ಧಾರವಾಡ:ಧಾರವಾಡದಲ್ಲಿ ಇದೀಗ ವಿದ್ಯುತ್ ಬಿಲ್ ಗದ್ದಲ ಶುರುವಾಗಿದ್ದು, ಬಿಲ್ ತಿದ್ದುಪಡಿ ಮಾಡಿಸಲು ನೂಕುನುಗ್ಗಲು ಶುರುವಾಗಿದೆ.
ಹಳೇ ಬಾಕಿಯನ್ನು ಪಾವತಿಸಿದ್ದರೂ ಮತ್ತೊಮ್ಮೆ ಬಿಲ್‌ನಲ್ಲಿ ಅರಿಯರ್ಸ್​ ಎಂದು ಸೇರ್ಪಡೆಗೊಂಡಿದೆ. ಇದರಿಂದಾಗಿ ಧಾರವಾಡದ ಹೆಸ್ಕಾಂ ಕಚೇರಿಯಲ್ಲಿ ಗದ್ದಲ ಉಂಟಾಗಿದ್ದು ಹೆಚ್ಚು ಬಿಲ್ ಬಂದಿದೆ ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನೂ ಓದಿ:ವಿದ್ಯುತ್ ಬಿಲ್ ಭಾಗಶಃ ಪಾವತಿ ಅವಕಾಶ: ಎಇಇಗೆ ಲಿಖಿತ ಮನವಿ ಸಲ್ಲಿಸಿದರೆ ಸೌಲಭ್ಯ; ಎಲ್ಲ ಬಗೆಯ ಗ್ರಾಹಕರಿಗೆ ನಿಯಮ ಅನ್ವಯ
ಧಾರವಾಡ ವಿದ್ಯಾಗಿರಿಯಲ್ಲಿರುವ ಹೆಸ್ಕಾಂ ಉಪವಿಭಾಗ ಕಚೇರಿಗೆ ಬಿಲ್ ತಿದ್ದುಪಡಿ ಮಾಡಿಸಲು ಹೆಸ್ಕಾಂ ಕಚೇರಿಗೆ ಜನರು ತಂಡೋಪ ತಂಡವಾಗಿ ಆಗಮಿಸುತ್ತಿದ್ದಾರೆ. ಈ ಸಂದರ್ಭ ಜನರು ಅಧಿಕಾರಿಗಳೊಂದಿಗೆ ವಾಗ್ವಾದಕ್ಕೂ ಇಳಿದಿದ್ದು ಹೆಸ್ಕಾಂ ವಿರುದ್ಧ ಕಿಡಿಕಾರುತ್ತಿದ್ದಾರೆ. ಈ ಕುರಿತಾಗಿ ಅಧಿಕಾರಿಗಳು ಸಮಜಾಯಿಷಿ ನೀಡಿದ್ದು ಸಾಫ್ಟ್‌ವೇರ್ ಸಮಸ್ಯೆಯಿಂದ ಹಳೇ ಬಾಕಿ ಮತ್ತೆ ಬಂದಿದೆ ಎಂದು ಹೇಳಿದ್ದಾರೆ.
ಸಾಫ್ಟ್​ವೇರ್​ ಸಮಸ್ಯೆಯಿಂದಾಗಿ ಬಿಲ್​ನಲ್ಲಿ ದೋಷ ಬಂದಿದ್ದು ಅದನ್ನು ತಿದ್ದುಪಡಿ ಮಾಡಿಸಲು ಜನರು ಹೆಸ್ಕಾಂ ಕಚೇರಿಗೆ ಬರುತ್ತಿದ್ದಾರೆ. ಆದರೆ ನಗರದ ಎಲ್ಲ ಜನರ ಬಿಲ್ ಒಂದೇ ಕಡೆ ತಿದ್ದುಪಡಿ ಮಾಡಲಾಗುತ್ತಿದೆ. ಈ ನಡುವೆ ಕಚೇರಿಯಲ್ಲಿ ಹೆಚ್ಚಿನ ಕೌಂಟರ್​ ಇರದ ಕಾರಣ, ಜನದಟ್ಟಣೆ ಉಂಟಾಗುತ್ತಿದ್ದು ಜನರು ತೊಂದರೆಗೆ ಈಡಾಗಿದ್ದಾರೆ.
ಇದನ್ನೂ ಓದಿ:ವಿದ್ಯುತ್ ಬಿಲ್ ಪಾವತಿಗೆ ಜನರ ಹಿಂದೇಟು
ಇದೀಗ ಜನರು ಹೆಸ್ಕಾಂ ವಿರುದ್ಧ ಕಿಡಿಕಾರುತ್ತಿದ್ದು, “ಇವರು ಬೇಕಾಬಿಟ್ಟಿಯಾಗಿ ಬಿಲ್ ಕೊಡುತ್ತಿದ್ದಾರೆ. ಅದನ್ನು ತಿದ್ದುಪಡಿ ಮಾಡಿಸಲು ಓಡಾಡಿಸುತ್ತಿದ್ದಾರೆ. ಕಳೆದ ತಿಂಗಳು ತುಂಬಿದ ಹಣವೂ ಬಿಲ್​ಗೆ ಪುನಃ ಅರಿಯರ್ಸ್ ಎಂದು ಸೇರ್ಪಡೆಯಾಗಿದೆ. ಇದರಿಂದ ಮತ್ತೊಮ್ಮೆ ವಿದ್ಯುತ್ ಬಿಲ್ ದುಪ್ಪಟ್ಟಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven − 6 =
Remember me
