೆ. ಎಲ್ಲ ಕಾರ್ಯಕ್ರಮಕ್ಕೆ ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನವೇ ಕಾರಣ. ಅವರು ಕಾರ್ಯಕ್ರಮಕ್ಕೆ ಬಂದು ವಧು-ವರರನ್ನು ಆಶೀರ್ವದಿಸಬೇಕು ಎಂದು ಕೋರಿದರು.
ಒಕ್ಕೂಟದ ಪದಗ್ರಹಣ ಮಾಡಿ ಅಭಿನಂದನೆ ಸಲ್ಲಿಸಿ ಮಾತನಾಡಿದ ಶಾಸಕ ಹರೀಶ್ ಪೂಂಜಾ, ದೇಶ ಮತ್ತು ಜಗತ್ತಿಗೆ ಮಾದರಿಯಾದ ಜನಸಾಮಾನ್ಯರ ಬದುಕನ್ನು ರೂಪಿಸುವ ಧ.ಗ್ರಾ. ಯೋಜನೆ ಇನ್ನಷ್ಟು ವಿಸ್ತರಿಸಲಿ ಎಂದು ಆಶಿಸಿದರು.
ಜ್ಞಾನವಿಕಾಸ ಕಾರ್ಯಕ್ರಮದ ಅಧ್ಯಕ್ಷೆ ಹೇಮಾವತಿ ವಿ.ಹೆಗ್ಗಡೆ, ಡಿ.ಹರ್ಷೆಂದ್ರ ಕುಮಾರ್, ಧ.ಗ್ರಾ.ಯೋ. ಟ್ರಸ್ಟಿ ಸಂಪತ್ ಸಾಮ್ರಾಜ್ಯ, ತಾಪಂ ಸದಸ್ಯೆ ಧನಲಕ್ಷ್ಮೀ ಜನಾರ್ದನ್, ಧರ್ಮಸ್ಥಳ ಗ್ರಾಪಂ ಅಧ್ಯಕ್ಷ ಚಂದನ್​ಪ್ರಸಾದ್ ಕಾಮತ್ ಉಪಸ್ಥಿತರಿದ್ದರು. ಧ.ಗ್ರಾ.ಯೋ. ಸದಸ್ಯರಿಂದ ನಿರ್ವಣಗೊಂಡ ‘ಕಾನೂರಾಯಣ’ ಚಲನಚಿತ್ರದಿಂದ ಉಳಿಕೆಯಾದ 25ಲಕ್ಷ ರೂ.ವನ್ನು ರಾಷ್ಟ್ರೀಯ ರಕ್ಷಣಾ ನಿಧಿಗೆ ಡಿ.ವಿ. ಸದಾನಂದ ಗೌಡರ ಮೂಲಕ ಹಸ್ತಾಂತರಿಸಲಾಯಿತು. ಡಿ.ಹರ್ಷೆಂದ್ರ ಕುಮಾರ್, ಕಟ್ಟಡದ ವಾಸ್ತುಶಿಲ್ಪಿ ಶ್ರೀಬ್ರಹ್ಮೆ ಹಾಗೂ ಗೋಪಾಲ್ ಮೆನನ್ ಅವರನ್ನು ಗೌರವಿಸಲಾಯಿತು.
ತಾಲೂಕು ಯೋಜನಾಧಿಕಾರಿ ಜಯಕರ್ ಶೆಟ್ಟಿ ವಂದಿಸಿದರು. ಯೋಜನಾ ಪ್ರಾದೇಶಿಕ ನಿರ್ದೇಶಕ ಶ್ರೀಹರಿ, ನಿರ್ದೇಶಕಿ ಮಮತಾ ರಾವ್ ಕಾರ್ಯಕ್ರಮ ನಿರೂಪಿಸಿದರು.
ಧ.ಗ್ರಾ.ಯೋಜನೆ ಬೆಳೆದಿರುವುದರಿಂದ ನೂತನ ಕಟ್ಟಡದ ಅಗತ್ಯತೆಯನ್ನು ಮನಗಂಡ ಡಾ.ವೀರೇಂದ್ರ ಹೆಗ್ಗಡೆ ಅವರು ಕಟ್ಟಡ ಮಂಜೂರುಗೊಳಿಸಿದ್ದಾರೆ. ರಾಜ್ಯದಲ್ಲಿ 6 ಪ್ರಾದೇಶಿಕ ಕಚೇರಿ, 34 ಜಿಲ್ಲಾ ಕಚೇರಿ, 216 ತಾಲೂಕು ಕಚೇರಿ ಹೊಂದಿದ್ದು, 19,500 ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಕೇಂದ್ರ ಕಚೇರಿಯಲ್ಲಿ 30 ವಿಭಾಗವಿದ್ದು, 400 ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
| ಡಾ.ಎಲ್.ಎಚ್.ಮಂಜುನಾಥ್​ಕಾರ್ಯನಿರ್ವಾಹಕ ನಿರ್ದೇಶಕ, ಧ.ಗ್ರಾ.ಯೋಜನೆ
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಸಾಮಾಜಿಕ, ವ್ಯಕ್ತಿಯ, ಕೃಷಿಯ ಪರಿವರ್ತನೆಯಾಗಿದೆ. 15 ಸಾವಿರ ಸೇವಾ ಪ್ರತಿನಿಧಿಗಳು ಗ್ರಾಮದಲ್ಲಿ ಯೋಜನೆಯ ಕಾರ್ಯರೂಪವನ್ನು ಜನರಿಗೆ ಮುಟ್ಟಿಸಿದ್ದಾರೆ. ಇದರಿಂದ ಯೋಜನೆ ಯಶಸ್ವಿಯಾಗಿದೆ ಎಂದು ಅಧ್ಯಕ್ಷತೆ ವಹಿಸಿದ್ದ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದರು. ಪರಿವರ್ತನೆ ಎಂಬುದು ಪ್ರಪಂಚದಲ್ಲಿ ಕಷ್ಟದ ಕೆಲಸ. ಹಳ್ಳಿ ಹಳ್ಳಿಗಳಲ್ಲಿ ಶೌಚಗೃಹದ ಮಾಹಿತಿ ನೀಡಿದ್ದರಿಂದ ಈಗ ಪರಿವರ್ತನೆ ಸಾಧ್ಯವಾಗಿದೆ. ಪರಿವರ್ತನೆ ಸಾಧಿಸಿದರೆ ಫಲಿತಾಂಶ ಶ್ರೇಷ್ಠ ಎಂಬುದಕ್ಕೆ ಯೋಜನೆ ಉದಾಹರಣೆ. ಸ್ವಚ್ಛತೆಯಲ್ಲೂ ದೊಡ್ಡ ಪರಿವರ್ತನೆಯಾಗಿದೆ. ಇದಕ್ಕಾಗಿ ರಾಷ್ಟ್ರಪತಿಗಳು ಮಾರ್ಗದರ್ಶನ ಪಡೆಯಲು ಆಹ್ವಾನಿಸಿದ್ದಾರೆ. ಶ್ರದ್ಧಾ ಕೇಂದ್ರಗಳ ಸ್ವಚ್ಛತಾ ಕಾರ್ಯ ಮುಂದುವರಿಯಲಿದೆ ಎಂದರು.
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:11 + three =
Remember me
