ಬೆಂಗಳೂರು:ಮಣ್ಣು ಪರೀಕ್ಷೆ ಮೂಲಕ ಫಲವತ್ತತೆಗೆ ಅನುಗುಣವಾಗಿ ಅಗತ್ಯ ರಸಗೊಬ್ಬರಗಳನ್ನು ಹಾಕಿದರೆ ಮಾತ್ರ ಮಣ್ಣಿನ ಆರೋಗ್ಯ ಹಾಗೂ ಸುಸ್ಥಿತ ಇಳುವರಿ ಪಡೆಯಲು ಸಾಧ್ಯವಾಗುತ್ತದೆ. ತಂತ್ರಜ್ಞಾನ ಯುಗದಲ್ಲಿ ರೈತರು ಮಣ್ಣು ಪರೀಕ್ಷೆ ಮಾಡಿಸದೇ, ಮೊಬೈಲ್​ ಆ್ಯಪ್​ ಬಳಸಿಕೊಂಡು ಮಣ್ಣಿನ ಫಲವತ್ತತೆ ಹಾಗೂ ಬೆಳೆಗೆ ಅಗತ್ಯವಿರುವ ಪೋಷಕಾಂಶಗಳನ್ನು ತಿಳಿದುಕೊಳ್ಳಬಹುದಾಗಿದೆ.
ಹೌದು, ಅಖಿಲ ಭಾರತ ಸುಸಂಟಿತ ಮಣ್ಣು ಪರೀಕ್ಷೆ ಮತ್ತು ಬೆಳೆ ಸ್ಪಂದನೆ ಸಹಕಾರದೊಂದಿಗೆ ಬೆಂಗಳೂರು ಕೃಷಿ ವಿಶ್ವವಿದ್ಯಾಲಯ “ಧರ್ತಿಮಿತ್ರ’ ಎಂಬ ವೆಬ್​ಸೈಟ್​ ಮತ್ತು ಮೊಬೈಲ್​ ಆ್ಯಪ್​ನ್ನು ಅಭಿವೃದ್ಧಿ ಪಡಿಸಿದೆ. ಜಿಕೆವಿಕೆ ಆವರಣದಲ್ಲಿ ನಡೆಯುತ್ತಿರುವ ಕೃಷಿ ಮೇಳದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಆ್ಯಪ್​ನ್ನು ಶುಕ್ರವಾರ ಲೋಕಾರ್ಪಣೆಗೊಳಿಸಿದ್ದಾರೆ.
‘ಧರ್ತಿಮಿತ್ರ’ ಆ್ಯಪ್​ನ್ನು ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ, ಹಾಸನ, ಮೈಸೂರು, ಚಾಮರಾಜನಗರ, ಮಂಡ್ಯ ಮತ್ತು ರಾಮನಗರ ಜಿಲ್ಲೆಗಳಿಗೆ ಅಭಿವೃದ್ಧಿಪಡಿಸಲಾಗಿದೆ. ಆ್ಯಪ್​ನಲ್ಲಿ ಸ್ಥಳದ ಭೌಗೋಳಿಕ ನಿರ್ದೇಶಾಂಕಗಳು ಅಥವಾ ರೈತರ ಹೊಲದ ಸರ್ವೆ ಸಂಖ್ಯೆಯನ್ನು ನಮೂದಿಸಿದಾಗ ಮಣ್ಣಿನಲ್ಲಿರುವ ಪೋಷಕಾಂಶಗಳ ಮಾಹಿತಿ, ಎಸ್​.ಟಿ.ಸಿ.ಆರ್​ ಆಧಾರಿತ ರಸಗೊಬ್ಬರಗಳ ಶಿಫಾರಸ್ಸಿನ ಪ್ರಮಾಣ ಹಾಗೂ ಸಮೀಕರಣಗಳಿಲ್ಲದ ಬೆಳೆಗಳಿಗೆ ಕಡಿಮೆ&ಮಧ್ಯಮ&ಹೆಚ್ಚು (ಎಲ್​.ಎಮ್​.ಎಚ್​) ವಿಧಾನದಲ್ಲಿ ರಸಗೊಬ್ಬರಗಳ ಶಿಫಾರಸ್ಸಿನ ಪ್ರಮಾಣದ ವರದಿ ಲಭ್ಯವಾಗುತ್ತದೆ.
ಭೌಗೋಳಿಕ ನಿರ್ದೇಶಾಂಕಗಳ ಆಧಾರದ ಮೇಲೆ ಪ್ರತಿ 100 ಮೀ. ಅಂತರದಲ್ಲಿ ಜಿಲ್ಲೆಗಳಾದ್ಯಂತ ವಿಭಿನ್ನ ಮಣ್ಣು ಪರೀಕ್ಷೆ ವರದಿಯನ್ನು ಆ್ಯಪ್​ ಸಹಾಯದಿಂದ ಪಡೆಯಬಹುದು. ಇದರಿಂದಾಗಿ ಹಲವು ಬಾರಿ ಮಣ್ಣಿನ ಮಾದರಿ ಸಂಗ್ರಹಣೆ ಮತ್ತು ವಿಶ್ಲೇಷಣೆ ಮಾಡಬೇಕಾಗುವ ಸಮಯ, ವೆಚ್ಚವನ್ನು ಉಳಿಸಬಹುದು. ಆ್ಯಪ್​ನ ತಂತ್ರಾಂಶದಲ್ಲಿ ಮಣ್ಣು ಪರೀಕ್ಷೆ ಆಧಾರದ ಮೇಲೆ ರಸಗೊಬ್ಬರಗಳ ಶಿಫಾರಸ್ಸನ್ನು ಮಾಡಲಾಗಿದ್ದು ಸುಸ್ಥಿರ ಕೃಷಿ ಮತ್ತು ಮಣ್ಣಿನ ಫಲವತ್ತತೆಯ ಮಾಹಿತಿ ಸಿಗುತ್ತದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 4 =
Remember me
